About the Author

ಡಾ. ಪ್ರದೀಪ ಕೆಂಚನೂರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ವೃತ್ತಿಯಲ್ಲಿ ಉಪನ್ಯಾಸಕರು. ಚರಿತ್ರೆ , ಸಿನಿಮಾ, ಸಂಸ್ಕೃತಿ ಅಧ್ಯಯನ ಇವರ ಆಸಕ್ತಿ ಕ್ಷೇತ್ರ. ಮಂಗಳೂರು ವಿಶ್ವವಿದ್ಯಾಲಯದಿಂದ (ಚರಿತ್ರೆ) ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬೈಂದೂರಿನ  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರು. ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ ವಿಷಯವಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿರುವ ಅವರು ಪುಣೆಯ ’ಫಿಲ್ಮ್ ಆಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದಿಂದ ಫಿಲ್ಮ್ ಅಪ್ರಿಸಿಯೇಶನ್ ಕೋರ್ಸ್‌ ಪೂರ್ಣಗೊಳಿಸಿದ್ದಾರೆ.  ಇವರ 50 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: ಋತ್ವಿಕ್ ಘಟಕ್: ಜೀವನ ಪರಿಚಯ, ಕಿಮ್-ಕಿ-ಡುಕ್ ಸಿನಿಮಾಗಳು, ಕ್ರಿಸ್ಟಾಫ್ ಕ್ರೀಸ್ಸೋವಸ್ಕಿ ಸಿನಿಮಾ ಜಗತ್ತು, ಚರಿತ್ರವದು ಪ್ರಕಟವಲ್ಲ ನೋಡಾ! ಸಂಸಾರಿ ಬಳಸುವ ಹಾಗೂ ಚರಿತ್ರೆಯೆಂಬ ವರ್ತಮಾನ (ಸ್ವತಂತ್ರ ಕೃತಿಗಳು), ಹಿಂದೂ ಅಸ್ಮಿತೆಗಾಗಿ ಹುಡುಕಾಟ, ಭಾರತದ ರೈತ ಚಳುವಳಿ (ಅನುವಾದ ಕೃತಿಗಳು).

ಪ್ರದೀಪ ಕೆಂಚನೂರು