ಚರಿತ್ರವದು ಪ್ರಕಟವಲ್ಲ ನೋಡಾ! ಸಂಸಾರಿ ಬಳಸುವ

Author : ಪ್ರದೀಪ ಕೆಂಚನೂರು

Pages 202

₹ 225.00




Year of Publication: 2021
Published by: ಅನಿಕೇತನ ಪುಸ್ತಕ
Address: ಭವಾನಿ ಹೀರೆಕುಡ್ರು ಪೋಸ್ಟ್, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, 576230
Phone: 9964022582

Synopsys

ಲೇಖಕ ಡಾ. ಪ್ರದೀಪ ಕೆಂಚನೂರು ಅವರ ’ಚರಿತ್ರವದು ಪ್ರಕಟವಲ್ಲ ನೋಡಾ! ಸಂಸಾರಿ ಬಳಸುವ’ ಕೃತಿಯು ಸ್ವತಂತ್ರ ಭಾರತದ ಮುಖ್ಯವಾಹಿನಿಯ ಚರಿತ್ರಶಾಸ್ತ್ರ. ಈ ಕೃತಿಯ ಶೀರ್ಷಿಕೆ ಅಲ್ಲಮ ಪ್ರಭುವಿನ ವಚನದಿಂದ ಆಯ್ದ ಸಾಲಾಗಿದೆ. ಈ ಸಾಲಿಗೆ ಒಂದು ನೆಲೆಯ ಚರಿತ್ರೆಯ ಆಧುನಿಕೋತ್ತರ ಧ್ವನಿಯಿದೆ. ಗತವನ್ನು ಯಾರು ಇಡಿಯಾಗಿ ಕಟ್ಟಲಾಗುವುದಿಲ್ಲ. ಗತದ ಪ್ರತಿನಿಧಿಕರಣವು ಕೇವಲ ಆಂಶಿಕವಾಗಿ ನಿರೂಪಣೆಯಾಗುವುದು ಎಂದು ಚರಿತ್ರೆ ಸಹಜವಾಗಿ ತನ್ನಿಂತಾನೇ ಪ್ರಕಟವಾಗುವುದಿಲ್ಲ ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಕೊಸಾಂಬಿ, ಶರ್ಮಾ, ಥಾಪರ್, ಸತೀಶ್ ಚಂದ್ರ ಮತ್ತು ಬಿಪನ್ ಚಂದ್ರ ಅವರು ಸ್ವತಂತ್ರ ಭಾರತದ ಅತ್ಯಂತ ವೈವಿಧ್ಯದ ವೈಚಾರಿಕ ಮುಖ್ಯವಾಹಿನಿ ಚರಿತ್ರಶಾಸ್ತ್ರದ ಪ್ರತಿನಿಧಿಗಳು ಮತ್ತು ಮೊದಲ ತಲೆಮಾರಿನ ಪ್ರತೀಕವಾಗಿದ್ದು, ಇಂತಹ ತಲೆಮಾರು ಇಡೀ ಭಾರತದ ಮೂಲೆ ಮೂಲೆಯಲ್ಲಿದ್ದಾರೆ. ಲೇಖಕ ಆದ್ಯ ತಲೆಮಾರು ಕನ್ನಡಕ್ಕೆ ಪರಿಚಯವಾಗಬೇಕು ಎನ್ನುವ ರೀತಿಯಲ್ಲಿ ಆಲೋಚಿಸಿದ ಪರಿ ಇಲ್ಲಿ ಭಿನ್ನವಾಗಿ ಮೂಡಿದೆ.

About the Author

ಪ್ರದೀಪ ಕೆಂಚನೂರು

ಡಾ. ಪ್ರದೀಪ ಕೆಂಚನೂರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ವೃತ್ತಿಯಲ್ಲಿ ಉಪನ್ಯಾಸಕರು. ಚರಿತ್ರೆ , ಸಿನಿಮಾ, ಸಂಸ್ಕೃತಿ ಅಧ್ಯಯನ ಇವರ ಆಸಕ್ತಿ ಕ್ಷೇತ್ರ. ಮಂಗಳೂರು ವಿಶ್ವವಿದ್ಯಾಲಯದಿಂದ (ಚರಿತ್ರೆ) ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬೈಂದೂರಿನ  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರು. ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ ವಿಷಯವಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿರುವ ಅವರು ಪುಣೆಯ ’ಫಿಲ್ಮ್ ಆಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದಿಂದ ಫಿಲ್ಮ್ ಅಪ್ರಿಸಿಯೇಶನ್ ಕೋರ್ಸ್‌ ಪೂರ್ಣಗೊಳಿಸಿದ್ದಾರೆ.  ಇವರ 50 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಋತ್ವಿಕ್ ಘಟಕ್: ಜೀವನ ...

READ MORE

Related Books