About the Author

ಕವಿರುದ್ರ ಕಾವ್ಯ ನಾಮಾಂಕಿತ ಆರ್.ಸಿ. ಭೂಸನೂರಮಠ (ರಾಜಶೇಖರ ಭೂಸನೂರಮಠ) ಅವರು ಧಾರವಾಡ ಜಿಲ್ಲೆಯ ಕೌಜಲಗಿಯವರು. ಹುಟ್ಟಿದ್ದು 1925 ಡಿಸೆಂಬರ್ 9 ರಂದು. ತಾಯಿ ಚನ್ನವೀರಮ್ಮ, ತಂದೆ ಚನ್ನವೀರಯ್ಯ. ಕೌಜಲಗಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ಹಿಂದಿ ವಿಶಾರದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ರಾಣೆಬೆನ್ನೂರು ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕರ್ನಾಟಕ ಕಾಲೇಜಿನಿಂದ ಪದವಿ ಪಡೆದ ನಂತರ ದೇಶದ ನಾನಾ ಭಾಗಗಳ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದರು. 

ಪ್ರಮುಖ ಕೃತಿಗಳು: ಜೆಂಗೊಡ, ಕನಸಿನ ರಾಣಿ' (ಕವನಸಂಕಲನ), ಭಕ್ತಿ ಭಂಡಾರಿ ಮತ್ತು ಇತರ ನಾಟಕಗಳು (ನಾಟಕ) ಮುಂತಾದವು. ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲೂ ಕೃತಿಗಳನ್ನು ರಚಿಸಿದ್ದಾರೆ.

ಪ್ರಶಸ್ತಿ-ಗೌರವಗಳು: ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಮಧ್ಯಪ್ರದೇಶ ಸರ್ಕಾರದ ಮಾಧವರಾವ್ ಸಪ್ರೆ ಬಹುಮಾನ, ದಿನಕರ ದೇಸಾಯಿ ಪ್ರಶಸ್ತಿ ಮುಂತಾದ ಗೌರವ- ಸಂದಿವೆ. ಭಕ್ತಿ ಭಂಡಾರಿ -ಹಿಂದಿ ಏಕಾಂಕ ನಾಟಕವು ಕರ್ನಾಟಕ ವಿಶ್ವವಿದ್ಯಾಲಯದ ಪಿ.ಯು. ತರಗತಿಗಳಿಗೆ ಪಠ್ಯ ಪುಸ್ತಕವಾಗಿತ್ತು. 2006 ಜುಲೈ 5ರಂದು ಭೂಸನೂರಮಠ ಅವರು ನಿಧನರಾದರು. 

ಆರ್.ಸಿ. ಭೂಸನೂರಮಠ

(09 Dec 1925-05 Jul 2006)