About the Author

ರೋಸಿ ಡಿ'ಸೋಜಾ ಕನ್ನಡ ಭಾಷೆಯಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕವಿ ಮತ್ತು ಅನುವಾದಕಿ. ಮಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು, ಈ ಹಿಂದೆ ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಾಪಕಿಯಾಗಿ ಮತ್ತು ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸರಕಾರೇತರ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. 

ಮಣ್ಣ ಬಿಸುಪು ಇವರ ಕವನ ಸಂಕಲನ, ಅರಿವಿನ ಆಡುಂಬೋಲ, ಸ್ವರ್ಗಕ್ಕೆ ಮೂರೇ ಮೈಲಿ! ಇವರ ಅನುವಾದಿತ ಕೃತಿಗಳು. ಇದೀಗ ʻನೇಗಿಲ ಗೆರೆಗಳುʼ ಕೃತಿಯ ಅನುವಾದಕರು.

ರೋಸಿ ಡಿ’ಸೋಜಾ