ಮಣ್ಣ ಬಿಸುಪು

Author : ರೋಸಿ ಡಿ’ಸೋಜಾ

Pages 56

₹ 30.00
Published by: ಸಂಚಯ ಪ್ರಕಾಶನ
Address: ಬೆಂಗಳೂರು

Synopsys

‘ಮಣ್ಣ ಬಿಸುಪು’ ಕೃತಿಯು ರೋಸಿ ಡಿ’ ಸೋಜಾ ಅವರ ಕವನಸಂಕಲನವಾಗಿದೆ. ಈ ಕೃತಿಯು 34 ಪುಟ್ಟ ಕವನಗಳ ಸಂಕಲನವಾಗಿದ್ದು, ಮಾರ್ಕ್ವೆಜ್’ನ ಒಂದು ಪಾಬ್ಲೊ ನೆರಡೂನ ಮೂರು ಕವನಗಳನ್ನು ಆಧಾರಿಸಿಕೊಂಡು ಈ ಕೃತಿಯು ರಚಿತಗೊಂಡಿರುತ್ತದೆ. ನಾನು ಕಪ್ಪು ಕೂದಲಿನ ರಾಜಕುಮಾರಿ/ ತುಟಿಯಿಟ್ಟು ಚುಂಬಿಸಿದಲ್ಲೆಲ್ಲಾ ಹಸಿರು ಚಿಮ್ಮಿಸಿದವಳು. ಹೀಗೆಯೇ ಅವಳು ಆಪ್ತವಾಗಿ, ಚುಟುಕಾಗಿ ಪ್ರತಿಮೆ-ರೂಪಕಗಳ ಮೂಲಕ ಹಾಡಲು ಯತ್ನಿಸುವ ಇಲ್ಲಿನ ಕವಿತೆಗಳು ಹೊಸ ಜನಾಂಗದ ಬಗ್ಗೆ ಭರವಸೆ ತಾಳುವಂತಿದೆ.

About the Author

ರೋಸಿ ಡಿ’ಸೋಜಾ

ರೋಸಿ ಡಿ'ಸೋಜಾ ಕನ್ನಡ ಭಾಷೆಯಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕವಿ ಮತ್ತು ಅನುವಾದಕಿ. ಮಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು, ಈ ಹಿಂದೆ ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಾಪಕಿಯಾಗಿ ಮತ್ತು ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸರಕಾರೇತರ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.  ಮಣ್ಣ ಬಿಸುಪು ಇವರ ಕವನ ಸಂಕಲನ, ಅರಿವಿನ ಆಡುಂಬೋಲ, ಸ್ವರ್ಗಕ್ಕೆ ಮೂರೇ ಮೈಲಿ! ಇವರ ಅನುವಾದಿತ ಕೃತಿಗಳು. ಇದೀಗ ʻನೇಗಿಲ ಗೆರೆಗಳುʼ ಕೃತಿಯ ಅನುವಾದಕರು. ...

READ MORE

Related Books