About the Author

ಡಾ. ಕೆ. ಸದಾಶಿವ ಅವರು ಮೈಸೂರು ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿ.ವಿ.ಯಿಂದ ಹಾಗೂ  ಮೈಸೂರು ರಾಜ್ಯದಲ್ಲಿ ಸಾಮಾಜಿಕ ಶಾಸನ (1881-1947) - ಈ ವಿಷಯವಾಗಿ ಪಿಎಚ್ ಡಿ  ಪದವೀಧರರು. ಆಧುನಿಕ ಮೈಸೂರು ಇತಿಹಾಸ ಹಾಗೂ ಕರ್ನಾಟಕ ದಲಿತರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ವಿಶೇಷ ಅಧ್ಯಯನಾಸಕ್ತರು. 

ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ದಿ. ಮಿಥಿಕ್ ಸೊಸೈಟಿ ಸಂಸ್ಥೆಯ ಸದಸ್ಯರು, ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಕರ್ನಾಟಕ ಇತಿಹಾಸ ಅಕಾಡೆಮಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅಜೀವ ಸದಸ್ಯರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ 9 ಜನ ಹಾಗೂ 7 ಜನ ಸಂಶೋಧನಾ ವಿದ್ಯಾರ್ಥಿಗಳು ಕ್ರಮವಾಗಿ ಪಿಎಚ್ ಡಿ ಹಾಗೂ ಎಂಫಿಲ್ ಪಡೆದಿದ್ದಾರೆ. 

ಭಾರತದ ಇತಿಹಾಸ, ಭಾರತದ ಸ್ವಾತಂತ್ಯ್ರ ಇತಿಹಾಸ, ಆಧುನಿಕ ಯುರೋಪಿಯನ್ ಇತಿಹಾಸ, ಮಧ್ಯಕಾಲೀನ ಭಾರತದ ಇತಿಹಾಸ, ವಿಶ್ವ ಇತಿಹಾಸ, ಆಧುನಿಕ ಮೈಸೂರು, ಮೈಸೂರು ರಾಜ್ಯದ ಸಾಮಾಜಿಕ ಶಾಸನದ (1881-1947) ಇತಿಹಾಸ, ರಕ್ಷಣಾ ಸಚಿವರಾಗಿ ಬಾಬು ಜಗಜೀವನರಾಮ್, ದಕ್ಷಿಣ ಭಾರತದ ಮಾದಿಗರ ಐತಿಹಾಸಿಕ ಚಿತ್ರಣಗಳು, ಕರ್ನಾಟಕ ಇತಿಹಾಸ ಮತ್ತು ಸಾಂಸ್ಕೃತಿಕ ಒಳನೋಟಗಳು, ಕೃಷಿ ಮತ್ತು ಆರೋಗ್ಯ ಸಚಿವರಾಗಿ ಜಗಜೀವನರಾಮ್, ಕರ್ನಾಟಕ ಜನಮಾನಸದಲ್ಲಿ ಜಗಜೀವನರಾಮ್ ಹೀಗೆ 37ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸುಮಾರು 21ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, ತಿಹಾಸಕ್ಕೆ ಸಂಬಂಧಿಸಿದ ಜರ್ನಲ್ ಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಹತ್ತು ಹಲವು ಶಿಬಿರಗಳಲ್ಲಿ ಪಾಲ್ಗೊಂಡು ವಿಚಾರಗಳನ್ನು ಪ್ರತಿಪಾದಿಸಿದ್ದಾರೆ.

 

/

ಸದಾಶಿವ ಕೆ.