About the Author

ಸಮತಾ ಬಿ. ದೇಶಮಾನೆ, ಎಂ.ಎ.(ಸಮಾಜಶಾಸ್ತ್ರ), ಎಂ.ಎ.(ಇತಿಹಾಸ), ಪಿಎಚ್.ಡಿ. ಪತ್ರಿಕೋದ್ಯಮ ಹಾಗೂ ಜೈನಶಾಸ್ತ್ರದಲ್ಲಿ ಡಿಪ್ಲೊಮಾ ಪದವಿಗಳನ್ನು ಪಡೆದವರು. ಇವರು ಜನಿಸಿದ್ದು 1963 ಸೆಪ್ಟೆಂಬರ್‌ 23ರಂದು ಗಾಜಿಪುರ, ಗುಲಬರ್ಗಾ ಜಿಲ್ಲೆಯಲ್ಲಿ. ತಂದೆ  ಬಾಬುರಾವ್ ಎಸ್. ದೇಶಮಾನೆ, ತಾಯಿ- ರತ್ನಾ ದೇಶಮಾನೆ.

ಕೃತಿ : ಮಹಿಳೆ ಮತ್ತು ಸಮಾಜಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮಾಧ್ಯಮ, ಸಮಾಜ ಪರಿವರ್ತನೆಯ ಚಿಂತಕರು, ಸಮಾಜಶಾಸ್ತ್ರ ಮತ್ತು ಸಂಘಟನೆಗಳು, ಸಮಾಜಶಾಸ್ತ್ರ ಮತ್ತು ಮಹಿಳಾ ಚಳವಳಿಗಳು, ಸಮಾಜ ಮತ್ತು ಸಾಮಾಜಿಕ ಚಳವಳಿಗಳು ಡಾ. ಕೆ.ಎನ್. ವಿಜಯಲಕ್ಷ್ಮಿ (ಪರಿಚಯಾತ್ಮಕ ಕೃತಿ), ಅಂಬೇಡ್ಕರ್‌ ದೃಷ್ಟಿಯಲ್ಲಿ ಕಾರ್ಮಿಕರು ಮತ್ತು ಮಹಿಳೆ, ದಲಿತ ಮಹಿಳೆಯರ ಬದಲಾಗುತ್ತಿರುವ ಸ್ಥಾನಮಾನಗಳು (ಪಿಹೆಚ್.ಡಿ.) ಸಮಾಜಶಾಸ್ತ್ರಜ್ಞ ಅಂಬೇಡ್ಕರ್‌. ಕವನ ಸಂಕಲನ : “ಕಿಡಿ” ೧೯೯೩, ಕಾರಂಜಿ, ಮಕ್ಕಳಿಗಾಗಿ ನುಡಿಚಿತ್ರಗಳು-೧೦ ಪ್ರಕಟವಾಗಿದೆ.

ಉಜ್ವಲ ಯುವತಿ ಮಂಡಳಿಯ ಅಧ್ಯಕ್ಷರು, ಜಿಲ್ಲಾ ಬಂಡಾಯ ಸಂಘಟನೆಯ ಸಂಚಾಲಕರು, ಜಾಗೃತಿ ನೆರೆಹೊರೆ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು, ಬಾಂಬ್ ಸೆಫ್‌ನ ರಾಜ್ಯಸಂಚಾಲಕರು, ರತ್ನ ದೇಶಮಾನ್ಯ ಪ್ರಕಾಶನದ ಅಧ್ಯಕ್ಷರು, ದಕ್ಷಿಣ ಭಾರತದ ದಲಿತ ಮಹಿಳೆಯರ ದೌರ್ಜನ್ಯ ವಿಚಾರಣಾ ಸಮಿತಿಯ ಕರ್ನಾಟಕ ಪ್ರತಿನಿಧಿ ಹಾಗೂ ನ್ಯಾಯಾಧೀಶರಾಗಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ರಾಷ್ಟ್ರಪ್ರಶಸ್ತಿಗಾಗಿ ಕರ್ನಾಟಕದ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯಯುವ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಡಾ. ಬಾಬು ಜಗಜೀವನರಾಂ ಪ್ರಶಸ್ತಿ, ಇಂದಿರಾ ಗಾಂಧಿ ಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ, ಭಾರತಸೇವಾ ವಿಭೂಷಣ, ವಿರಾಂಜನಾ ಸಾವಿತ್ರಿಬಾಯಿ ಫೇಲೆ, ಡಾ. ಅಂಬೇಡ್ಕರ್‌ ರಾಷ್ಟ್ರೀಯ ಪ್ರಶಸ್ತಿ, ಶ್ರೀ ಬಾಳೇಕುಂದ್ರಿ ಪ್ರಶಸ್ತಿ, ಸಮಾಜರತ್ನ, ಕರ್ನಾಟಕ ಶ್ರೇಷ್ಠರತ್ನ, ಕುವೆಂಪುಶ್ರೀ ಪ್ರಶಸ್ತಿ ಇವರಿಗೆ ಸಂದಿದೆ.

ಸಮತಾ ಬಿ. ದೇಶಮಾನೆ