ಪಂಚಮ ಸಂಪುಟ 1

Author : ಸಮತಾ ಬಿ. ದೇಶಮಾನೆ

Pages 557

₹ 600.00




Phone: 9886407011

Synopsys

ಡಾ. ಸಮಿತಾ ಬಿ.ದೇಶಮಾನೆ ಕಲ್ಬುರ್ಗಿ ಅವರ ಕರ್ನಾಟಕ ದಲಿತ ಚಳುವಳಿಯ ಸಮಾಜಶಾಸ್ತ್ರೀಯ ವಿಶ್ಲೇಷಣೆ ಕೃತಿ ಪಂಚಮ ಸಂಪುಟ 1. 'ಶೂದ್ರ ಸಂಘಟನೆ ಮತ್ತು ವಚನಕಾತರು' ಎಂಬ ವಿಷಯದ ಬಗ್ಗೆ ವಿವೇಚನೆಗೆ ತೊಡಗುವ ಮುನ್ನ "ಶೂದ್ರ"ಎಂಬ ಪರಿಕಲ್ಪನೆ ನಮ್ಮ ಸಮಾಜದಲ್ಲಿ ಹೇಲೆ ಮೂಡಿಬಂತೆಂದು ತಿಳಿಯುವುದು ಅಗತ್ಯ. ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ 'ಶೂದ್ರ'. ಎನ್ನುವ ವರ್ಗ ಹಿಂದೂ ಧರ್ಮದಲ್ಲಿ ಬರುವ ವರ್ಣಾಶ್ರಮ ಧರ್ಮಗಳಲ್ಲಿ ಚಾತುರ್ವರ್ಣ್ಯಗಳಲ್ಲಿ ಒಂದು. ಇನ್ನಿತರ ಮೂರು ವರ್ಣಗಳೆಂದರೆ ರ್ಬಾಹದಮಣ, ಕ್ಷತ್ರಿಯ, ವೈಶ್ಯ, ಸೂದ್ರ, ಶ್ರೂದ್ರ ಈ ಚಾತುರ್ವಣಯಗಳಲ್ಲಿ ಕಡೆಯದು ಮತ್ತು ಕೀಳ್ತರಗತಿಗೆ ಸೇರಿದ್ದು. ಇವುಗಳಲ್ಲಿ ಬ್ರಹ್ಮಣವರ್ಣ ಪರಮ ಶ್ರೇಷ್ಠವಾದದ್ದು. ಬ್ರಾಹ್ಮಣರ ನಂತರ ನಂತರ ಬರುವ ಕ್ಷತ್ಇಯ, ವೈಶ್ಯ ಸಮಾಜದ ಇನ್ನಿತರ ಪ್ರಮುಖ ವರ್ಣಗಳು. ಶೂದ್ರರು ಈ ಮೂರೂ ಮೇಲ್ವರ್ಗದವರ ಸೇವೆಯನ್ನು ಮಾಡಿಕೊಂಡಿರಬೇಕೆಂಬ ನಿಯಮಕ್ಕೊಳಪಟ್ಟಿದ್ದರು. ಈರೀತಿಯ ಸಾಮಾಜಿಕ ಅಸಮಾನತೆ ಬರೀ ಭಾವನಾತ್ಮಕವಾಗಿರದೆ ಕಾನೂನು ಬದ್ಧವಾದ ರಚನೆಯಾಗಿ ಘೋಷಿಸಲ್ಪಟ್ಟಿತ್ತು.

About the Author

ಸಮತಾ ಬಿ. ದೇಶಮಾನೆ

ಸಮತಾ ಬಿ. ದೇಶಮಾನೆ, ಎಂ.ಎ.(ಸಮಾಜಶಾಸ್ತ್ರ), ಎಂ.ಎ.(ಇತಿಹಾಸ), ಪಿಎಚ್.ಡಿ. ಪತ್ರಿಕೋದ್ಯಮ ಹಾಗೂ ಜೈನಶಾಸ್ತ್ರದಲ್ಲಿ ಡಿಪ್ಲೊಮಾ ಪದವಿಗಳನ್ನು ಪಡೆದವರು. ಇವರು ಜನಿಸಿದ್ದು 1963 ಸೆಪ್ಟೆಂಬರ್‌ 23ರಂದು ಗಾಜಿಪುರ, ಗುಲಬರ್ಗಾ ಜಿಲ್ಲೆಯಲ್ಲಿ. ತಂದೆ  ಬಾಬುರಾವ್ ಎಸ್. ದೇಶಮಾನೆ, ತಾಯಿ- ರತ್ನಾ ದೇಶಮಾನೆ. ಕೃತಿ : ಮಹಿಳೆ ಮತ್ತು ಸಮಾಜಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮಾಧ್ಯಮ, ಸಮಾಜ ಪರಿವರ್ತನೆಯ ಚಿಂತಕರು, ಸಮಾಜಶಾಸ್ತ್ರ ಮತ್ತು ಸಂಘಟನೆಗಳು, ಸಮಾಜಶಾಸ್ತ್ರ ಮತ್ತು ಮಹಿಳಾ ಚಳವಳಿಗಳು, ಸಮಾಜ ಮತ್ತು ಸಾಮಾಜಿಕ ಚಳವಳಿಗಳು ಡಾ. ಕೆ.ಎನ್. ವಿಜಯಲಕ್ಷ್ಮಿ (ಪರಿಚಯಾತ್ಮಕ ಕೃತಿ), ಅಂಬೇಡ್ಕರ್‌ ದೃಷ್ಟಿಯಲ್ಲಿ ಕಾರ್ಮಿಕರು ಮತ್ತು ಮಹಿಳೆ, ದಲಿತ ಮಹಿಳೆಯರ ಬದಲಾಗುತ್ತಿರುವ ಸ್ಥಾನಮಾನಗಳು (ಪಿಹೆಚ್.ಡಿ.) ...

READ MORE

Related Books