About the Author

ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರು. ಸದ್ಯ ಅವರು ಬೆಂಗಳೂರಿನದ್ದು, ಖಾಸಗಿ ಕಂಪನಿಯೊಂದರ ಹಣಕಾಸು ವಿಭಾಗದ ಪ್ರದಾನ ವ್ಯವಸ್ಥಾಪಕರು.   ಸಾಹಿತ್ಯ ಕಥೆ , ಪ್ರಬಂಧ ಮತ್ತು ಕ್ರೀಡಾ ಬರಹದಲ್ಲಿ ಆಸಕ್ತಿ. ಮಂಗಳೂರು ಆಕಾಶವಾಣಿಯಲ್ಲಿ ಅನೇಕ ಕ್ರೀಡಾ ಕಾರ್ಯಕ್ರಮಗಳ ನಿರ್ವಹಣೆ. ಸ್ಥಳೀಯ ಪತ್ರಿಕೆಗಳಲ್ಲಿ ಕ್ರೀಡಾ ಅಂಕಣಗಳನ್ನೂ ಬರೆದಿದ್ದಾರೆ. ಇವರ ಸಣ್ಣ ಕತೆಗಳು, ಪ್ರಬಂಧಗಳು ಮಂಗಳೂರು  ಆಕಾಶವಾಣಿಯಲ್ಲಿ ಪ್ರಸಾರ ಹಾಗೂ ವಿಜಯ ಕರ್ನಾಟಕ , ಪಂಜು ಆನ್ಲೈನ್ ಪತ್ರಿಕೆ, ಸಂಗಾತ ಮತ್ತು ಕುಂದಾಪುರದ ಸ್ಥಳೀಯ ಪತ್ರಿಕೆಗಳ ವಿಶೇಷಾಂಕದಲ್ಲಿ ಪ್ರಕಟವಾಗಿವೆ.  

ಕೆನರಾ ಟೈಮ್ಸ್ ದಿನ ಪತ್ರಿಕೆಯಲ್ಲಿ ಕೆಲ ಕಾಲ ವರದಿಗಾರರಾಗಿ,  ಕುಂದಾಪುರ ದಲ್ಲಿ (2000) `ಚಿಗುರು' ಮಾಸ ಪತ್ರಿಕೆ ಆರಂಭಿಸಿ ಕೆಲ ಕಾಲ (ಹವ್ಯಾಸಿ ) ಉಪಸಂಪಾದಕರಾಗಿದ್ದರು.
ಕೃತಿಗಳು: ಅಜ್ಜ ನೆಟ್ಟ ಹಲಸಿನ ಮರ - ಇವರ ಮೊದಲ ಕಥಾ ಸಂಕಲನ. 

ಸತೀಶ್ ಶೆಟ್ಟಿ ವಕ್ವಾಡಿ