ಕೊನೆಯ ಎರಡು ಎಸೆತಗಳು

Author : ಸತೀಶ್ ಶೆಟ್ಟಿ ವಕ್ವಾಡಿ

Pages 144

₹ 180.00




Year of Publication: 2024
Published by: ಬಿಬಿ ಪಬ್ಲಿಕೇಷನ್ಸ್
Address: 3ನೇ ಮಳಿಗೆ, ವಿ-4, ಕಾಂಪ್ಲೆಕ್ಸ್, ಕೆಎಸ್.ಎಸ್.ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ ಸಿಟಿ ಫೇಸ್-01, ಹೊಸೂರು ರೋಡ್, ಬೆಂಗಳೂರು- 560100
Phone: 8042096549

Synopsys

ಸತೀಶ್ ಶೆಟ್ಟಿ ವಕ್ವಾಡಿ ಅವರ ಎರಡನೇ ಕವನಸಂಕಲನ ‘ಕೊನೆಯ ಎರಡು ಎಸೆತಗಳು’. ಬದುಕಿನಲ್ಲಿ ಸ್ಥಾನಮಾನಗಳು ಹೆಚ್ಚಾದಂತೆ ಮನುಷ್ಯನ ವ್ಯಕ್ತಿತ್ವದಲ್ಲಾಗುವ ವ್ಯತಿರಿಕ್ತ ಬದಲಾವಣೆಗಳು ಈ ಕಥಾಸಂಕಲನದ ಮೂಲ ಸಾರ. ಈ ಕೃತಿಯಲ್ಲಿ ಗಾಳಿಮರ, ಕ್ಷಮಿಸಿ ಸಂಪಾದಕರೇ.. ಕಥೆ ಕಳುಹಿಸಲಾಗುತ್ತಿಲ್ಲ, ದೀಪವಾರಿದ ಬೀದಿಯಲಿ, ಮುಕ್ತಿ, ಮುಳ್ಳಿಗಂಟಿದ ಸೀರೆ, ಅಜ್ಜಯ್ಯನ ಕನಸು, ತಲ್ಲಣಿಸದಿರು ಜೀವವೇ, ಕೊನೆಯ ಎರಡು ಎಸೆತಗಳು, ನಕ್ಷತ್ರ ಜಾರಿದಾಗ ಸೇರಿದಂತೆ ಒಂಭತ್ತು ಕತೆಗಳಿವೆ. ಪ್ರತಿಯೊಂದು ಕತೆಯು ಆಧುನೀಕರಣದ ಸಂಕೀರ್ಣ ಬದುಕು ಮತ್ತು ಅವ್ಯವಸ್ಥಿತ ಸಾಮಾಜಿಕ ಸ್ವಾಸ್ತ್ಯ, ಸ್ತ್ರೀ ಸಂವೇದನೆ, ಬರಿದಾಗುತ್ತಿರುವ ಗ್ರಾಮೀಣ ಬದುಕಿನ ಚಿತ್ರಣ, ಬೆಳೆಯುತ್ತಿರುವ ನಗರ ಜೀವನದ ಬವಣೆಗಳು ಮತ್ತು ಕಾರ್ಪೊರೇಟ್ ಜಗತ್ತಿನ ತಲ್ಲಣಗಳನ್ನು ಪ್ರತಿಬಿಂಬಸಲಾಗಿದೆ. ರಾಜಕೀಯದ ಅಪವ್ಯಯಗಳು, ಕಾಪೊರೇಟ್ ಜಗತ್ತಿನ ತಲ್ಲಣಗಳು, ಧಾರ್ಮಿಕ ನಂಬಿಕೆ ಮತ್ತು ಅಸಮತೋಲನ, ಕೌಟುಂಬಿಕ ಗೊಂದಲ, ಸಂಬಂಧಗಳ ಅಸಹಿಷ್ಣು ಮನೋಭಾವ, ಆರ್ಥಿಕ ಅಸಹಜತೆ, ಮಾನವೀಯ ಅಂತಃಕರಣದಂಥ ವಿಷಯಗಳನ್ನು ಇಲ್ಲಿ ಹೆಣೆಯಲಾಗಿದೆ. ಇಲ್ಲಿ ಎಲ್ಲವೂ ಕಂಡದ್ದು, ಕೇಳಿದ್ದ ಅನುಭವಗಳು ಅಲ್ಲದಿದ್ದರೂ ಎಲ್ಲೊ ಇನ್ಯಾರದ್ದೋ ಅನುಭವ, ಯಾತನೆ, ಅಸಹಾಯಕತೆ, ಕ್ರೌರ್ಯ, ಅಹಂಕಾರ, ಅಂತಃಕರಣ, ಸಹಾಯಹಸ್ತ, ಮತ್ಸರ, ಹಗೆತನ, ದೌರ್ಜನ್ಯ, ಶೀತಲ ಸಮರ, ಅಪನಂಬಿಕೆ, ಇವೆಲ್ಲವೂ ಈ ಕಥೆಗಳಲ್ಲಿ ಹಾದು ಹೋಗಿದೆ.

About the Author

ಸತೀಶ್ ಶೆಟ್ಟಿ ವಕ್ವಾಡಿ

ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರು. ಸದ್ಯ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರು. ಸಾಹಿತ್ಯ ಕಥೆ , ಪ್ರಬಂಧ ಮತ್ತು ಕ್ರೀಡಾ ಬರಹದಲ್ಲಿ ಆಸಕ್ತಿ. ಮಂಗಳೂರು ಆಕಾಶವಾಣಿಯಲ್ಲಿ ಅನೇಕ ಕ್ರೀಡಾ ಕಾರ್ಯಕ್ರಮಗಳ ನಿರ್ವಹಣೆ. ಸ್ಥಳೀಯ ಪತ್ರಿಕೆಗಳಲ್ಲಿ ಕ್ರೀಡಾ ಅಂಕಣಗಳನ್ನೂ ಬರೆದಿದ್ದಾರೆ. ಇವರ ಸಣ್ಣ ಕತೆಗಳು, ಪ್ರಬಂಧಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ ಹಾಗೂ ವಿಜಯ ಕರ್ನಾಟಕ, ಪಂಜು ಆನ್ಲೈನ್ ಪತ್ರಿಕೆ, ಸಂಗಾತ ಮತ್ತು ಕುಂದಾಪುರದ ಸ್ಥಳೀಯ ಪತ್ರಿಕೆಗಳ ವಿಶೇಷಾಂಕದಲ್ಲಿ ಪ್ರಕಟವಾಗಿವೆ. ಕೆನರಾ ಟೈಮ್ಸ್ ದಿನ ಪತ್ರಿಕೆಯಲ್ಲಿ ಕೆಲ ಕಾಲ ವರದಿಗಾರರಾಗಿ,  ಕುಂದಾಪುರ ದಲ್ಲಿ (2000) `ಚಿಗುರು' ಮಾಸ ...

READ MORE

Related Books