About the Author

ಶಾಸನ ತಜ್ಞ, ವಿದ್ವಾಂಸ ಸೀತಾರಾಮ ಜಾಗೀರದಾರ ಅವರು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯವರು. ಕವಿ ಲಕ್ಷ್ಮೀಶನ ಊರು-ಸುರಪುರ ತಾಲೂಕಿನ ದೇವಪುರ ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ಸಂಶೋಧನೆ ನಡೆಸಿ, ರಾಜ್ಯದ ವಿವಿಧೆಡೆ ಉಪನ್ಯಾಸಗಳನ್ನು ನೀಡಿ ಸಮರ್ಥಿಸಿಕೊಂಡವರ ಪೈಕಿ ಇವರು ಮೊದಲಿಗರು. ಕವಿ ಲಕ್ಷ್ಮೀಶನನ್ನು ಕೆಲವುರು ಚಿಕ್ಕಮಗಳೂರಿನ ದೇವನೂರಿನವನು ಎಂದು ಸಾಧಿಸಲು ಹೊರಟಿದ್ದವರಿಗೆ ಸಂಶೋಧನಾತ್ಮಕ ಪುರಾವೆಗಳಿಂದ ಸೂಕ್ತ ಉತ್ತರ ನೀಡಿದವರು. ಕಳೆದ 4 ದಶಕಗಳಿಂದ ಸಂಶೋಧನೆಯಲ್ಲಿ ತೊಡಗಿದ್ದು, ಅತ್ಯಂತ ಮೌಲಿಕವಾದ ಸಂಶೋಧನಾ ಬರಹಗಳನ್ನು ಮಂಡಿಸಿದ್ದಾರೆ.

ಕೃತಿಗಳು: ಕವಿರಾಮಾರ್‍ಗಂ, ಗ್ರಂಥ ಸಂಪಾದನಾ ಶಾಸ್ತ್ರ ಪರಿಚಯ, “ಛಂದೋರಚನಾ ಸಂಶೋಧನೆಗಳು” ದೇವಪುರದ ಮಹಾಕವಿ ಲಕ್ಷ್ಮೀಶ, ಏಕಾಕ್ಷರ ನಿಘಂಟು, ಸಾಪೇಕ್ಷ, ಸಾಪೇಕ್ಷ-2,ಕುಮಾರವ್ಯಾಸ-ಒಂದು ಅಧ್ಯಯನ, ಅಲ್ಲಮಪ್ರಭು, ವೀರಶೈವ ಸಾಹಿತ್ಯ ಅಧ್ಯಯನ, ಪರ್ಷಿಯನ್ ಮತ್ತು ಅರಬಿಕ್ ಶಾಸನಗಳು, ಮಿತಾಕ್ಷರದ ವಿಜ್ಞಾನೇಶ್ವರರು ಹಾಗೂ ಮರ್ತೂರಿನ ಶಾಸನ, ಕರ್ನಾಟಕ ಎಪಿಗ್ರಾಫಿಯಾ(ಸಂಪುಟ-9), ಶ್ರವಣ ಬೆಳಗೊಳದ ಶಾಸನಗಳು,ಛಂದಶ್ಯಾಸ್ತ್ರ, ಕನ್ನಡ ಕೈಪಿಡಿ. ಅಲ್ಲಮಪ್ರಭುಗಳು

ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2017)

ಸೀತಾರಾಮ ಜಾಗೀರದಾರ