ಗ್ರಂಥ ಸಂಪಾದನಾ ಶಾಸ್ತ್ರ ಪರಿಚಯ

Author : ಸೀತಾರಾಮ ಜಾಗೀರದಾರ

Pages 218

₹ 135.00




Year of Publication: 2021
Published by: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ,
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ

Synopsys

ಹಿರಿಯ ಲೇಖಕ ವಿದ್ವಾಂಸ ಸೀತಾರಾಮ ಜಾಗೀರದಾರ ಅವರು ರಚಿಸಿದ ಕೃತಿ-ಗ್ರಂಥ ಸಂಪಾದನಾ ಶಾಸ್ತ್ರ ಪರಿಚಯ. ಗ್ರಂಥ ರಚನೆಯ ಗಂಭೀರತೆಯನ್ನು ವಿದ್ವತ್ ವಲಯವು ಮರೆಯುತ್ತಿರುವ ಇಂದಿನ ದುರಂತಮಯ ಸನ್ನಿವೇಶದಲ್ಲಿ ಗ್ರಂಥ ಸಂಪಾದನಾ ಶಾಸ್ತ್ರ ಪರಿಚಯದಂತಹ ಕೆಲಸವು ಮೌಲಿಕ ಎನಿಸುತ್ತದೆ. ಗ್ರಂಥ ಸಂಪಾದನೆಯು ಕೇವಲ ಕಲೆಯಲ್ಲ; ಅದು ಗಂಭೀರ ಅಧ್ಯಯನ, ಪ್ರಯತ್ನಶೀಲ ಮನೋಭಾವ. ಹೀಗಾಗಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಈ ಗ್ರಂಥ ಉಪಯುಕ್ತ.

About the Author

ಸೀತಾರಾಮ ಜಾಗೀರದಾರ

ಶಾಸನ ತಜ್ಞ, ವಿದ್ವಾಂಸ ಸೀತಾರಾಮ ಜಾಗೀರದಾರ ಅವರು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯವರು. ಕವಿ ಲಕ್ಷ್ಮೀಶನ ಊರು-ಸುರಪುರ ತಾಲೂಕಿನ ದೇವಪುರ ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ಸಂಶೋಧನೆ ನಡೆಸಿ, ರಾಜ್ಯದ ವಿವಿಧೆಡೆ ಉಪನ್ಯಾಸಗಳನ್ನು ನೀಡಿ ಸಮರ್ಥಿಸಿಕೊಂಡವರ ಪೈಕಿ ಇವರು ಮೊದಲಿಗರು. ಕವಿ ಲಕ್ಷ್ಮೀಶನನ್ನು ಕೆಲವುರು ಚಿಕ್ಕಮಗಳೂರಿನ ದೇವನೂರಿನವನು ಎಂದು ಸಾಧಿಸಲು ಹೊರಟಿದ್ದವರಿಗೆ ಸಂಶೋಧನಾತ್ಮಕ ಪುರಾವೆಗಳಿಂದ ಸೂಕ್ತ ಉತ್ತರ ನೀಡಿದವರು. ಕಳೆದ 4 ದಶಕಗಳಿಂದ ಸಂಶೋಧನೆಯಲ್ಲಿ ತೊಡಗಿದ್ದು, ಅತ್ಯಂತ ಮೌಲಿಕವಾದ ಸಂಶೋಧನಾ ಬರಹಗಳನ್ನು ಮಂಡಿಸಿದ್ದಾರೆ. ಕೃತಿಗಳು: ಕವಿರಾಮಾರ್‍ಗಂ, ಗ್ರಂಥ ಸಂಪಾದನಾ ಶಾಸ್ತ್ರ ...

READ MORE

Related Books