ಕವಿರಾಜಮಾರ್ಗ್ಗಂ

Author : ಸೀತಾರಾಮ ಜಾಗೀರದಾರ



Year of Publication: 2015
Published by: ಕವಿಕುಂಚ ಪ್ರಕಾಶನ
Address: : ಅಂಚೆ: ಗೋಗಿ, ತಾ: ಶಹಾಪುರ, ಜಿ: ಯಾದಗಿರಿ
Phone: 9448577898

Synopsys

ಹಿರಿಯ ವಿದ್ವಾಂಸ, ಶಾಸನ ತಜ್ಞ ಸೀತಾರಾಮ ಜಾಗೀರದಾರ ಅವರ ವಿದ್ವತ್ ಪೂರ್ಣ ಕೃತಿ-ಕವಿರಾಜಮಾರ್ಗ್ಗಂ. ನಿರವಧ್ಯಾನ್ವಯ ಶ್ರೀವಿಜಯನ ಕೃತಿ ಇದು. ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ ಕಂಡ ವ್ಯಾಕರಣ ಗ್ರಂಥವಿದು. ಕನ್ನಡ ವ್ಯಾಕರಣದ ವೈವಿಧ್ಯಮಯ ಲಕ್ಷಣಗಳನ್ನು ಅಲಂಕಾರಗಳನ್ನು, ಶಾಸ್ತ್ರಗಳನ್ನು ವಿವರಿಸಿದ ಅತ್ಯಂತ ಹಳೆಯ ಗ್ರಂಥ ಎಂಬ ಖ್ಯಾತಿ ಇದಕ್ಕಿದೆ. ಪಂಪಪೂರ್ವ ಯುಗಕ್ಕೂ ಪೂರ್ವದಲ್ಲಿ ಅಂದರೆ ಕ್ರಿ.ಶ. 850 ಕ್ಕೂ ಪೂರ್ವದಲ್ಲಿ ರಚಿತವಾಗಿದೆ. ಅಮೋಘವರ್ಷ ನೃಪತುಂಗ ಆಳ್ವಿಕೆಯಲ್ಲಿದ್ದ ಶ್ರೀವಿಜಯನು ಈ ಅಲಂಕಾರ ಗ್ರಂತ ರಚಿಸಿದನೆಂಬ ಖ್ಯಾತಿ ಇದೆ. ಈ ಗ್ರಂಥವನ್ನು ವ್ಯಾಖ್ಯಾನಿಸಿದ, ವಿಶ್ಲೇಷಿಸಿದ, ವಿಮರ್ಶಿಸಿದ ಗ್ರಂಥವಿದು.

About the Author

ಸೀತಾರಾಮ ಜಾಗೀರದಾರ

ಶಾಸನ ತಜ್ಞ, ವಿದ್ವಾಂಸ ಸೀತಾರಾಮ ಜಾಗೀರದಾರ ಅವರು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯವರು. ಕವಿ ಲಕ್ಷ್ಮೀಶನ ಊರು-ಸುರಪುರ ತಾಲೂಕಿನ ದೇವಪುರ ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ಸಂಶೋಧನೆ ನಡೆಸಿ, ರಾಜ್ಯದ ವಿವಿಧೆಡೆ ಉಪನ್ಯಾಸಗಳನ್ನು ನೀಡಿ ಸಮರ್ಥಿಸಿಕೊಂಡವರ ಪೈಕಿ ಇವರು ಮೊದಲಿಗರು. ಕವಿ ಲಕ್ಷ್ಮೀಶನನ್ನು ಕೆಲವುರು ಚಿಕ್ಕಮಗಳೂರಿನ ದೇವನೂರಿನವನು ಎಂದು ಸಾಧಿಸಲು ಹೊರಟಿದ್ದವರಿಗೆ ಸಂಶೋಧನಾತ್ಮಕ ಪುರಾವೆಗಳಿಂದ ಸೂಕ್ತ ಉತ್ತರ ನೀಡಿದವರು. ಕಳೆದ 4 ದಶಕಗಳಿಂದ ಸಂಶೋಧನೆಯಲ್ಲಿ ತೊಡಗಿದ್ದು, ಅತ್ಯಂತ ಮೌಲಿಕವಾದ ಸಂಶೋಧನಾ ಬರಹಗಳನ್ನು ಮಂಡಿಸಿದ್ದಾರೆ. ಕೃತಿಗಳು: ಕವಿರಾಮಾರ್‍ಗಂ, ಗ್ರಂಥ ಸಂಪಾದನಾ ಶಾಸ್ತ್ರ ...

READ MORE

Related Books