About the Author

ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಲ್ಲಿ ಜನಿಸಿದವರು, ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್‌ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ತಂದೆ ನಾರಾಯಣ ಉಚ್ಚಿಲ್ ಹಾಗೂ ತಾಯಿ ಯು. ವಸಂತಿ, ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. 'ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರದಲ್ಲಿ ಕೃತಿ ಸಂಪಾದನೆ, ಕೃತಿ ಬಿಡುಗಡೆ, ಅನುವಾದ ಕಮ್ಮಟಗಳ ಯೋಜನೆ ಸಂಪನ್ನ. “ಸ್ವಾರೋ” ಸಂಸ್ಥೆಗಾಗಿ ಟ್ರಾನ್ಸಿನ್ ಮತ್ತು ಪ್ರಾನ್ಸ್‌ಲೇಶನ್ ಕಾರ್ಯದಲ್ಲಿ ಸಹಯೋಗ.

ಸ್ವಾರೋ ಸಂಸ್ಥೆಯ ಬೆಳ್ಳಿ ಹಬ್ಬ ಪ್ರಯುಕ್ತ ನಡೆದ ಎರಡು ದಿನಗಳ ಬಹುಭಾಷಾ ಸಾಹಿತ್ಯ ಕೂಟದಲ್ಲಿ “ಎಕ್ಸ್‌ಪ್ರೆಶನ್” ಆಂಡ್ * ಎಕ್ಸ್ಪೀರಿಯೆನ್ಸ್” ಪ್ರಬಂಧ ಮಂಡನೆ. “ಗಾನ್ ವಿತ್ ದ ವಿಂಡ್, ಫ್ರಾಂಕೆನ್‌ಸ್ಪೆನ್, ಜೇನ್ ಏರ್” ಇಂತಹ ವಿಶ್ವ ಸಾಹಿತ್ಯ ಕೃತಿಗಳ ಅನುವಾದದೊಡನೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಗ್ರಂಥಭಾಗಗಳ ಅನುವಾದಲ್ಲೂ ಕೊಡುಗೆ ನೀಡಿದ ಅವರ ಅನುವಾದ ಕೇತ್ರದ ಒಟ್ಟು ಸಾಧನೆಗಾಗಿ ಅನುವಾದ ಅಕಾಡೆಮಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸಿ ಪಾತ್ರರಾದ ಇವರ ಅನುವಾದ 'ಗಾನ್ ವಿದ್ ದ ವಿಂಬ ಈ ಅನುವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವು ಸಂದಿದೆ. ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ.ಸಾವಿತ್ರಮ್ ದತ್ತಿನಿಧಿ ಬಹುಮಾನವೂ ಪ್ರಾಪ್ತವಾಗಿದೆ. ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್‌ನ ಗೌರವಪ್ರಶಸ್ತಿ ಹಾಗೂ ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಕರಣ ಪ್ರಶಸ್ತಿಯಿಂದಲೂ ಸನ್ಮಾನಿತರಾಗಿದ್ದಾರೆ.

ಶ್ಯಾಮಲಾ ಮಾಧವ