About the Author

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ  ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ.  1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಂದರ್ಭದಲ್ಲಿ, ಇವರ ಬದುಕಿನ ಸಾಧನೆಗಳನ್ನು ಆಧರಿಸಿ ಸಿಕಾ ಅವರು ಬರೆದ ಬ್ಯಾಸರಿಲ್ಲದ ಜೀವ ಪ್ರಕಟಗೊಂಡಿದೆ. 

ಕೃತಿಗಳು: ’ನೆಲದ ಮರೆಯ ನಿಧಾನ’ ಕವನ ಸಂಕಲನ (2007), ’ಎತ್ತಣ ಮಾಮರ ಎತ್ತಣ ಕೋಗಿಲೆ  ( 2009) , ಇಂಗ್ಲೆಂಡ್ ಪ್ರವಾಸ ಕಥನ, ’ಒಂದು ಬಿರುಗಾಳಿಯ ಕಥೆ’ ಅನುವಾದಿತ (2016) ಕಾದಂಬರಿ. ಅಸಂಗತ ಬರಹಗಳು (ಲೇಖನಗಳ ಸಂಗ್ರಹ ಕೃತಿ), ಮಗಲಾಯಿ ಹುಡುಗನ ಪರೆನ್ ಟೂರು(2018), ಡೋಂಟ್ ಬಿ ಹ್ಯಾಪಿ(2020), ಕಾಲ್ದಾರಿಯ ಕನವರಿಕೆ(2020), ಹಗಲಿನಲ್ಲಿಯೆ ಸಂಜೆಯಾಯಿತು(2021), ದಣಿವರಿಯದ ದಾರಿಯಲ್ಲಿ(2022)

 

ಸಿದ್ದು ಯಾಪಲಪರವಿ

(12 Apr 1965)

BY THE AUTHOR