ಕಾಲ್ದಾರಿಯ ಕನವರಿಕೆ

Author : ಸಿದ್ದು ಯಾಪಲಪರವಿ

Pages 196

₹ 180.00




Year of Publication: 2020
Published by: ಅಪರಂಜಿ ಪ್ರಕಾಶನ
Address: ʻನಿರುತ್ತರʼ, ಬಿ.155, 2ನೇ ಕ್ರಾಸ್‌, 3ನೇ ಹಂತ, ಕಲ್ಯಾಣ ನಗರ, ಚಿಕ್ಕಮಗಳೂರು-577102
Phone: 9844767859

Synopsys

ಲೇಖಕ ಸಿದ್ದು ಯಾಪಲಪರವಿ ಅವರ ಕೃತಿ- ʻಕಾಲ್ದಾರಿಯ ಕನವರಿಕೆʼ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಸಿನಿಜಗತ್ತು, ಹೀಗೆ ಎಲ್ಲ ಆಯಾಮಗಳಲ್ಲಿ ವಿಷಯ ವಸ್ತುವನ್ನು ಚರ್ಚಿಸಿದ ಬರಹಗಳಿವೆ. ಸಕಾಲಿಕ ಸಂವಾದ ಎಂಬ ಉಪಶೀರ್ಷಿಕೆ ನೀಡಿದ್ದು, ಪ್ರಸಕ್ತ ವಿದ್ಯಮಾನಗಳನ್ನು ಕೇಂದ್ರೀಕರಿಸಿದೆ. 

ಸಾಹಿತಿ ಸಿಕಾ ಅವರು ಬೆನ್ನುಡಿ ಬರೆದುʻ ಬರಹಗಳು ಲೇಖಕರ ಮಾದಕ ಭಾಷೆ ಮತ್ತು ಭಾವನೆಗಳನ್ನು ಹೊದ್ದುಕೊಂಡರೂ, ನ್ಯಾಯ ಸಮ್ಮತ ತೀರ್ಪು ಪಡೆಯಲು, ವ್ಯಕ್ತಿ ಚಿತ್ರಣದ ಸ್ಪಷ್ಟ ಗ್ರಹಿಕೆ ಕಾರಣ. ಎರಡು ಹೊಸ ವರ್ಷದ ಅವಲೋಕನಗಳ ನಡುವಿನ ಒಡಲಲ್ಲಿ ಅರಳಿದ ವರ್ತಮಾನದ ಸಂಗತಿಗಳು, ಸಕಾಲಿಕವಾದರೂ ಸರ್ವಕಾಲಿಕ ಸತ್ಯವನ್ನು ಹುದುಗಿಕೊಂಡಿವೆʼ. ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಸಿದ್ದು ಯಾಪಲಪರವಿ
(12 April 1965)

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ  ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ.  1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...

READ MORE

Related Books