ಪಿಸುಮಾತುಗಳ ಜುಗಲ್

Author : ಸಿದ್ದು ಯಾಪಲಪರವಿ

Pages 132

₹ 135.00




Year of Publication: 2017
Published by: ಒನ್ ವ್ಹೀಲರ್ ಪಬ್ಲಿಕೇಷನ್ಸ್
Address: ಬೆಂಗಳೂರು.
Phone: 9448358040

Synopsys

ಪಿಸುಮಾತುಗಳ ಜುಗಲ್ ಎಂಬ ಪ್ರಮುಖ ಶೀರ್ಷಿಕೆಯಡಿ ಕವಿ ಸಿದ್ದು ಯಾಪಲಪರವಿ ಹಾಗೂ ಕವಯತ್ರಿ ಸಿಕಾ (ಕಾವ್ಯಶ್ರೀ ಮಹಾಗಾಂವಕರ್) ಅವರು ಸಂಯುಕ್ತವಾಗಿ ರಚಿಸಿದ ಕವನಗಳ ಸಂಕಲನವಿದು. ತಲಾ 24 ಕವನಗಳಿದ್ದು, ಒಟ್ಟು 48 ಕವನಗಳನ್ನು ಒಳಗೊಂಡಿದೆ. `ಪ್ರೇಮಿಗಳೇ ಓದಬೇಡಿ ' ಎಂಬುದು ಈ ಕೃತಿಗಿರುವ ಉಪಶೀರ್ಷಿಕೆಯು ಓದುಗರನ್ನು ಬಲವಂತವಾಗಿ ಸೆಳೆಯುತ್ತದೆ. ಸಂಗೀತದಲ್ಲಿ ನಡೆಯುವ ಜಗಲ್ ಬಂದಿಯ ಹಾಗೆ ಕಾವ್ಯ ರಚನೆಯಲ್ಲೂ ಸಂಗೀತದ ಪರಿಸರ ಸೃಷ್ಟಿಸಿರುವುದು ಈ ಸಂಕಲನದ ವಿಶೇಷ.

ಸಾಹಿತಿ ಪ್ರೊ. ವಿಕ್ರಮ ವಿಸಾಜಿ ಕವಿತೆಗಳ ಕುರಿತು ‘'ಇಲ್ಲಿನ ಕವಿತೆಗಳನ್ನು ಓದುವಾಗ ಆಗುವ ರೋಮಾಂಚನ ಅನನ್ಯ. ಕಾಲ ನಂತರದಲ್ಲಿ ಕವಿಗಳು ಅಪ್ರಸ್ತುತರಾಗಿ ಕವಿತೆಗಳು ಮಾತ್ರ ಪ್ರೇಮಿಗಳ ಮನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತವೆ' ಎಂದು ಅಭಿಪ್ರಾಯ ಪಟ್ಟಿದ್ದರೆ, ಕಲಾವಿದ ವಿ.ಎಂ.ಮಂಜುನಾಥ ಅವರು ‘ಇಲ್ಲಿ ‘ಪಿಸುಮಾತುಗಳ ಜುಗಲ್’ ಕಾವ್ಯೋತ್ಸಾಹದ ಆಟದಂತೆ ವರ್ತಿಸುತ್ತಾ ಮೈಮರೆಸುವಂತೆ ಮಾಡುತ್ತದೆ. ಸಿದ್ದು ಮತ್ತು ಸಿಕಾ ಕವಿಗಳಿಬ್ಬರೂ, ಪ್ರೇಮದ ವರಸೆಯನ್ನು ಶಬ್ದಗಳಲ್ಲಿ ಭಿನ್ನ ರೀತಿಯಲ್ಲಿ ಹಿಡಿದಿಡುವ ಸಾಹಸಕ್ಕೆ ಕೈಹಾಕಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. ಕಲಾವಿದ ವಿ.ಎಂ. ಮಂಜುನಾಥ ಅವರು ಕಾವ್ಯರೂಪದಲ್ಲಿದ್ದ ಇಲ್ಲಿಯ ಪಿಸುಮಾತುಗಳಿಗೆ ಬಣ್ಣದ ಗೆರೆಗಳ ಮೂಲಕ ಧ್ವನಿ ನೀಡಿದ್ದಾರೆ. ಕಾವ್ಯಗಳಷ್ಟೇ ಈ ಚಿತ್ರಗಳು ಮುದ ನೀಡುವಂತಿವೆ.

About the Author

ಸಿದ್ದು ಯಾಪಲಪರವಿ
(12 April 1965)

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ  ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ.  1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...

READ MORE

Related Books