About the Author

ಸಂಶೋಧಕ, ಸಾಹಿತಿ ವೀರಣ್ಣ ರಾಜೂರ ಅವರು ಜನಿಸಿದ್ದು 1946 ಜೂನ್ 4ರಂದು, ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇವೆ ಆರಂಭಿಸಿದರು. 

ಇವರ ಪ್ರಮುಖ ಕೃತಿಗಳೆಂದರೆ ವಚನ ಅಧ್ಯಯನ, ಸ್ವರವಚನಗಳು, ವಿಚಾರ ಪತ್ನಿಯರು (ಸಂಶೋಧನಾ ಕೃತಿ), ಅವಳೇ ಗಂಡ, ನಾನೆ ಹೆಂಣ್ತಿ, ಲವ್ ಅಂದ್ರೆ ಪ್ರೇಮ (ನಾಟಕಗಳು), ಹಾಲಭಾವಿ ವೀರಭದ್ರಪ್ಪನವರು, ಪಿ.ಬಿ. ಧುತ್ತರಗಿ-ಜೀವನಚರಿತ್ರೆ. ಸಿದ್ಧಲಿಂಗ ಶತಕ, ವಚನಾಮೃತಸಾರ, ವಚನಶಾಸ್ತ್ರ ಸಾರ, ಶಿವಯೋಗ ಪ್ರದೀಪಿಕೆ, ಭಕ್ತ್ಯಾನಂದ ಸುಧಾರ್ಣವ (ಸಂಪಾದಿತ ಕೃತಿಗಳು). ಸಮತಾ, ಕಥಾಶಾಲ್ಮಲಾ (ಕಥಾಸಂಕಲನಗಳು). ನಡುಗನ್ನಡ ಪಠ್ಯತರಂಗ, ಪ್ರಬಂಧ ಸಂಚಯ (ಪಠ್ಯಗ್ರಂಥಗಳು).

ಇವರಿಗೆ ಹುಬ್ಬಳ್ಳಿ ಮಠ ಗ್ರಂಥ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಗೌರವ ಫೆಲೊಶಿಪ್, ಫ.ಗು. ಹಳಕಟ್ಟಿ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ. 

ವೀರಣ್ಣ ರಾಜೂರ

(04 Jun 1947)

Books by Author