About the Author

ಮೈಸೂರಿನ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಗ್ರಂಥಾಲಯ ಸಹಾಯಕರಾಗಿರುವ ವಿಜಯ್ ನಾಗ್ ಜಿ ಅವರು ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳೆಂದರೆ ಜಿಮ್ ಗ್ರೀನ್ ಅವರ ಆಂಗ್ಲ ಕೃತಿ-“ ಆಲ್ಬರ್ಟ್ ಐನ್‍ಸ್ಟೀನ್: ಆಯ್ದ ಬರಹಗಳು”; “ಜೆನ್ ಅನುಭವ”.ಥಾಮಸ್ ಹೂವರ್ ರಚಿಸಿರುವ “ ದಿ. ಝೆನ್ ಎಕ್ಸ್ಪಿರೀಯನ್ಸ್’ ಎಂಬ ಕೃತಿಯ ಅನುವಾದ. “ ಜಪಾನಿನ ಕಥೆಗಳು” ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ “ ಮಹಾ ವಿಜ್ಞಾನಿ ನಿಕೋಲಾ ಟೆಸ್ಲಾ ಜೀವನ ಚರಿತ್ರೆ” ಹಾಗೂ “ಅವಿಪ್ಸ” ಎಂಬ ಕೃತಿಗಳೂ ಸಹ ಪ್ರಕಟಣೆಯ ಹಂತದಲ್ಲಿವೆ. ಸಾಹಿತ್ಯ ಮತ್ತು ಅನುವಾದ ಕ್ಷೇತ್ರದ ಕಾರ್ಯಗಳಿಗಾಗಿ ಕುವೆಂಪು ಕಲಾನಿಕೇತನ, ಬೆಂಗಳೂರು ಇವರಿಂದ  ಕುವೆಂಪು ಕನ್ನಡ ರತ್ನ ಪ್ರಶಸ್ತಿ, ಅನುವಾದ ಕ್ಷೇತ್ರದ ಗಣನೀಯ ಸಾಧನೆಗಾಗಿ ಆಸ್ಟ್ರೇಲಿಯಾದ ಎಸ್.ಎಂ. ಟಿಯು ನಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. 

ವಿಜಯ್ ನಾಗ್‌ ಜಿ.