ಅವಿಪ್ಸ

Author : ವಿಜಯ್ ನಾಗ್‌ ಜಿ.

Pages 60

₹ 90.00




Year of Publication: 2021
Published by: ವಿಹಾನ್‌ ಪಬ್ಲಿಕೇಷನ್ಸ್‌
Address: ವಿಜಯನಗರ , ಮೈಸೂರು- 570030
Phone: 7975577007

Synopsys

ವಿಜಯ ನಾಗ್‌ ಅವರ ʼಅವಿಪ್ಸʼ ಕವನ ಸಂಕಲನ. ಒಟ್ಟು 50 ಕವನಗಳಿವೆ. ʼಅವಿಪ್ಸʼ ಕವನಗಳನ್ನು ಆಗಸದಿಂದ ಮಿನುಗಿದ ನಕ್ಷತ್ರಗಳ ಸಾಲು ಎನ್ನುತ್ತಾರೆ ಲೇಖಕರು. ಈ ಕವನಗಳ ರಚನೆಗಳು ವಿಕಾಸಶೀಲವಾದವು. ಮುಗ್ಧ, ಸ್ನಿಗ್ಧ ಕವನಗಳಿಂದ ಪ್ರಬುದ್ಧ, ವಿದಗ್ಧ ಕವನಗಳತ್ತ ಕವಿಯ ಅಭಿಯಾನವಾಗಿದೆ. ಕವಿತೆಗಳಲ್ಲಿರುವ ಛಂದೋಬದ್ದ, ವಸ್ತು ವೈವಿಧ್ಯಮಯ ರಚನೆಗಳ ಎರಡು ಕಣ್ಣುಗಂತೆ ಕುಟುಂಬ ಮತ್ತು ನಿಸರ್ಗ ಹೀಗೆ ಎರಡು ಕೇಂದ್ರಗಳಾಗಿವೆ. ಮುಖ್ಯವಾಗಿ ಈ ಕವನ ಸಂಕಲನವು ಮುಗ್ನತೆ ಅಥವಾ ತಾದಾತ್ಮ್ಯ, ಅರ್ಥಾತ್‌ ಕರಗಿಹೋಗುವ , ಕಳೆದುಹೋಗುವ ಪ್ರಕ್ರಿಯೆಯ ಅಭಿವ್ಯಕ್ತಿಯಾಗಿದ್ದು, ಇಲ್ಲಿನ ಬಹುಪಾಲು ಕವಿತೆಗಳಲ್ಲಿ. ಸೃಷ್ಟಿ, ಪ್ರತಿಸೃಷ್ಟಿ, ಪುನಃಸೃಷ್ಟಿ, ಅನುಸೃಷ್ಟಿ ಎಂಬ ಸಂಕಲ್ಪಗಳಿವೆ.

About the Author

ವಿಜಯ್ ನಾಗ್‌ ಜಿ.

ಮೈಸೂರಿನ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಗ್ರಂಥಾಲಯ ಸಹಾಯಕರಾಗಿರುವ ವಿಜಯ್ ನಾಗ್ ಜಿ ಅವರು ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳೆಂದರೆ ಜಿಮ್ ಗ್ರೀನ್ ಅವರ ಆಂಗ್ಲ ಕೃತಿ-“ ಆಲ್ಬರ್ಟ್ ಐನ್‍ಸ್ಟೀನ್: ಆಯ್ದ ಬರಹಗಳು”; “ಜೆನ್ ಅನುಭವ”.ಥಾಮಸ್ ಹೂವರ್ ರಚಿಸಿರುವ “ ದಿ. ಝೆನ್ ಎಕ್ಸ್ಪಿರೀಯನ್ಸ್’ ಎಂಬ ಕೃತಿಯ ಅನುವಾದ. “ ಜಪಾನಿನ ಕಥೆಗಳು” ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ “ ಮಹಾ ವಿಜ್ಞಾನಿ ನಿಕೋಲಾ ಟೆಸ್ಲಾ ಜೀವನ ಚರಿತ್ರೆ” ಹಾಗೂ “ಅವಿಪ್ಸ” ಎಂಬ ಕೃತಿಗಳೂ ಸಹ ಪ್ರಕಟಣೆಯ ಹಂತದಲ್ಲಿವೆ. ಸಾಹಿತ್ಯ ಮತ್ತು ಅನುವಾದ ಕ್ಷೇತ್ರದ ಕಾರ್ಯಗಳಿಗಾಗಿ ಕುವೆಂಪು ...

READ MORE

Related Books