ಬೀಗದ ಕೈ

Author : ವಿಜಯ್ ನಾಗ್‌ ಜಿ.

Pages 120

₹ 130.00




Year of Publication: 2021
Published by: ವಿಹಾನ್ ಪಬ್ಲಿಷರ್ಸ್
Address: ನಂ 138, 23ನೆ ಅಡ್ಡರಸ್ತೆ, ಬಿ ಬ್ಲಾಕ್, ವಿಜಯನಗರ, ಮೈಸೂರು-570030
Phone: 079755 77007

Synopsys

ಲೇಖಕ ವಿಜಯ ನಾಗ್ ಅವರು ಜಪಾನಿನ ಜುನ್ ಇಚಿರೋ ತಾನಿಜಾಕಿ ಅವರ "ಕಾಗೀ" ಎಂಬ ಕಾದಂಬರಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಲು ಸೊಗಸಾದ ಅನುವಾದ. ಮೂಲಕೃತಿಯಷ್ಟೆ ಈ ಅನುವಾದ ಸರಳತೆ ಮತ್ತು ಗಂಭೀರತೆಯಿಂದ ಕೂಡಿದ ಕೃತಿ. ಲೈಂಗಿಕ ಹಂಬಲ ಎನ್ನುವ ಹಿಡನ್ ಶಕ್ತಿಯೊಂದು ಹೊರಗೆ ಅನಾವರಣಗೊಳ್ಳುವಾಗ ಚಾಚಿಕೊಳ್ಳುವ ಮುಖಗಳ ಬಗ್ಗೆ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಗಂಡು ಮತ್ತು ಹೆಣ್ಣಿನ ನಡುವೆ ದೇಹ ಎನ್ನುವುದೇ ಎಲ್ಲದರ ಅಭಿವ್ಯಕ್ತ ಮಾಧ್ಯಮವೇ? ಎಂಬ ಅಪರಿಹಾರದ ಪ್ರಶ್ನೆ ಇದು. ಒಂದು ಕಡೆ ಪತಿಯ ಜೀವನಾಶಕ್ಕೆ ಪತ್ನಿ ಹೆಣೆದ ಬಲೆ ಮತ್ತು ಪತ್ನಿಯನ್ನು ಸಂತುಷ್ಟಿಗೊಳಿಸಲು ಪತಿ ಬಳಸಿದ ಮಾರ್ಗ ಎರಡು ಕೂಡ ಕೇಡಿನ ಕಾಮವೇ ಆಗಿದ್ದಾದರೂ ಯಾಕೆ ಎಂಬ ತಲ್ಲಣ.

ಪ್ರಶ್ನೆ ಮತ್ತು ಹುಟ್ಟಿಸುವ ತಲ್ಲಣಗಳ ನಡುವೇ ಬೀಗದ ಕೈ ನುಣುಚಿಕೊಳ್ಳುತ್ತದೆ. ಈ ಕಥನದ ಓದಿನ ಕೊನೆಗೆ ಇಲ್ಲಿನ ದಾಂಪತ್ಯ ಅಸಹ್ಯ ಹುಟ್ಟಿಸುವುದಕ್ಕಿಂತ, ಲೈಂಗಿಕ ತೃಷೆಯ ನೀಗಿಸಲಿಕ್ಕೇ ಪರವಾನಗಿ ಪಡೆದ ದಾಂಪತ್ಯದ ಕ್ರೂರ ದೇಹ ಸಂಬಂಧ ಕಾಡುತ್ತದೆ. ಇದು ಪತಿ-ಪತ್ನಿಯ ಮಧ್ಯದ ಅಶ್ಲೀಲತೆ ಜಿಗುಪ್ಸೆಗಿಂತಲೂ ವಿಷಾದ ಒಂದನ್ನು ತಣ್ಣಗೆ ಉಳಿಸಿ ಹೋಗುತ್ತದೆ. ಅವರವರು ತೆಗೆದುಕೊಳ್ಳುವ ನಿರ್ಧಾರಗಳೇ ಅವರವರ ಬಾಳಿನ ಪರಮ ನಂಬಿಕೆಗಳಾಗಿ ನಿಂತು ಬಿಡುವ ಕಟುಸತ್ಯ ಈ ಕಥಾನಕ ಅನಾವರಣಗೊಳಿಸುತ್ತದೆ ಎಂದು ಕವಿ ವಾಸುದೇವ ನಾಡಿಗರು ಸೊಗಸಾದ ‌ಅರ್ಥಪೂರ್ಣ ಮುನ್ನುಡಿಯನ್ನು ಬರೆದಿದ್ದಾರೆ. "ಅರಿವಿನ ಬಾಗಿಲು ತೆರೆಯಲು ನೂರಾರು ಬೀಗದ ಕೈ" ಇದು ನಾಡಿಗರ ಮುನ್ನುಡಿಯ ಶೀರ್ಷಿಕೆ.

About the Author

ವಿಜಯ್ ನಾಗ್‌ ಜಿ.

ಮೈಸೂರಿನ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಗ್ರಂಥಾಲಯ ಸಹಾಯಕರಾಗಿರುವ ವಿಜಯ್ ನಾಗ್ ಜಿ ಅವರು ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳೆಂದರೆ ಜಿಮ್ ಗ್ರೀನ್ ಅವರ ಆಂಗ್ಲ ಕೃತಿ-“ ಆಲ್ಬರ್ಟ್ ಐನ್‍ಸ್ಟೀನ್: ಆಯ್ದ ಬರಹಗಳು”; “ಜೆನ್ ಅನುಭವ”.ಥಾಮಸ್ ಹೂವರ್ ರಚಿಸಿರುವ “ ದಿ. ಝೆನ್ ಎಕ್ಸ್ಪಿರೀಯನ್ಸ್’ ಎಂಬ ಕೃತಿಯ ಅನುವಾದ. “ ಜಪಾನಿನ ಕಥೆಗಳು” ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ “ ಮಹಾ ವಿಜ್ಞಾನಿ ನಿಕೋಲಾ ಟೆಸ್ಲಾ ಜೀವನ ಚರಿತ್ರೆ” ಹಾಗೂ “ಅವಿಪ್ಸ” ಎಂಬ ಕೃತಿಗಳೂ ಸಹ ಪ್ರಕಟಣೆಯ ಹಂತದಲ್ಲಿವೆ. ಸಾಹಿತ್ಯ ಮತ್ತು ಅನುವಾದ ಕ್ಷೇತ್ರದ ಕಾರ್ಯಗಳಿಗಾಗಿ ಕುವೆಂಪು ...

READ MORE

Related Books