ಆಡು ಆಟ ಆಡು

Author : ಪ್ರಕಾಶ್ ಕೆ. ನಾಡಿಗ್

Pages 136

₹ 80.00
Year of Publication: 2015
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಲೇಖಕ ಪ್ರಕಾಶ್. ಕೆ ನಾಡಿಗ್ ಅವರು ರಚಿಸಿರುವ ’ಆಡು ಆಟ ಆಡು’ ಪುಸ್ತಕವು ಮರೆಯಾಗುತ್ತಿರುವ ದೇಸಿ ಆಟಗಳನ್ನು ವಿವರಿಸುವಂತದ್ದು, ಪರಿಚಯಿಸುವಂತದ್ದು.  ಆಟಪಾಟಗಳಿಗೂ ಮಕ್ಕಳಿಗೂ ಬಿಡಿಸಲಾಗದ ನಂಟು. ವಯೋಮಾನಕ್ಕೆ ಅನುಗುಣವಾಗಿ, ಋತುಮಾನಕ್ಕೆ ತಕ್ಕಂತೆ ಅನೇಕ ಆಟಗಳನ್ನು , ಕಳೆದ ಬಾಲ್ಯವನ್ನು , ಮಲೆನಾಡಿನ ಒಂದಿಷ್ಟು ಪರಿಸರದ ಬಗ್ಗೆ ತಿಳಿಸುವ ಪ್ರಕಾಶ್ ನಾಡಿಗ್ ಅವರ ಬರಹಗಳು ಅಪರೂಪದ್ದು ಮತ್ತು ಅಷ್ಟೇ ವಿಶೇಷವಾದದ್ದು. 

ಪ್ರಸ್ತುತ ’ಆಡು ಆಟ ಆಡು’ ಪುಸ್ತಕದಲ್ಲಿ ಗೋಲಿ, ಬುಗುರಿ, ಚಿನ್ನಿದಾಂಡು, ಮರಕೋತಿ, ಕಳ್ಳ ಪೋಲಿಸ್, ಶೇರ್ ಕಾ ಬಚ್ಛಾ, ಐಸ್ ಪೈಸ್, ಗಾಳಿಪಟ, ಲಗೋರಿ, ಮುಂತಾದ ಆಟಗಳು , ಮತ್ತು ಹುಡುಗಿಯರಿಗಾಗಿಯೇ ಇದ್ದ ಕುಂಟೋಬಿಲ್ಲೆ, ಹಗ್ಗದಾಟ, ರಿಂಗಾಟ, ಅಡುಗೆ ಆಟಗಳ ಬಗ್ಗೆ ವಿವರಿಸುತ್ತಾರೆ. ಮಳೆಗಾಲದಲ್ಲಿ ಮನೆಯಲ್ಲೇ ಕೂತು ಆಡುವ ಕೇರಂ, ಚೌಕಾಬಾರ, ಹಳಗುಳಿ ಆಟ, ಚಿನ್ನಾಮಣೆ ಆಟ, ಮುಂತಾದವುಗಳ ಬಗ್ಗೆ ಸರಳವಾಗಿ ವಿವರಿಸುವ, ಪರಿಚಯಿಸುವ ಲೇಖಕರ ಪರಿ ಅನನ್ಯವಾದುದು. 

About the Author

ಪ್ರಕಾಶ್ ಕೆ. ನಾಡಿಗ್
(23 September 1972)

ಲೇಖಕ ಪ್ರಕಾಶ್ ಕೆ. ನಾಡಿಗ್‌  ಅವರು ಮೂಲತಃ ಶಿವಮೊಗ್ಗದವರು. ತಂದೆ ಕೇಶವ ಮೂರ್ತಿ ನಾಡಿಗ್, ತಾಯಿ ಶಾಂತಾ ನಾಡಿಗ್. ಶಿವಮೊಗ್ಗದ ದೇಶಿಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೂ ಶಿಕ್ಷಣ ಪೂರೈಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ  ಸೂಕ್ಷ್ಮಾಣುಜೀವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ತುಮಕೂರಿನ  ಔಷಧ  ತಯಾರಿಕಾ ಕಂಪನಿಯಲ್ಲಿ ಗುಣಮಟ್ಟ ಖಾತ್ರಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪ್ರವೃತ್ತಿಯಲ್ಲಿ ಲೇಖಕರು, ಅಂಕಣಕಾರರು ಆಗಿದ್ದಾರೆ.  ಗುಬ್ಬಚ್ಚಿ ಸಂತತಿಯನ್ನು ಉಳಿಸಿ ಬೆಳೆಸಲು " ಗುಬ್ಬಚ್ಚಿ ಸಂಘ" ಸ್ಥಾಪಿಸಿ, ಮಕ್ಕಳಲ್ಲಿ ಪರಿಸರ ಹಾಗೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಮಕ್ಕಳನ್ನು ಸೇರಿಸಿಕೊಂಡು ತುಮಕೂರಿನಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಕೃತಿಗಳು: ಗಣೇಶನ ಬೆಂಗ್ಳೂರ್ ಯಾತ್ರೆ, ಪುಟಾಣಿಗಳಿಗಾಗಿ ...

READ MORE

Related Books