ಗೇಮ್ಸ್ ಪಿರಿಯಡ್

Author : ಅಂತಃಕರಣ

Pages 112

₹ 90.00




Year of Publication: 2014
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು- ಅಂಚೆ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ- -577418
Phone: 8861065161

Synopsys

‘ಗೇಮ್ಸ್ ಪಿರಿಯಡ್’  ಕಿಶೋರ ಸಾಹಿತಿ ಅಂತಃಕರಣನ ಅಂಕಣ ಪ್ರಬಂಧಗಳ ಸಂಕಲನ. ಈ ಕೃತಿಗೆ ಹಿರಿಯ ಕ್ರೀಡಾ ಪತ್ರಕರ್ತರಾದ ರಾಜೀವ ವಡ್ಡರ್ಸೆಯವರು ಬೆನ್ನುಡಿ ಬರೆದಿದ್ದಾರೆ. ಅಂತಃಕರಣನ ಈ ಕೃತಿಯ ಬಗ್ಗೆ ಬರೆಯುತ್ತಾ..ಅಂತಃಕರಣ ಇಷ್ಟು ಚಿಕ್ಕ ವಯಸ್ಸಿನಲ್ಲಿ ಓರ್ವ ನುರಿತ ಕ್ರೀಡಾ ಲೇಖಕನಂತೆ ಸುಲಲಿತವಾಗಿ ಪುಟಗಟ್ಟಲೆ ಲೇಖನಗಳನ್ನು ಬರೆಯುತ್ತಿರುವ ಅಂತಃಕರಣ ಆಧುನಿಕ ಅಭಿಮನ್ಯ ಅನ್ನಲೇಬೇಕು ಎನ್ನುತ್ತಾರೆ.

ಒಬ್ಬೊಬ್ಬ ಲೇಖಕ ಒಂದೊಂದು ರೀತಿಯಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾನೆ. ಏನೇ ಆದರೂ, ಲೇಖಕನಾದವನು ಓದುಗನಿಗೆ ಆರಂಭದಿಂದ ಕೊನೆಯ ತನಕ ಬೋರು ಹೊಡೆಸಬಾರದಷ್ಟೇ, ಏನು ಹೇಳಬೇಕೋ ಅದನ್ನು ಆರಂಭದ ಎರಡೋ ಮೂರೋ ಪ್ಯಾರಾಗಳಲ್ಲಿ ಚುಟುಕಾಗಿ ಬರೆದುಬಿಡಬೇಕು. ಆ ಬಳಿಕ ರಸವತ್ತಾಗಿ ವಿವರಿಸುತ್ತಾ ಹೋಗಬೇಕು. ಪ್ರಸಕ್ತ ವಿದ್ಯಮಾನಗಳ ಜೊತೆ ಇತಿಹಾಸದ ಕೆಲವೊಂದು ತುಣುಕುಗಳನ್ನು ಸೇರಿಸಿದರೆ ಲೇಖನಗಳಿಗೆ ಮತ್ತಷ್ಟು ತೂಕ ಹೆಚ್ಚುತ್ತದೆ ಎಂದು ಹೇಳುವ ಅವರು ಅಂತಃಕರಣನಿಗೆ ಉಜ್ವಲ ಭವಿಷ್ಯವಿದೆ ಎನ್ನುವ ಭರವಸೆಯ ಮಾತುಗಳನ್ನು ಹೇಳುತ್ತಾರೆ. ಹಾಗೇ ಈ ಕೃತಿಯಲ್ಲಿಅಂತಃಕರಣ ಕ್ರೀಡಾ ಅಂಕಣಕಾರನ ಎಲ್ಲಾ ಅಂಶಗಳನ್ನು ಅನುಸರಿಸಿದ್ದಾನೆ. ಹೀಗಾಗಿ ಲೇಖನಗಳು ಕ್ರೀಡಾಸಕ್ತರನ್ನು ಹಿಡಿದಿಡುತ್ತವೆ. 

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books