ಕಲೆ ಮತ್ತು ಕ್ರೀಡೆ

Author : ಚಂದ್ರಕಾಂತ ಬಿಜ್ಜರಗಿ

Pages 372

₹ 300.00
Year of Publication: 2017
Published by: ಕುರುಬರ ಸಾಂಸ್ಕೃತಿಕ ಪರಿಷತ್ತು

Synopsys

ಕುರುಬರ ಸಾಂಸ್ಕೃತಿಕ ಕಲೆಗಳು ಮತ್ತು ಕ್ರೀಡೆಗಳ ಜಿನ್ನೆಲೆಗಳ ಕುರಿತು ವಿವರಣೆ. ಕರ್ನಾಟಕದ ಜಾನಪದ ಕಲೆಗಳಲ್ಲಿ ಸೇವೆ ಸಲ್ಲಿಸಿದ ಸಮಾಜದ 216 ಜನನಾಮಾಂಕಿತರ ಮತ್ತು 25 ಕ್ರೀಡಾ ಪಟುಗಳ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ. ಈ ಕೃತಿಯನ್ನು ಚಿಕ್ಕಣ್ಣ ಯಣ್ಣೆಕಟ್ಟೆ ಅವರ ಸಹಯೋಗದಲ್ಲಿ ಸಂಪಾದಿಸಲಾಗಿದೆ.

 

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books