ಭಾರತ ರತ್ನ ಸಚಿನ್ ತೆಂಡೊಲ್ಕರ್

Author : ಚೆನ್ನಗಿರಿ ಕೇಶವಮೂರ್ತಿ

Pages 408

₹ 400.00




Year of Publication: 2019
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: # 375/15, ಕಗ್ಗೆರೆ ಪ್ರಕಾಶ್ ನಿಲಯ, ಕೆಂಪೇಗೌಡನಗರ 1ನೇ ಮೇನ್, 8ನೇ ಕ್ರಾಸ್ ಮಾಗಡಿ ಮುಖ್ಯ ರಸ್ತೆ ವಿಶ್ವನೀಡಂ ಅಂಚೆ ಬೆಂಗಳೂರು- 560091
Phone: 9739561334/9242744854

Synopsys

‘ಭಾರತ ರತ್ನ ಸಚಿನ್ ತೆಂಡೊಲ್ಕರ್’ ಕ್ರಿಕೆಟ್ ಅಂಕಿ-ಅಂಶ ತಜ್ಞರಾದ ಚೆನ್ನಗಿರಿ ಕೇಶವಮೂರ್ತಿಯವರ ಕೃತಿ. ಈ ಕೃತಿಗೆ ಸ್ವತಃ ಕ್ರಿಕೆಟ್ ದೇವರೆಂದೇ ಕರೆಸಿಕೊಳ್ಳುವ ಸಚಿನ್ ತೆಂಡೊಲ್ಕರ್ ಅವರೇ ಮುನ್ನುಡಿ ಬರೆದಿದ್ದಾರೆ. ಕೃತಿ ಬಗ್ಗೆ ಮೆಚ್ಚುಗೆ ಸೂಚಿಸುತ್ತಾ. ‘ನನ್ನ ಜೀವನದ ಕುರಿತು ಚೆನ್ನಗಿರಿ ಕೇಶವಮೂರ್ತಿ ಅವರು ಕನ್ನಡದಲ್ಲಿ ಪುಸ್ತಕ ಬರೆಯುತ್ತಿದ್ದಾರೆಂದು ನನ್ನ ಅತ್ಮೀಯರೊಬ್ಬರು ಗಮನಕ್ಕೆ ತಂದಾಗ ಎರಡು ಕಾರಣಗಳಿಗಾಗಿ ನನ್ನ ಮುಖದಲ್ಲಿ ಮಂದಹಾಸ ಮಾಡಿತು. ಮೊದಲನೆಯದಾಗಿ, ಕ್ರಿಕೆಟ್ ಮತ್ತು ಕ್ರೀಡೆಯ ಬಗ್ಗೆ ಇರುವ ಒಲವು ಎಲ್ಲ ಗಡಿಗಳನ್ನೂ ಮೀರಿದ್ದು, ಅದು ಭಾಷೆಯ ಎಲ್ಲ ತೋಡಕುಗಳನ್ನೂ ಮೀರಿ ಸಾಗುತ್ತದೆ. ಇದಕ್ಕೆ ಯಾವ ಕಾಲ ಘಟ್ಟ, ವಯಸ್ಸು, ಜಾತಿಭೇದಗಳ ಇತಿಮಿತಿ ಇರುವುದಿಲ್ಲ. ಎರಡನೆಯದಾಗಿ, ಈ ಲೇಖಕರನ್ನು ನಾನು ಮೊದಲು 2003ರಲ್ಲಿ, ಹಾಗೂ ಅನಂತರ 2013ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿದಾಗ ಭೇಟಿ ಮಾಡಿದ್ದೆ. ಮೊದಲ ಭೇಟಿ ಆದಾಗ ಅವರಿಗೆ 64 ವರ್ಷವಾಗಿತ್ತು. ಆದರೆ ಆ ವಯಸ್ಸಿನಲ್ಲಿ ಅವರು ಕ್ರಿಕೆಟ್ ಆಟದ ಬಗ್ಗೆ ಹೊಂದಿದ್ದ ಒಲವು, ತುಡಿತ ಮತ್ತು ಬದ್ಧತೆಯನ್ನು ಕಂಡಾಗ ಅವರೊಬ್ಬ ಮಹತ್ವಪೂರ್ಣ ಕ್ರಿಕೆಟ್ ಅಂಕಿ-ಅಂಶ ತಜ್ಞರೆಂದು ನನಗೆ ಅನಿಸಿತ್ತು. ಎರಡನೆಯ ಭೇಟಿ ವೇಳೆಗೆ ಅವರು ಕೆಎಸ್‌ಸಿಎಯಲ್ಲಿ ಅಧಿಕೃತ ಅಂಕಿಅಂಶ ತಜ್ಞರಾಗಿದ್ದರು. ಮೊದಲ ಭೇಟಿ ಸಂದರ್ಭದಲ್ಲಿ ಅವರು ಕ್ರಿಕೆಟ್ ಕುಲತು ರಚಿಸಿದ ತಮ್ಮ ಪ್ರಥಮ ಪುಸ್ತಕ (ಭಾರತೀಯ ಕ್ರಿಕೆಟ್‌ ಇತಿಹಾಸ) ವನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ಈಗ 14 ವರ್ಷಗಳ ನಂತರ 80ರ ಇಳಿವಯಸ್ಸಿನಲ್ಲೂ ಮತ್ತೊಂದು ಹೊಸ ಕ್ರಿಕೆಟ್ ಪುಸ್ತಕವೊಂದನ್ನು ಬರೆದಿರುವುದನ್ನು ನೋಡಿದರೆ ಅವರಲ್ಲಿನ ಉತ್ಸಾಹ ಮತ್ತು ಚೈತನ್ಯಕ್ಕೆ ಬೆರಗಾಗಿದ್ದೇನೆ’ ಎನ್ನುತ್ತಾರೆ. ಸಚಿನ್ ಬದುಕು ಮತ್ತು ಕ್ರಿಕೆಟ್ ಕುರಿತಾದ ಮಹತ್ವದ ಬರಹವಿದು. 

About the Author

ಚೆನ್ನಗಿರಿ ಕೇಶವಮೂರ್ತಿ

ದೇಶಿ ಕ್ರಿಕೆಟ್ ಅಂಕಿ ಅಂಶ ಬರಹಗಾರರಾಗಿ ಗುರುತಿಸಿಕೊಂಡಿರುವ ಚೆನ್ನಗಿರಿ ಕೇಶವಮೂರ್ತಿ ಅವರಿಗೆ ಮುಂಬೈನಲ್ಲಿರುವ ಭಾರತ ಕ್ರಿಕೆಟ್ ಸಂಖ್ಯಾಶಾಸ್ತ್ರ ಸಂಸ್ಥೆ ‘ಆನಂದ್ ಜಿ ಡೊಸ್ಸಾ’ ಪ್ರಶಸ್ತಿ ನೀಡಿ ಗೌರವಿಸಿದೆ. 2017ನೇ ಸಾಲಿನಲ್ಲಿ ಅವರು ಬರೆದ ಕ್ರಿಕೆಟ್ ಸ್ಟ್ಯಾಟ್ಸ್ ಜರ್ನಲ್ ಲೇಖನಕ್ಕೆ ಈ ಪುರಸ್ಕಾರ ಲಭಿಸಿದೆ. ಕೇಶವಮೂರ್ತಿ ಅವರು ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳಿಗೆ ಕ್ರಿಕೆಟ್ ಅಂಕಿಅಂಶಗಳನ್ನು ಬರೆಯುತ್ತಾರೆ. ಅಲ್ಲದೆ ಕ್ರಿಕೆಟ್ ಗೆ ಸಂಬಂಧಿಸಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ‘ಭಾರತ ರತ್ನ ಸಚಿನ್ ತೆಂಡೊಲ್ಕರ್’ ಕೃತಿ ಹೆಚ್ಚು ಜನಪ್ರಿಯವಾಗಿದೆ. ಈ ಕೃತಿಗೆ ಸ್ವತಃ ಸಚಿನ್ ತೆಂಡೊಲ್ಕರ್ ಮುನ್ನುಡಿ ಬರೆದಿದ್ದಾರೆ ...

READ MORE

Related Books