ಗಾಮೊಕ್ಕಲ ಮಹಾಭಾರತ

Author : ಎನ್.ಆರ್‌. ನಾಯಕ

Pages 496

₹ 50.00




Year of Publication: 2014
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

Synopsys

`ಗಾಮೊಕ್ಕಲ ಮಹಾಭಾರತ ' ಈ ಕತಾ ವಸ್ತು ವ್ಯಾಸಮಹಾಭಾರತ ಕಥಾ ವಸ್ತುವಿನಿಂದ ಬಹು ಅಂಶಗಳಲ್ಲಿ ಭಿನ್ನವಾಗಿದ್ದು, ಇಲ್ಲಿಯ ಪಾತ್ರಗಳ ಗುಣ ಸ್ವಭಾವಗಳೂ ಸಹ ಸಾಕಷ್ಟು ಭಿನ್ನವಾಗಿವೆ. ವ್ಯಾಸ ಭಾರತದಲ್ಲಿಲ್ಲದ ಹಲವಾರು ಜಾನಪದ ರೂಢಿ ನಂಬಿಕೆ, ಸಂಪ್ರದಾಯಗಳು, ಜೀವನ ಮೌಲ್ಯಗಳು ಇವುಗಳ ಜೊತೆಗೆ ಕೆಲವು ಮೌಢ್ಯಗಳೂ ಬೆರೆತುಕೊಂಡು ಈ ಮಹಾಭಾರತ ಕತೆ ಭಿನ್ನ ಜಾಡು ಹಿಡಿಯುತ್ತದೆ. ಇಲ್ಲಿಯ ಮಾರ್ಪಾಡುಗಳೆಲ್ಲವೂ ಸುಂದರವಾದ, ಸಮಯೋಚಿತವಾದ ಮಾರ್ಪಾಡಾಗಿ ತೋರದಿದ್ದರೂ ಇಲ್ಲಿ ಗಾಮೊಕ್ಕಲ ಮಣ್ಣವಾಸನೆ, ತುಂಬಿದ, ಇನ್ನೊಂದು ಜಾನಪದ ಮಹಾಭಾರತ ಲೋಕದರ್ಶನವನ್ನು ನಾವು ಕಾಣಬಹುದಾಗಿದೆ. ಡಾ. ಎನ್.ಆರ್. ನಾಯಕ ಅವರು ಈ ಕೃತಿಯ ಸಂಪಾದಕರು. 

About the Author

ಎನ್.ಆರ್‌. ನಾಯಕ
(28 June 1935)

ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಎನ್.ಆರ್‌. ನಾಯಕ ಅವರು ಜನಿಸಿದ್ದು 1935 ಜೂನ್‌ 28ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಜನನ. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ...

READ MORE

Related Books