ಇತಿಹಾಸ ಮತ್ತು ಪುರಾತತ್ವ

Author : ಶ್ರೀನಿವಾಸ ಎ. ಜಿ.

Pages 116

₹ 120.00




Year of Publication: 2020
Published by: ಭೀಮಾವಾದ ಪ್ರಕಾಶನ
Address: # 49, ಬಿ.ನಾಗಸಂದ್ರ, ಯಮಲೂರು ಪೋಸ್ಟ್, ಬೆಂಗಳೂರು - 560037

Synopsys

ಶ್ರೀನಿವಾಸ ಎ. ಜಿ. ಅವರ ‘ಇತಿಹಾಸ ಮತ್ತು ಪುರಾತತ್ವ’ ಕೃತಿಯ ಲೇಖನಗಳಲ್ಲಿ ಪುರಾತತ್ವಶಾಸ್ತ್ರಕ್ಕೆ ಸಂಬಂಧಿಸಿದ ಅಮ್ಮನಘಟ್ಟ ಪರಿಸರದ ಪ್ರಾಗೈತಿಹಾಸಿಕ ಕುರುಹುಗಳು, ಬಿದರೆಯ ಪ್ರಾಚ್ಯಾವಶೇಷಗಳು, ಅಮ್ಮನಘಟ್ಟದ ಪ್ರಾಚ್ಯಾವಶೇಷಗಳು, ನೂತನ ಶಿಲಾಯುಗದ ನೆಲೆಯಾಗಿ ಮೂಗನಾಯಕನ ಕೋಟೆ ಮುಂತಾದ ಲೇಖನಗಳಿವೆ. ಕೃತಿಗೆ ಮುನ್ನುಡಿ ಬರೆದ  ಪ್ರೊ. ಎಂ.ಜಿ. ಮಂಜುನಾಥ ಅವರು ‘ಪುರಾತತ್ವ ಶಾಸ್ತ್ರ, ಶಾಸನಸಾಸ್ತ್ರ, ಇತಿಹಾಸ, ವಾಸ್ತುಶಿಲ್ಪ, ಮೂರ್ತಿಶಿಲ್ಪ, ಸಮಾಜಶಾಸ್ತ್ರ, ಧರ್ಮಶಾಸ್ತ್ರ, ಸಂಸ್ಕೃತಿ ಹೀಗೆ ಬಹು ಶಿಸ್ತೀಯ ಜ್ಞಾನ ಶಾಖೆಗಳನ್ನು ಕುರಿತ ಸಂಶೋಧನಾ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಗೊಂಡಿವೆ. ಇಲ್ಲಿಯ ಲೇಖನಗಳನ್ನು ಗಮನಿಸಿದರೆ ಶ್ರೀನಿವಾಸ ಅವರು ಭವಿಷ್ಯದಲ್ಲಿ ಉತ್ತಮ ಸಂಶೋಧಕರಾಗುವ ಎಲ್ಲ ಲಕ್ಷಣಗಳೂ  ಗೋಚರಿಸುತ್ತವೆ. ಪುರಾತತ್ವಶಾಸ್ತ್ರ ಸಂಶೋಧಕರಿಗೆ  ಇರಬೇಕಾದ ತಾಳ್ಮೆ, ಬಹುಶಿಸ್ತೀಯ ಜ್ಞಾನ, ಪರಿಶ್ರಮ ಇವೆಲ್ಲವೂ ಇಲ್ಲಿಯ ಕ್ಷೇತ್ರ ಕಾರ್ಯಾಧಾರಿತ ಲೇಖನಗಳಲ್ಲಿ  ಕಂಡು ಬರುತ್ತಿವೆ’ ಎಂದರು ಪ್ರಶಂಸಿಸಿದ್ದಾರೆ. 

About the Author

ಶ್ರೀನಿವಾಸ ಎ. ಜಿ.

ಯುವ ಬರಹಗಾರ ಶ್ರೀನಿವಾಸ ಎ. ಜಿ. ಅವರು 1983 ಫೆಬ್ರುವರಿ 02ರಂದು ತುಮಕೂರಿನ ಗುಬ್ಬಿಯಲ್ಲಿ ಜನಿಸಿದರು. ತಂದೆ - ಗೋವಿಂದಯ್ಯ, ತಾಯಿ - ಜಯಮ್ಮ. ಆರಂಭಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಪೂರೈಸಿ, ಪ್ರೌಢಶಿಕ್ಷಣವನ್ನು ಸಮೀಪದ ಹೊಸಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಂತರ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ‘ನಿಟ್ಟೂರು ಹೋಬಳಿ ಸಾಂಸ್ಕೃತಿಕ ಅಧ್ಯಯನ’ ಎಂಬ ಶೀರ್ಷಿಕೆಯಡಿ ಎಂ.ಫಿಲ್‌ ಪದವೀಧರರು.  ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸಿ. ಎಸ್. ವಾಸುದೇವನ್‌ ಅವರ ಮಾರ್ಗದರ್ಶನದಲ್ಲಿ ಉತ್ಖನನ ವರದಿಗಾರರಾಗಿ ...

READ MORE

Related Books