ನೊಳಂಬರ ಶಾಸನಗಳು

Author : ಹೀ.ಚಿ. ಶಾಂತವೀರಯ್ಯ

Pages 250

₹ 300.00




Year of Publication: 2018
Published by: ಅಕ್ಷರ ಮಂಟಪ
Address: !1667, 6ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ಬೆಂಗಳೂರು-560104
Phone: 9632370975

Synopsys

ನೊಳಂಬರ ಶಾಸನಗಳು- ಲೇಖಕ ಹೀ.ಚಿ. ಶಾಂತವೀರಯ್ಯ ಅವರು ಈ ಕೃತಿಯನ್ನು ರಚಿಸಿದ್ದಾರೆ. ನೊಳಂಬರ ಶಾಸನಗಳನ್ನು ಆಧರಿಸಿ ಅವರ  ರಾಜ್ಯಭಾರ, ವಂಶವೃಕ್ಷ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಚಾರಗಳನ್ನು ದಾಖಲಿಸಲಾಗಿದೆ. ನೊಳಂಬರ ಇತಿಹಾಸ ಭಾಗ-1 'ನೊಳಂಬರ ಶಾಸನಗಳು' ನೊಳಂಬರ ಸಮಗ್ರ ಮತ್ತು ಸಮೂಲ ವಿಚಾರಗಳು ಹೀಗೆ ವಿವಿಧ ಅಧ್ಯಾಯಗಳ ಮೂಲಕ ಐತಿಹಾಸಿಕ ನೊಳಂಬ ರಾಜವಂಶದ ಚಿತ್ರಣವನ್ನು ನೀಡಿದ್ದಾರೆ. 

About the Author

ಹೀ.ಚಿ. ಶಾಂತವೀರಯ್ಯ
(11 June 1934 - 27 September 2020)

ಲೇಖಕ ಶಾಂತವೀರಯ್ಯನವರು ಹುಟ್ಟಿದ್ದು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಪ್ರಸಿದ್ಧ ಮನೆತನದಲ್ಲಿ. ತಂದೆ-ಚಿಕ್ಕಯ್ಯ, ತಾಯ- ಚಿಕ್ಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹೀಚನೂರು, ತಿಪಟೂರಿನಲ್ಲಿ ಪೂರ್ಣಗೊಳಿಸಿದ ಅವರು ಕಾಲೇಜು ವಿದ್ಯಾಭ್ಯಾಸವನ್ನು ದಾವಣಗೆರೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಿ.ಎ. (ಆನರ್ಸ್) ಎಂ.ಎ. ಮತ್ತು ಬಿ.ಇಡಿ ಪದವಿಗಳನ್ನು ಪಡೆದರು. ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ತಿಪಟೂರು, ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆಸಲ್ಲಿಸಿ ನಿವೃತ್ತಿ ಪಡೆದರು. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಹಲವಾರು ಲೇಖನಗಳು ನಗೆಬರಹಗಳು ...

READ MORE

Related Books