ಜನಪ್ರಿಯ ನೂರಾರು ಅರ್ಥಸಹಿತ ಗಾದೆಗಳು

Author : ಸಂಪಟೂರು ವಿಶ್ವನಾಥ್

Pages 216

₹ 100.00




Year of Publication: 2016
Published by: ವಸಂತ ಪ್ರಕಾಶನ
Address: 360, 10ನೇ ಮುಖ್ಯ, ಬಿ-ಮುಖ್ಯ ರಸ್ತೆ, ಕಾಸ್ಮೊಪಾಲೊಟಿನ್ ಕ್ಲಬ್ ಎದುರು, ಜಯನಗರ [ಪೂರ್ವ, ಜಯನಗರ, ಬೆಂಗಳೂರು-560011
Phone: 0802244 3996

Synopsys

ಲೇಖಕ ಸಂಪಟೂರು ವಿಶ್ವನಾಥ ಅವರು ಬರೆದ ಕೃತಿ-ಜನಪ್ರಿಯ ನೂರಾರು ಅರ್ಥಸಹಿತ ಗಾದೆಗಳು. ಒಡವು, ಸೂಕ್ತಿ, ಸೂಳ್ನುಡಿ, ಗಾದೆಗಳು ಇವು ನಮ್ಮ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಂಶಗಳು. ಚುಟುಕಾದರೂ ಹಿರಿದರ್ಥವನ್ನು ತುಂಬಿಕೊಂಡು, ಓದುಗರ ಮನ ಸೆಳೆಯುತ್ತವೆ. ಗಾದೆಗಳು ಗಾತ್ರದಲ್ಲಿ ಕಿರಿದು. ಆದರೆ, ಅನುಭವದ ಹಿನ್ನೆಲೆಯಲ್ಲಿ ಈ ಗಾದೆಗಳು ರೂಪುಗೊಂಡಿರುವುದರಿಂದ ಅವುಗಳಿಗೆ ಅರ್ಥ ಹೆಚ್ಚು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತೇ ಇವುಗಳ ಹಿರಿಮೆಗೆ ಸಾಕ್ಷಿ. ಇಂತಹ ನೂರಾರು ಗಾದೆಗಳನ್ನು ಸಂಗ್ರಹಿಸಿರುವ ಲೇಖಕರು, ಅವುಗಳ ಅರ್ಥಸಹಿತ ವಿವರಣೆಯನಗ್ನು ನೀಡುವ ಮೂಲಕ ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ. ಅಗತ್ತಕ್ಕೆ ತಕ್ಕಂತೆ ಚಿತ್ರಗಳನ್ನು ಸಹ ನೀಡಿದ್ದು, ಪರಿಣಾಮಕತೆಯನ್ನು ಹೆಚ್ಚಿಸಿದೆ.

About the Author

ಸಂಪಟೂರು ವಿಶ್ವನಾಥ್
(28 February 1938)

ಲೇಖಕ ಸಂಪಟೂರು ವಿಶ್ವನಾಥ್‌ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್‌ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...

READ MORE

Related Books