ಕನ್ನಡವೆನ್ನಿ ಜೊತೆಯಲಿ ಬನ್ನಿ

Author : ರಾ.ನಂ. ಚಂದ್ರಶೇಖರ್

Pages 210

₹ 140.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಸಪ್ನ ಬುಕ್ ಹೌಸ್, ಬೆಂಗಳೂರು

Synopsys

ಪ್ರಾದೇಶಿಕವಾದವನ್ನು ಸಂಕುಚಿತತೆ ಎಂದು ಅರ್ಥೈಸುವ ಕಾಲದಲ್ಲಿ ನಾವಿಂದು ನಿಂತಿದ್ದೇವೆ.ಜಾಗತೀಕರಣದ ರುಚಿ ತೋರಿಸಿದ ಅಮೆರಿಕದಂಥ ದೇಶದಲ್ಲಿ ಮತ್ತೆ ಸ್ಥಳೀಯತೆಗೆ ಗೌರವ ಸಲ್ಲುತ್ತಿದೆ! “ಅಮೆರಿಕ ಮೊದಲು' ಎನ್ನುವ ಅಭಿಯಾನವೇ ಶುರುವಾಗಿದೆ.ಭಾರತವು ವಿಭಿನ್ನ ಸಂಸ್ಕೃತಿ,ಭಾಷೆ,ಭೌಗೋಳಿಕ ಲಕ್ಷಣವು ದೇಶದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ.ನಾಡಪ್ರೇಮವನ್ನು ಜಾಗೃತಗೊಳಿಸುವ, ನಾಡು-ನುಡಿಯ ಸಮಸ್ಯೆಗಳನ್ನು ವಿಶ್ಲೇಷಿಸುವ 'ಕನ್ನಡವೆನ್ನಿ ಜೊತೆಯಲಿ ಬನ್ನಿ' ಪುಸ್ತಕವನ್ನು ರಾ.ನಂ. ಚಂದ್ರಶೇಖರ ಹೊರತಂದಿದ್ದಾರೆ.ಕನ್ನಡ ಪರ ಹೋರಾಟಗಳ ಇತಿಹಾಸ,ನಾಡಿನ ಉದ್ಯೋಗ,ಆರ್ಥಿಕ ಸ್ಥಿತಿಗತಿ ಕುರಿತು ಚರ್ಚಿಸಲಾಗಿದೆ.ಕನ್ನಡಿಗರು ಕ್ರಮಿಸಬೇಕಾದ ಹಾದಿಯ ಕುರಿತು ವಿವರಿಸಲಾಗಿದೆ . ಕನ್ನಡ ಸಂಘಟನೆಗಳು, ಸರಕಾರ ಮತ್ತು ಸಾಮಾನ್ಯ ಕನ್ನಡಿಗನ ಜವಾಬ್ದಾರಿಯನ್ನು ಲೇಖಕರು ನೆನಪಿಸಿದ್ದಾರೆ.

About the Author

ರಾ.ನಂ. ಚಂದ್ರಶೇಖರ್

ಕನ್ನಡದ ಹಿರಿಯ ಹೋರಾಟಗಾರ, ಸಾಹಿತಿ, ರಾ.ನಂ. ಚಂದ್ರಶೇಖರ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ಬರವಣಿಗೆಯ ಮೂಲಕ ಕನ್ನಡ ಭಾಷಾ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ಚೂಡಾಮಣಿ, ಕನ್ನಡ ರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕನ್ನಡ ಬಾವುಟದ ರೂವಾರಿ, ಹಿಮಾಲಯದಲ್ಲಿ ಕನ್ನಡ ಧ್ಯಾನ, ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ, ವಿಮಾನ ಯಾನ ಮುಂತಾದವು.  ...

READ MORE

Related Books