ಗಡಿನಾಡ ನುಡಿಸೊಗಡು

Author : ಎ. ಮೋಹನ ಕುಂಟಾರ್

Pages 180

₹ 150.00
Year of Publication: 2017
Published by: ಯಾಜಿ ಪ್ರಕಾಶನ
Address: ಹೊಸಪೇಟೆ

Synopsys

ಭಾರತದ ಪ್ರತಿಯೊಂದು ರಾಜ್ಯಗಳಲ್ಲಿ ಕೂಡ ಅಲ್ಲಿನದೇ ಆದ ಪ್ರತ್ಯೇಕ ಮತ್ತು ವಿಶಿಷ್ಟ ಸಂಸ್ಕೃತಿಯಿದೆ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ, ಭಾಷಾವಾರು ಸಂಧರ್ಭಗಳಲ್ಲಿ ಅಥವಾ ಉಡುಗೆ ತೊಡುಗೆಯ ವಿಷಯಗಳಲ್ಲಿ ಪ್ರತಿ ಸಂಸ್ಕೃತಿಯು ವಿಭಿನ್ನವಾಗಿ ಗುರುತಿಸಿಕೊಂಡಿದೆ. ಆದರೆ ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡಂತಹ ಪ್ರದೇಶಗಳ ಪರಿಸ್ಥಿತಿ ಮಾತ್ರ ವಿಭಿನ್ನ. ಅಲ್ಲಿ ಎರಡೂ ರಾಜ್ಯಗಳ ಸಂಸ್ಕೃತಿ ಮೇಳೈಸಿರುತ್ತದೆ. ಜನರ ವೇಷ ಭೂಷಣ, ನಡೆ ನುಡಿ, ಸಾಂಸ್ಕೃತಿಕ ಹಿನ್ನೆಲೆ ಎಲ್ಲವೂ ಎರಡೂ ರಾಜ್ಯಗಳ ಪ್ರಭಾವಕ್ಕೆ ಒಳಗಾಗಿರುತ್ತವೆ. ಇಂತಹುದೇ ಒಂದು ಗಡಿ ಜಿಲ್ಲೆಯಾದ ಕಾಸರಗೋಡಿನ ಕುರಿತು ಬರೆದಿರುವಂತಹ ಕೃತಿ ಗಡಿನಾಡ ನುಡಿ ಸೊಗಡು. ಕೇರಳ ಮತ್ತು ಕರ್ನಾಟಕದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಎರಡೂ ಜಿಲ್ಲೆಗಳ ಸಂಸ್ಕೃತಿಯ ಪ್ರಭಾವ ಹೇರಳವಾಗಿ ಕಾಣಬಹುದು. ಈ ಪುಸ್ತಕವು ಸಂಸ್ಕೃತಿಯ ಜೊತೆಗೆ ಭಾಷಾ ಕೊಡುಕೊಳ್ಳುವಿಕೆಯ ಕುರಿತು ವಿಶೇಷವಾಗಿ ಮಾಹಿತಿಯನ್ನು ನೀಡುತ್ತದೆ. ಲೇಖಕರಾದ ಮೋಹನ್‍ ಕುಂಟಾರ್‍ ಅವರು ಬರೆದಂತಹ ಹಲವು ಲೇಖನಗಳ ಸಂಗ್ರಹ ಇದಾಗಿದ್ದರು ಪುಸ್ತಕವು ಗಡಿನಾಡ ಸೊಬಗಿನ ಕುರಿತು ಮತ್ತು ಅಲ್ಲಿನ ಪರಿಸ್ಥಿತಿಗಳ ಕುರಿತು ಕಲಾತ್ಮಕವಾದ ವಿವರಣೆಯನ್ನು ನೀಡಿದ್ದಾರೆ.

About the Author

ಎ. ಮೋಹನ ಕುಂಟಾರ್
(25 May 1963)

ಡಾ. ಎ. ಮೋಹನ್ ಕುಂಟಾರ್ ಅವರು 25-05-1963ರಂದು ಜನಿಸಿದರು. ಬಿ.ಎ, ಎಂ.ಎ, ಎಂ.,ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ  ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ,”ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ.  ...

READ MORE

Related Books