ರಾಜಾವಳಿ ಕಥಾವತಾರ ಪ್ರಾಚೀನ ಕನ್ನಡದ ಹೆಮ್ಮೆಯ ಗದ್ಯ ಕೃತಿ. ಮೂಲ ಕೃತಿಯಲ್ಲಿ ಜೈನಾವತರಣದ ಛಾಯೆ ಎದ್ದು ಕಾಣುತ್ತಿದ್ದು, ಜೈನ ಪಾರಿಭಾಷಿಕ ‘ಲೋಕ ಸ್ವರೂಪ’ದ ಬಗ್ಗೆಯೂ ಮಾಹಿತಿಯು ಕಂಡು ಬರುತ್ತದೆ. ಧಾರ್ಮಿಕ, ಚಾರಿತ್ರಿಕ ಮತ್ತು ಕಾಲ್ಪನಿಕಗಳ ಸಂಯೋಜನೆಯಂತೆ ಸಾಗುವ ಮೂಲ ಗದ್ಯಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ, ಯಾವುದೇ ವ್ಯಾಕೃರಣ ತೊಂದರೆ ಆಗದಂತೆ, ಅರ್ಥ ವ್ಯತ್ಯಾಸ ಕಂಡು ಬರದಂತೆ ಡಾ. ರಾಗೌರವರು ಈ ಕೃತಿಯನ್ನು ರಚಿಸಿದ್ದಾರೆ. ಹಳೆಗನ್ನಡದ ಸಾಹಿತ್ಯದ ಓದು,ಮರೆಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಈ ಕೃತಿ ಯುವ ತಲೆಮಾರಿಗೆ ಹೊಸತರದ ಓದಿನ ರುಚಿಯನ್ನು ಕೊಡುತ್ತದೆ.