ಪಂಪನ ಆದಿಪುರಾಣ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 168

₹ 200.00




Year of Publication: 2014
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಪಂಪ, ಪೊನ್ನ, ರನ್ನ, ಜನ್ನ, ರುದ್ರಭಟ್ಟ-ಕನ್ನಡಿಗರ ಬಾಯಲ್ಲಿ ಕುಣಿದಾಡುವ ಹೆಸರುಗಳು. ಆದರೆ ಅವರ ಕೃತಿಗಳನ್ನು ಓದಿದ ಜನರು ಎಷ್ಟಿದ್ದಾರೆ? ತೀರಾ ಕಡಿಮೆ. ಈ ಸ್ಥಿತಿಗೆ ಒಂದು ಕಾರಣವೆಂದರೆ ಈ ಕವಿಗಳ ಕಾವ್ಯಗಳು ಹಳೆಗನ್ನಡದಲ್ಲಿ ಇವೆ ಎನ್ನುವುದು. ಕಾಲ ಸವೆದಂತೆಲ್ಲ ಪೂರ್ವ ಕಾವ್ಯಗಳೂ ನಮ್ಮಿಂದ ದೂರವಾಗುತ್ತ ಹೋಗುತ್ತವೆ; ಕಾರಣ ಭಾಷೆ ಬದಲಾಗುತ್ತಲೇ ಇರುತ್ತದೆ. ಅದೇ ರೀತಿ ಸಮುದಾಯದ ಆಸಕ್ತಿಗಳು ಕೂಡ. ಆದರೂ ಈ ಕವಿಗಳು ಬರೆದಿಟ್ಟುಹೋದ ಮಹಾಕಾವ್ಯಗಳನ್ನು ನಾವು ಓದುವುದು ಬೇಡವೇ? ಆರಂಭದಲ್ಲೇ ನಮ್ಮನ್ನು ದಿಕ್ಕೆಡಿಸಬಹುದಾದಂಥ ಕಂದ, ವೃತ್ತ, ವಚನಗಳು ಹಾಗೂ ಈಗ ಬಳಕೆಯಲ್ಲಿಲ್ಲದ ಕನ್ನಡದ ಪದಗಳು ನಮ್ಮದೇ ಎನಿಸಬೇಕಾದರೆ ತಿಳಿದವರ ಸಹಾಯ ಅಗತ್ಯ, ಅಂಥ ಕೆಲಸವನ್ನು ಕವಿ ಎಚ್.ಎಸ್.ವಿಯವರು ಮಾಡುತ್ತಲೇ ಬಂದಿದ್ದಾರೆ. ಅದರ ಪರಿಣಾಮವೇ  'ಪಂಪನ ಆದಿಪುರಾಣದ ತಿಳಿಗನ್ನಡ ಅವತರಣ'.

 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books