ಪತ್ರ ಪರಾಚಿ

Author : ಕೃಷ್ಣಾನಂದ ಕಾಮತ್

Pages 164

₹ 90.00




Year of Publication: 2014
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.

Synopsys

‘ಪತ್ರ ಪರಾಚಿ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪತ್ರಗಳ ಸಂಕಲನವಾಗಿದೆ. ಕೃತಿಯ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳು ಹೀಗೆ ವಿಶ್ಲೇಷಿತವಾಗಿದೆ : ಕಣ್ಮರೆಯಾಗುತ್ತಿರುವ ಪತ್ರಲೇಖನ ಕಲೆಯಲ್ಲಿಯ ಸಾಹಿತ್ಯಾಂಶಗಳನ್ನು ಗುರುತಿಸಿ, ಮನೋಹರ ಗ್ರಂಥ ಮಾಲೆಯು ಪ್ರೇಯಸಿಗೆ ಪತ್ರಗಳು' ಸಂಕಲನವನ್ನು 1991ರಲ್ಲಿ ಪ್ರಕಟಿಸಿತು. ಈಗ ಅದೇ ಲೇಖಕರ 'ಪತ್ರ -ಪರಾಚಿ' ಗ್ರಂಥವನ್ನು ಬೆಳಕಿಗೆ ತರುತ್ತಿರುವದು ಅಭಿಮಾನ ಹಾಗೂ ನೆಮ್ಮದಿಯ ಸಂಗತಿಯಾಗಿದೆ. 'ಪ್ರೇಯಸಿಗೆ ಪತ್ರಗಳು' ಜನರ ಮೆಚ್ಚಿಗೆ ಹಾಗೂ ಒಳ್ಳೆಯ ವಿಮರ್ಶೆ ಗಳಿಸಿತು. ಈ ಸಂಕಲನವೂ ಲೇಖಕರು ಕ೦ಡುಕೊಂಡ ಜೀವನದರ್ಶನದ ಹಲವು ಇಣುಕುನೋಟಗಳನ್ನು ಒದಗಿಸುತ್ತದೆ ಎಂದಿದೆ.

ಈ ಸಂಕಲನದಲ್ಲಿ ಸಂಪಾದಿಸಿರುವ 44 ಪತ್ರಗಳು, ಅಮೆರಿಕೆಯಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಹೋಗಿ, ಈಗ ಅಲ್ಲೇ ವಾಸಿಸುತ್ತಿರುವ, ನಮ್ಮ ಮಗ ವಿಕಾಸನಿಗೆ ಕಾಮತರು, ಒ೦ದು ದಶಕಕ್ಕೂ ಮಿರಿ ಬರೆದ ನೂರಾರು ಪತ್ರಗಳ ಸಾರವನ್ನು ಹೊಂದಿವೆ. ವಿದೇಶದಲ್ಲಿದ್ದು ಊರಿನ, ಮನೆಯ, ತನ್ನವರ ವಿಚಾರಗಳನ್ನು ತಿಳಿದುಕೊಳ್ಳಲು ಹಾತೊರೆಯುತ್ತಿದ್ದವನಿಗೆ, ಅವೆಲ್ಲವನ್ನು ತಪ್ಪದೇ ಬರೆದು ತಿಳಿಸುತ್ತಿದ್ದರು. ಜೊತೆಗೆ, ತನಗಿಷ್ಟವಿದ್ದ ಮನುಷ್ಯ ವ್ಯಾಪಾರಗಳು, ಜೀವಿಲೋಕದ ವರ್ತನೆ, ಸ್ವಾರಸ್ಯಕರ ವ್ಯಕ್ತಿ-ಘಟನೆಗಳ ಕುರಿತೂ ಬರೆಯುತ್ತಿದ್ದರು.

ನಿರಂತರವಾಗಿ ನಡೆದ ಈ ಪತ್ರ ವ್ಯವಹಾರದಲ್ಲಿ ಒಮ್ಮೊಮ್ಮೆ ಒಂದೇ ಬಗೆಗಿನ ಮಾಹಿತಿ ಮೂರು-ನಾಲ್ಕು ಪತ್ರಗಳಲ್ಲಿ ಮುಂದುವರಿದು ಬರುತಿತ್ತು. ಇಂಥ ಮಾಹಿತಿಯನ್ನು ಒಂದೆಡೆ ತಂದು ಕಾಣಿಸಿದ್ದೇನೆ. ವೈಯಕ್ತಿಕ, ಸಂಸಾರಿಕ, ಓದುಗರಿಗೆ ರುಚಿಸದೇ ಹೋಗಬಹುದಾದ ಭಾಗಗಳನ್ನು ಕೈಬಿಟ್ಟಿದ್ದೇನೆ. ಜೀವನಾಸಕ್ತರಿಗೆ, ಮುಖ್ಯವಾಗಿ ತರುಣಜನಾಂಗದವರಿಗೆ ಉಪಯುಕ್ತವಾಗಬಹುದಾದ ಮಾಹಿತಿಯನ್ನು ಆಯ್ಕೆಮಾಡಲು ಹವಣಿಸಿದ್ದೇನೆ. ಜೊತೆಗೆ ಜೀವನೋಲ್ಲಾಸವನ್ನು ಕೊನೆಯವರೆಗೆ ಕಾಯ್ದುಕೊಂಡ ಕಾಮತರ ವರ್ಣಮಯ ಬದುಕಿನ ಮೇಲೆ ಬೆಳಕು ಬೀರುವಂಥವನ್ನು, ದೈನಂದಿನ ನೂರೆ೦ಟು ಸಮಸ್ಯೆಗಳ ನಡುವೆಯೂ ಸಾಧ್ಯವಾಗಿಸಬಹುದಾದ ನೆಮ್ಮದಿಯ ಬಗ್ಗೆ ಅವರ ಹಲವು ಅನಿಸಿಕೆಗಳಿದ್ದ ಪತ್ರಗಳನ್ನು ಸೇರಿಸಿದ್ದೇನೆ’ ಎಂದಿದೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books