ನೆನೆವೆನಂದಿನ ಬಾಳಚಿತ್ರಣವ

Author : ವಿಜಯನಳಿನಿ ರಮೇಶ

Pages 140

₹ 135.00

Buy Now


Year of Publication: 2016
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ ಕರ್ನಾಟಕ - 577417
Phone: 08183-265476

Synopsys

ಲೇಖಕಿ ವಿಜಯನಳಿನಿ ಅವರ ಸಂಪಾದನೆಯಲ್ಲಿ ಮೂಡಿಬಂದಿರುವ ಅಪೂರ್ವ ಕೃತಿ ಇದು. ತಂಗಿ ಸಾವಿತ್ರಮ್ಮನಿಂದ ಅಕ್ಕ ಮಾಂಕಾಳಮ್ಮನಿಗೆ ಪತ್ರಮಾಲೆಯೊಂದರ ಸರಣಿಗಳನ್ನು ದಾಖಲಿಸಿದ, 1930 ರಿಂದ 1990 ರವರೆಗಿನ ಕಥನಗಳನ್ನು ಪುಸ್ತಕ ಹೇಳುತ್ತದೆ. ತನ್ನ ಅಕ್ಕನೊಂದಿಗೆ ನಡೆಸಿದ ಏಕಮುಖಿ ಸಂವಾದ ಮಾತುಗಾರಿಕೆಯು ಪತ್ರಮಾಲೆಯ ಮುಖೇನ ಬರಹ ರೂಪ ತಾಳಿ, ಕಥನವಾಗಿ ತಂಗಿಯು ತಾನು ಕಂಡುಂಡ ಬವಣೆಯನ್ನು ಸರಿಸುಮಾರು ಅರವತ್ತರ ಆಸುಪಾಸಿನ ಹೊತ್ತಿಗೆ ಸ್ಮರಿಸಿ, ತನ್ನ ಅಕ್ಕನ ಕುರಿತು ತಾನು ತೋಡಿಕೊಳ್ಳುವ ಸ್ವಗತ ಲಹರಿ ಒಂದು ರೀತಿಯ ಸಂವಾದದ ಮೂಲಕ ನಡೆದ ನಿವೇದನೆ ಎಂದೇ ಹೇಳಬಹುದು. ಅಂದಿನ ದಿನಮಾನಗಳಿಂದ ಆರಂಭವಾದ ಈ ಕಥನವು ಸಾಗುತ್ತಾ ಸಾಗುತ್ತಾ ವ್ಯಕ್ತಿಗತ ಸ್ವಗತವಾಗದೇ ಎಲ್ಲರನ್ನೂ, ಎಲ್ಲವನ್ನೂ ನೆನೆಯುವ ಕಥನವಾಗಿ ರೂಪುಗೊಂಡಿದೆ. 

About the Author

ವಿಜಯನಳಿನಿ ರಮೇಶ
(02 March 1949)

ಸದ್ಯ ಶಿರಸಿಯ ನಿವಾಸಿ ಆಗಿರುವ ವಿಜಯನಳಿನಿ ರಮೇಶ ಅವರು ಹೈಸ್ಕೂಲ್‌ ಶಿಕ್ಷಣವನ್ನು ಸಾಗರದ ನಿರ್ಮಲಾ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ಪಡೆದರು. ನಂತರ ಶಿರಸಿಯ ಎಂ.ಎಂ. ಕಾಲೇಜ್‌ ಆಫ್‌ ಆಟ್ಸ್‌, ಕಾಮರ್ಸ್‌ ಅಂಡ್‌ ಸೈನ್ಸ್‌ ಕಾಲೇಜಿನಲ್ಲಿ ಅಧ್ಯಯನ ಮುಂದುವರೆಸಿದರು. ಅವರು ನೆನೆವೆನಂದಿನ ಬಾಳ ಚಿತ್ರಣ ಕೃತಿ ರಚಿಸಿದ್ದಾರೆ. ...

READ MORE

Related Books