ತಮಿಳುನಾಡಿನ ಕನ್ನಡ ಶಾಸನಗಳು

Author : ಪಿ.ವಿ.ಕೃಷ್ಣಮೂರ್ತಿ

Pages 244

₹ 180.00




Year of Publication: 2018
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಚಾಮರಾಜಪೇಟೆ, ಬೆಂಗಳೂರು-560 018

Synopsys

“ತಮಿಳುನಾಡಿನ ಕನ್ನಡ ಶಾಸನಗಳು” ಮೂರನೆಯ ಪರಿಷ್ಕೃತ ವಿಸ್ತೃತ ಮುದ್ರಣ 2018. ಈ ಕೃತಿಯನ್ನು ಡಾ. ಪಿ.ವಿ. ಕೃಷ್ಣಮೂರ್ತಿ ಅವರು ಸಂಪಾದಿಸಿದ್ದಾರೆ. ತಮಿಳುನಾಡಿನಲ್ಲಿರುವ ಕನ್ನಡ ಶಾಸನಗಳು ಅವುಗಳ ಹರವು, ಸ್ವರೂಪ ಹಾಗೂ ಭಾಷಿಕ ಹಿನ್ನೆಲೆಯಲ್ಲಿ 1. ಸಹಜ ಕನ್ನಡ ಪ್ರದೇಶದ ಶಾಸನಗಳು. 2. ಕನ್ನಡ ಅರಸುಮನೆತನಗಳ ರಾಜಭಾಷಾ ಶಾಸನಗಳು. 3. ದಿಗ್ವಿಜಯ ಸ್ಮಾರಕಗಳು ಎಂದು ಮೂರು ವಿಭಾಗಳಾಗಿ ವಿಂಗಡಿಸಿ, ಕಾವೇರಿ ತೀರದ ಧರ್ಮಪುರಿ, ಸೇಲಂ ಹಾಗೂ ಈರೋಡ್ ಜಿಲ್ಲೆಗಳಲ್ಲಿ, ತಮಿಳುನಾಡಿನ ಒಟ್ಟು ಕನ್ನಡ ಶಾಸನಗಳಲ್ಲಿ ಶೇಖಡಾ 60ಕ್ಕೂ ಹೆಚ್ಚಿನವು ಹರಡಿಕೊಂಡಿವೆ ಎಂಬುದನ್ನು ಸಾಧಾರವಾಗಿ ತೋರಿಸಿ “ಕಾವೇರಿಯಿಂದ ಮಾ……… “ ಎಂಬ ಕವಿರಾಜಮಾರ್ಗಕಾರನ ಮಾತುಗಳು ದಿಟ ಎಂಬುದಕ್ಕೆ ಸಾಕ್ಷಿ ನೀಡಿದ್ದಾರೆ.

ಜನ್ಮತಃ ತಮಿಳರಾದ ಚೋಳ ಅರಸರೂ ತಮ್ಮ ಆಳ್ವಿಕೆಯ ಆರಂಭದಲ್ಲಿಈ ಪ್ರದೇಶಗಳಲ್ಲಿನ ಸ್ಥಳೀಯ ಭಾಷೆಯಾಗಿದ್ದ ಕನ್ನಡದಲ್ಲೇ ಶಾಸನಗಳನ್ನು ಹಾಕಿಸಿರುವ ಗಮನಾರ್ಹ ಅಂಶಗಳನ್ನು ಇಲ್ಲಿನ ಅಧ್ಯಯನದಲ್ಲಿ ಲೇಖಕರು ತೋರಿಸಿಕೊಟ್ಟಿದ್ದಾರೆ. ಇವಲ್ಲದೇ, ಶಾಸನೋಕ್ತವಾದ ಸ್ಥಳನಾಮಗಳು ಹಾಗೂ ವ್ಯಕ್ತಿನಾಮಗಳನ್ನು ವಿಶ್ಲೇಷಿಸಿ, ಆ ಪ್ರಾಂತ್ಯಗಳು ನಿಸ್ಸಂದಿಗ್ದವಾಗಿ ಪ್ರಾಚೀನ ಕರ್ನಾಟಕದ ಒಂದು ಭಾಗವಾಗಿದ್ದವೆಂಬುದನ್ನು ರುಜುವಾತು ಪಡಿಸಿದ್ದಾರೆ. ಅಲ್ಲದೆ, ಆ ಪ್ರದೇಶಗಳಲ್ಲಿಇಂದಿಗೂ ಉಳಿದು ಬಂದಿರುವ ಜಾನಪದ ಆಚರಣೆಗಳು, ಹಬ್ಬ ಹರಿದಿನಗಳು, ಸಂಪ್ರದಾಯಗಳು ಇತ್ಯಾದಿ ಕಡೆ ಗಮನ ಸೆಳೆದಿದ್ದಾರೆ. ಪ್ರಾದೇಶಿಕ ಆಡಳಿತ ವಿಭಾಗಗಳು ಮತ್ತು ಭೌಗೋಳಿಕ ವಿಭಾಗಗಳು. ರಾಜಕೀಯ ಮಹತ್ವ, ಧಾರ್ಮಿಕ ಮಹತ್ವ, ದೇವಾಲಯ ರಚನೆ, ಜೀರ್ಣೋದ್ಧಾರ, ಪೂಜಾ ಕೈಂಕರ್ಯಗಳು, ಕೃಷಿ, ನೀರಾವರಿ, ವಾಣಿಜ್ಯ, ನಾಣ್ಯಗಳು, ವೀರಪರಂಪರೆ, ವ್ಯಕ್ತಿನಾಮಗಳು, ಸ್ಥಳನಾಮಗಳು, ಸಾಹಿತ್ಯ, ಭಾಷೆ,ಲಿಪಿ, ಶಾಸನಗಳ ಸೂಚಿ ಮತ್ತು ಸಾರಾಂಶಗಳು ಇತ್ಯಾದಿ ಅಧಿಕೃತವಾಗಿ ದಾಖಲಿಸಲಾಗಿದೆ

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books