ವಚನ ಸುಮ (ಕಾಳೂರಲಿಂಗೇಶ್ವರ ವಚನಗಳು)

Author : ಪುಷ್ಪಾ ಜಿ ಕನಕಾ

₹ 0.00




Year of Publication: ೨೦೦೮
Published by: ಧರಿನಾಡ ಕನ್ನಡ ಸಂಘ ಕೇಂದ್ರ ಸಮಿತಿ (ರಿ) ಬೀದರ
Address: ಅಲ್ಲಮ ಪ್ರಭುನಗರ ಬೀದರ
Phone: 9341056006

Synopsys

ಪುಷ್ಪಾ ಜಿ ಕನಕ ಅವರು ಆಧುನಿಕ ವಚನಗಳನ್ನು ರಚಿಸಿ ಶರಣರ ಚಿಂತನೆಯನ್ನು ಮುಂದಿನ ತಲೆಮಾರಿಗೂ ತಲುಪಿಸುವ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದಾರೆ ಎನ್ನುವ ಮಾತಿಗೆ ಈ ಕೃಷಿ ಸಾಕ್ಷಿಯಾಗಿ ನಿಲ್ಲುತ್ತವೆ. ಕಾಳೂರಲಿಂಗೇಶ್ವರರಲ್ಲಿ ಅವರಿಗಿರುವ ಅಪಾರವಾದ ಭಕ್ತಿಯೇ ಇಂತಹ ಮಹತ್ವದ ವಚನಗಳ ರಚನೆಗೆ ಪ್ರೇರಣೆಯಾಗಿದೆ. ಇವರ ವಚನಗಳು ಸರಳವಾದ ಆಡುನುಡಿಯಲ್ಲಿ ರಚನೆಯಾಗಿವೆ. ಸಹೃದಯರಿಗೆ ನೇರವಾಗಿ ಮನ ಮುಟ್ಟುವಂತೆ ನಿರೂಪಿತವಾಗಿವೆ. ಒಳ್ಳೆಯ ಆಲೋಚನೆಯಿಂದ, ದೇವರ ಮೇಲಿನ ಭಕ್ತಿಯಿಂದ ಮಾನವ ತನ್ನೆಲ್ಲ ಬೇಕು-ಬೇಡಗಳನ್ನು ಪೂರೈಸಿಕೊಳ್ಳಬಹುದು ಎಂದು ಕವಿಯತ್ರಿಯ ಮನಸ್ಸು ಹೇಳುತ್ತದೆ. ಶ್ರೀಮತಿ ಸುಷ್ಮಾ ಅವರ ಚಿಂತನೆಯ ಧಾರೆ ಬಹಳ ನಿರರ್ಗಳವಾಗಿ ಹರಿದು ಬಂದಿದೆ. ಇವರ ವಚನಗಳಲ್ಲಿ ಮಾನವಕುಲದ ಉದ್ಧಾರದ ತೀವ್ರ ಕಾಳಜಿ ಇದೆ, ಕೆಲವು ಸಲ ದೇವರಿಗೆ ಪ್ರಶ್ನೆ ಮಾಡುತ್ತಾರೆ. ಹಾವು, ಚೇಳುಗಳಂತೆ ಮನುಷ್ಯರಲ್ಲಿ ವಿಷ ಏಕೆ ಇಟ್ಟೆ ಎಂದು ಶರಣರಂತೆ ಇವರು ಸಹ ಡಾಂಬಿಕ ಭಕ್ತರನ್ನು ಖಂಡಿಸಿದ್ದಾರೆ. ಇದು ಶ್ರೀಮತಿ ಪುಷ್ಪಾ ಅವರ ಚೊಚ್ಚಲ ಕೃತಿಯಾದರೂ ಇಲ್ಲಿ ಅವರಿಗೆ ಜೀವನಾನುಭವ ಸಾಕಷ್ಟಿದೆ ಎಂದನಿಸುತ್ತದೆ. ತಮ್ಮ ವಿಚಾರಗಳನ್ನು ಬಹಳ ವಿಶಿಷ್ಟ ರೀತಿಯಲ್ಲಿ ಅಭಿವೃಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಈ ಕೃತಿಯು ಬಹುದೊಡ್ಡ ಕೊಡುಗೆಯಾಗಿದೆ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿಯಾಗುವುದಿಲ್ಲ. ಇನ್ನೂ ಅನೇಕ ವಚನಗಳು: ಇವರಿಂದ ರಚನೆಯಾಗಲೆಂದು ಹಾರೈಸುತ್ತೇನೆ ಎಂದು ಸಿದ್ರಾಮಪ್ಪಾ ಮಾಸಿಮಡೆ ಬೆನ್ನುಡಿಯಲ್ಲಿ ತಿಳಿಸಿದ್ದಾರೆ. 

 

Related Books