ವಚನಸಿರಿ

Author : ರಮೇಶಬಾಬು ಯಾಳಗಿ

Pages 128

₹ 120.00




Year of Publication: 2022
Published by: ಬನಶಂಕರಿ ಪ್ರಕಾಶನ
Address: ಬನಶಂಕರಿ ನಿಲಯ, ಪಂಪಾ ಹೌಸಿಂಗ್ ಕಾಲೋನಿ, ಮಾನವಿ, ರಾಯಚೂರು ಜಿಲ್ಲೆ - 584123

Synopsys

ಆಧುನಿಕ ವಚನಗಳ ಸಂಕಲನ ‘ವಚನಸಿರಿ’. ರಮೇಶಬಾಬು ಯಾಳಗಿ ಅವರ ಈ ಕೃತಿಗೆ ಅಥಣಿಯ ಮೋಟಗಿ ಮಠದ ಪೂಜ್ಯಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಶರಣಬಂಧು ರಮೇಶಬಾಬು ಯಾಳಗಿ ಅವರು ಸಮಾಜಮುಖಿ ಚಿಂತಕರಾಗಿ, ವಚನಕಾರರಾಗಿ, ನುರಿತ ಮಾತುಗಾರರಾಗಿ, ಕ್ರಿಯಾಶೀಲರಾಗಿ ಹೆಸರುವಾಸಿಯಾಗಿದ್ದಾರೆ. ಶ್ರೀಯುತರ ವಚನಗಳು ಹೃದ್ಯವಾಗಿವೆ. ಸಮಾಜದ ಅನೇಕ ಅಂಕುಡೊಂಕುಗಳಿಗೆ ಉತ್ತರವಾಗಿವೆ. ಶರಣರೇ ಅವರ ಕಣ್ಮುಂದಿನ ಬೆಳಕು. ನಾಡು ನುಡಿ ಸಂಸ್ಕೃತಿ ಸಂವರ್ಧಕರೇ ಅವರ ಬದುಕಿನ ಪರಮ ಆದರ್ಶ. ವ್ಯಕ್ತಿ ತಾನು ಬೆಳೆಯುವುದರೊಂದಿಗೆ ಸಮಾಜವನ್ನೂ ಕರೆದುಕೊಂಡು ಹೋಗಬೇಕು ಎನ್ನುವುದಕ್ಕೆ ಒಂದು ಸಾಂಸ್ಕೃತಿಕ ಪ್ರಜ್ಞೆಯ ಶಕ್ತಿಯಾಗಿ ನಮ್ಮ ಕಣ್ಮುಂದೆ ಯಾಳಗಿಯವರು ಇದ್ದಾರೆ ಎಂದಿದ್ದಾರೆ ಚನ್ನಬಸವ ಸ್ವಾಮೀಜಿ.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books