ವಿಮರ್ಶಾ ಕಾರಂಜಿಗಳು

Author : ವಿ.ಗಣೇಶ್‌

Pages 148

₹ 150.00




Year of Publication: 2022
Published by: ನಿವೇದಿತ ಪ್ರಕಾಶನ
Address: ನಂ.3437 , 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9448733323

Synopsys

‘ವಿಮರ್ಶಾ ಕಾರಂಜಿಗಳು’ ವಿ.ಗಣೇಶ್‌ರವರ ವಿಮರ್ಶಾತ್ಮಕ ಕೃತಿಯಾಗಿದೆ. ನಿರಂತರವಾದ ಸಾಹಿತ್ಯೋಪಾಸನೆಯಲ್ಲಿ ತತ್ಪರರು, ಕವಿತೆ, ವ್ಯಕ್ತಿಚಿತ್ರಣ, ಅನುವಾದ, ಕಥೆ, ಕಾದಂಬರಿ, ಸಂಪಾದನೆ ಮುಂತಾದ ಪ್ರಕಾರ ವೈವಿಧ್ಯಗಳಲ್ಲಿ ಎಪ್ಪತ್ತಕ್ಕೂ ಮಿಕ್ಕು ಕೃತಿಗಳನ್ನು ರಚಿಸಿದವರು. ವೃತ್ತಿಯಿಂದ ನಿವೃತ್ತರಾದರೂ, ಪ್ರವೃತ್ತಿಯಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡು ಶಿಕ್ಷಕರಿಗೊಂದು ಮೇಲ್ಪಂಕ್ತಿಯಾಗಿದ್ದಾರೆ. ಪ್ರಚಾರ-ಪ್ರದರ್ಶನ ಪ್ರಿಯರಲ್ಲದ ಕಾರಣ ಶ್ರೀ ಗಣೇಶ್‌ರವರು ಹೆಚ್ಚು ಪ್ರಕಾಶಕ್ಕೆ ಬರಲಿಲ್ಲ. ಅವರು ತಮ್ಮ ಹೃದಯಕ್ಕೆ ಆಪ್ತವಾದ, ತಮ್ಮ ಮೂಲಕ ಸಹೃದಯರಿಗೂ ಪ್ರಿಯವಾಗುವಂತಹ ಆಂಗ್ಲ ಕವಿತೆಗಳಲ್ಲಿ ಕೆಲವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗಾಗಲೇ ಎರಡು ಇಂಗ್ಲೀಷ್ ಕಾದ೦ಬರಿಗಳನ್ನು, ಒಂದು ಆತ್ಮಚರಿತ್ರೆಯನ್ನು ಹಾಗೂ ಒಂದು ಕಥಾಸಂಕಲನವನ್ನು ಕನ್ನಡಕ್ಕೆ ತಂದ ಎ.ಗಣೇಶ್‌ರವರು ಇದೀಗ ವಿಮರ್ಶಾ ಲೋಕಕ್ಕೂ ಕಾಲಿಡುತ್ತಿದ್ದಾರೆ. ತಾವು ಓದಿದ ಕೆಲವು ಕಥೆಗಳ ಮೇಲಿನ ಅಭಿಪ್ರಾಯವನ್ನು ಈ ಸಂಕಲನದಲ್ಲಿ ವ್ಯಕ್ತಪಡಿಸಲಾಗಿದೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books