''ನಾಚ್ ಗಾನಾ ಮಾಡುವುದಕ್ಕೆ ಹೆಸರುವಾಸಿಯಾದ ಚಾಂದಬೀ ಊರಿಗೆ ಉಪಕಾರಿಯಾಗಿ, ಕುಡಿತವನ್ನು ಹತೋಟಿಗೆ ತಂದು, ಹೆಣ್ಣುಮಕ್ಕಳನ್ನು ಉದ್ಧರಿಸಲು ಶಾಲೆ ಪ್ರಾರಂಭಿಸುವ ಕ್ರಾಂತಿಕಾರಿ ಕಥನ ಕಂಬಾರರ ಜನಪದೀಯ ವಿಶ್ಲೇಷಣೆಯಿಂದ ಹೊಸ ಮೆರುಗನ್ನು ಪಡೆದಿದೆ,'' ಎನ್ನುತ್ತಾರೆ ಲೇಖಕ ಮಹೇಶ ಅರಬಳ್ಳಿ. ಅವರು ಚಂದ್ರಶೇಖರ ಕಂಬಾರ ಅವರ ‘ಚಾಂದಬೀ ಸರಕಾರ’ ಕಾದಂಬರಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
'ಚಾಂದಬೀ ಸರಕಾರ’ ಶಿವಾಪುರದ ಮತ್ತೊಂದು ಕಥನ. ‘ಸರಕಾರ’ ಊರ ಮಂದಿ ಪ್ರಮುಖರನ್ನು ಸಂಭೋದಿಸಲು ಬಳಸುವ ಗೌರವಸೂಚಕ ಪದ.
ಬಲದೇವನಾಯಕ ಕಾಲದ ಹಿಡಿತಕ್ಕೆ ಸಿಕ್ಕು ತತ್ತರಿಸಿದಾಗ ಚಾಂದಬೀ ಸಂಗಾತಿಯಾಗುತ್ತಾಳೆ. ಮೊದಲ ಹೆಂಡತಿ ಕಾವೇರಿಯ ಮನೆಯವರು ಮಗ ಕೃಷ್ಣನನ್ನು ಇವನಿಂದ ದೂರಮಾಡುತ್ತಾರೆ. ಅವನು ತನ್ನ ಅಪ್ಪ ಅಮ್ಮನನ್ನು ಸೇರುವನೇ ಎಂಬ ವಿಷಯದ ಸುತ್ತ ಈ ಕಥನ ಜರುಗುತ್ತದೆ.
ಹಲವರನ್ನು ಕೆಲವರು ಆಳುತ್ತಾರೆ. ರೈತ ಸಮುದಾಯ ಕುಡಿತಕ್ಕೆ ತಮ್ಮದೆಲ್ಲವನ್ನೂ ಕಳೆದುಕೊಂಡು ಅವರ ಹೆಂಡತಿ ಮಕ್ಕಳು ಬೀದಿಗೆ ಬೀಳುತ್ತಾರೆ. ಐನೂರು ವರ್ಷ ಹಳೆಯ ದೊಡ್ಡ ಸಂಪಿಗೆ ಮರದಲ್ಲಿ ನೂರೈವತ್ತು ವರ್ಷದ ಮುದುಕಿ ನೆಲೆಸಿದ್ದಾಳೆ. ಅವಳ ನಂಬಿಕೆಯಲ್ಲಿ ಜೋಗ್ತಿಯರು ಊರಿನ ಒಳಿತಿಗೆ ಹಾಡುತ್ತಾರೆ. ಅನಾಥ ಮಕ್ಕಳು ತುತ್ತು ಕೂಳಿಗೆ ಕೆಲವರ ವಶವಾಗಿದ್ದಾರೆ. ಕನಸಿಲ್ಲದ ಕಣ್ಣುಗಳಲ್ಲಿ ಭರವಸೆಯ ಹೊಳಪೂ ಇಲ್ಲ. ಹಸಿದ ಒಡಲಿಂದ ಹೊಮ್ಮಿದ ನಿಟ್ಟುಸಿರು ಎಲ್ಲರನ್ನೂ ಸುಡುವಂತಿದೆ.
ನಾಚ್ ಗಾನಾ ಮಾಡುವುದಕ್ಕೆ ಹೆಸರುವಾಸಿಯಾದ ಚಾಂದಬೀ ಊರಿಗೆ ಉಪಕಾರಿಯಾಗಿ, ಕುಡಿತವನ್ನು ಹತೋಟಿಗೆ ತಂದು, ಹೆಣ್ಣುಮಕ್ಕಳನ್ನು ಉದ್ಧರಿಸಲು ಶಾಲೆ ಪ್ರಾರಂಭಿಸುವ ಕ್ರಾಂತಿಕಾರಿ ಕಥನ ಕಂಬಾರರ ಜನಪದೀಯ ವಿಶ್ಲೇಷಣೆಯಿಂದ ಹೊಸ ಮೆರುಗನ್ನು ಪಡೆದಿದೆ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.