'ನೋಡುವ ಪುಸ್ತಕ' ವಿಶೇಷ ಸರಣಿ ಲೇಖನ
ರಸಋಷಿ ಕುವೆಂಪು ಅವರ ಕವಿತೆಗಳನ್ನು, ಅವು ಕಟ್ಟಿಕೊಡುವ ದೃಶ್ಯರೂಪಕಗಳೊಂದಿಗೆ ನೀಡುವ ಮಹತ್ವದ ಮತ್ತು ಅಪರೂಪದ ಪುಸ್ತಕ, ಕುವೆಂಪು 'ಅನುರಕ್ತಿ' ಕವಿತೆ - ಚಿತ್ರ.
ಕುವೆಂಪು ಕವಿತೆಯ ಸಾರ, ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿ ಹಾಳೆಗಳ ಮೇಲೆ ಮುದ್ರಿತವಾದರೆ ಹೇಗಿರತ್ತೆ?. ಆ ಅನುಭವ ಅನುಭವಿಸಲು ಬಯಸುವವರು ಈ ಕೃತಿ ಒಮ್ಮೆ ಓದಲೇ ಬೇಕು. ಇದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ, ಸಾಹಿತಿ, ಹವ್ಯಾಸಿ ಛಾಯಾಗ್ರಾಹಕ ಡಾ ಕೆ ಸಿ ಶಿವಾರೆಡ್ಡಿ ಅವರ ಸಂಪಾದಕತ್ವದಲ್ಲಿ ಮೂಡಿಬಂದ ಪುಸ್ತಕ.
ಕರ್ನಾಟಕದ ಅದ್ಬುತ ಸೌಂದರ್ಯ ರಾಶಿ ಈ ಒಂದು ಕೃತಿಯಲ್ಲಿದೆ. ಹಸುರು ಸೀರೆಯುಟ್ಟ ಪ್ರಕೃತಿ, ಅವಳ ಸುತ್ತ ಹಾರಾಡುವ ಅಪರೂಪದ ಹಕ್ಕಿ, ಜೀವರಾಶಿ, ಬೆಟ್ಟ -ಗುಡ್ಡ ಇವೆಲ್ಲದರ ಜೊತೆಗೆ ಹೃದಯಕ್ಕೆ ಹತ್ತಿರವಾಗುವ ದಾರ್ಶನಿಕ ಕವಿತೆಯ ಸಾಲುಗಳು ಹಾ . .. ಎಲ್ಲವೂ ಒಂದಕ್ಕಿಂತ ಒಂದು ಅದ್ಬುತ...ಒಟ್ಟಂದರಲ್ಲಿ ಕವಿತೆ ಮತ್ತು ಸುಂದರ ಪರಿಸರಗಳ ಸಮ್ಮಿಲನವೇ ಈ 'ಅನುರಕ್ತಿ'ಎನ್ನಬಹುದು.
ಒಟ್ಟು 10 ಅಧ್ಯಾಯಗಳಿವೆ.. ಗಾನ, ಹಸುರು, ಕವಿಶೈಲ, ತುಂಗೆ, ತಿಂಗಳ್ ಮಾವ,ಪ್ರಾತಃಕಾಲ,ಕಾಜಾಣ, ಹೂವು-ದೇವರು, ಪ್ರಾರ್ಥನೆ ಮತ್ತು ಗೀತೆ..
'ಗಾನ' ಅಧ್ಯಾಯ
ಈ ಅಧ್ಯಾಯದ ಆರಂಭ ಪ್ರಾರ್ಥನಾ ಗೀತೆಯಿಂದ.ಆಮೇಲೆ ಕವಿಗಳ ಮನೆ, ತಾಯಿ ಮಡಿಲು, ಮೈಸೂರಿನ ಸುತ್ತ ನಮ್ಮನ್ನು ದೃಶ್ಯರೂಪಕದ ಮೂಲಕ ಕವಿ ಬರಹ ಕರೆದುಕೊಂಡು ಹೋಗುತ್ತವೆ.ಪ್ರತಿ ಪುಟದಲ್ಲಿರುವ ಚಿತ್ರಗಳು ಕವಿತೆಯ ಜೊತೆಗೆ ಧ್ವನಿಸುತ್ತವೆ.

'ಹಸುರು'
'ಹಸುರು' ಅಧ್ಯಾಯವಂತು ಕಣ್ ತಂಪೆನಿಸುವ ಸಸ್ಯ ರಾಶಿ, ಹೂವುಗಳ ಸುತ್ತ ಬರೆದ ಕುವೆಂಪು ಸಾಲುಗಳದ್ದೇ ಪೈಪೋಟಿ. ಅದಕ್ಕೆ ಪೂರಕವಾಗುವಂತ ಛಾಯೆಯಂತೂ ವಿನೋದ..
'ಕವಿಶೈಲ'
ಮೂರನೆಯ ಅಧ್ಯಾಯದಲ್ಲಿ, ಕುವೆಂಪು ಮೇಲೆ ಅತೀವ ಪ್ರಭಾವ ಬೀರಿದ ಸ್ಥಳ 'ಕವಿಶೈಲ'ದ ಸುಂದರ ಮುಂಜಾನೆ, ಸಂಜೆಯ ಕೆಂಪೇರಿದ ಬಾನು ಹಾಗೆ ಕತ್ತಲೆಯಲ್ಲೂ ಹೊಳೆಯುವ ಬೆಳಕನ್ನು ಸೆರೆಹಿಡಿಯಲಾಗಿದೆ. ಪಕ್ಕದಲ್ಲಿ ಕುವೆಂಪು ವರ್ಣಿತ 'ಕವಿಶೈಲ'ವಂತೂ ಭಾವವನ್ನು ಕೆಣಕುವಂತಹದ್ದು..
'ತುಂಗೆ'
'ತುಂಗೆ' ಕುವೆಂಪು ಮೇಲೆ ಪ್ರಭಾವ ಬೀರಿದ ಇನ್ನೊಂದು ಸ್ಥಳ,4 ನೇ ಅಧ್ಯಾಯವನ್ನು ಸಂಪೂರ್ಣ 'ತುಂಗೆ'ಯ ವರ್ಣನೆಗೆ ಮೀಸಲಿಟ್ಟಿದೆ. ಪುಟಗಳನ್ನ ತಿರುವು ಹಾಕಿದಾಗ ಅರ್ಥಗರ್ಭಿತ ಕವಿತೆಯ ಸಾಲುಗಳು ಅದಕ್ಕೆ ಹೊಂದುವ ತುಂಗೆಯ ತಟದಲ್ಲಿರುವ ರಾಮ ತೀರ್ಥ, ತೀರ್ಥಹಳ್ಳಿ ರಾಮ ಮಂಟಪ್ಪ ಮತ್ತು ಸಾಗರದ ವಿವಿಧ ಚಿತ್ರಗಳು ಒದುಗರಿಗೆ ಖುಷಿಕೊಡುವಂತಿದೆ.
'ತಿಂಗಳ್ ಮಾವ'
ಮುಂದಿನ ಅಧ್ಯಾಯ 'ತಿಂಗಳ್ ಮಾವ'. ಚಂದಿರ ಬಾರೋ,ತೇಜೋ ಮಂದಿರ ನೀ ಬಾರೋ ಅಂತ ಕುವೆಂಪು ಸಾಲುಗಳು ಆರಂಭದಲ್ಲಿ ಓದಿಗೆ ಸಿಕ್ಕರೆ, ಮುಂದುವರಿಯುತ್ತಾ...ಚಂದ್ರೋದಯ, ಹುಣ್ಣಿಮೆ, ಮೋಡಗಳು, ಮೇಘರಾಶಿಗಳನ್ನು ವರ್ಣಿಸುವ ಸಾಲುಗಳು ಅದಕ್ಕೆ ಪೂರಕವಾದ ಛಾಯಾಚಿತ್ರಗಳು ಪುಟಗಳ ತುಂಬಾ ಹರಡಿವೆ.
ಪ್ರಾತಃಕಾಲ
ಪ್ರಕೃತಿ ತನ್ನೊಳಗೆ ಇರಿಸಿಕೊಂಡ ರಮಣೀಯ ಸೌಂದರ್ಯವನ್ನು ವಿವರಿಸುವ ಕುವೆಂಪು ಕವನಗಳಿಗೆ ಇಲ್ಲಿ ಸಂಪೂರ್ಣ ಜಾಗ ನೀಡಲಾಗಿದೆ. ಪ್ರಾತಃಕಾಲದ ತಿಳಿ ಬೆಳಕಿನ ರಮಣೀಯ ಸ್ಥಳಗಳ ದರ್ಶನವೂ ಈ ಪುಟಗಳಲ್ಲಿ ಸಿಗುತ್ತವೆ.
ಕಾಜಾಣ
ನಮಲ್ಲಿ ಅದೆಷ್ಟೋ ವಲಸೆ ಬಂದ ಹಕ್ಕಿಗಳಿವೆ. ಅವುಗಳ ಬಗ್ಗೆ ಯೋಚನೆ ಮಾಡೋರೇ ಕಮ್ಮಿ. ಆದ್ರೆ ಈ 7ನೇ ಅಧ್ಯಾಯ ನಮ್ಮ ಕುತೂಹಲ ಹೆಚ್ಚಿಸುವ ವಿಚಾರಗಳನ್ನು ಹೊತ್ತಿವೆ. ಕಾಜಾಣ ಈ ಅಧ್ಯಾಯದ ಹೆಸರು. ಕೋಗಿಲೆ, ಕಾಜಾಣ, ಗೂಬೆ , ವನಗಾಯಕ ಪಕ್ಷಿಗಳ ಕುರಿತ ಕವಿತೆ. ಜೊತೆಗೆ ಸೆರೆಹಿಡಿಯಲಾದ ಛಾಯಾಚಿತ್ರಗಳು ಈ ಪುಟಗಳ ಪ್ರಧಾನ ಆಕರ್ಷಣೆ.
ಹೂವು- ದೇವರು ಅಧ್ಯಾಯವು ಆಧ್ಯಾತ್ಮ ಚಿಂತನೆಗೆ ಹೋಲುವಂತಹದ್ದು. ಸೋಮನಾಥಪುರದ ದೇವಾಲಯ, ಹಂಪೆಯ ಭೀಮ ಹಾಗೆ ಗೋಮಟೇಶ್ವರ ದೇವರ ಕುರಿತ ಕವಿತೆಯ ಸಾಲುಗಳು ಇಲ್ಲಿ ಪ್ರಮುಖ ಸ್ಥಾನ ಪಡೆದಿವೆ.
ಪ್ರಾರ್ಥನೆ ಇದು 9ನೇ ಅಧ್ಯಾಯ. ಪಂಪ, ಕುಮಾರ ವ್ಯಾಸ, ಸ್ವಾಮಿ ವಿವೇಕಾನಂದ ಹಾಗೆ ಮಹಾತ್ಮಗಾಂಧಿ ಯವರ ಕುರಿತ ಅಕ್ಷರ ವರ್ಣನೆ ಇಲ್ಲಿದೆ.
ಕೊನೆಯ ಅಧ್ಯಾಯ ಗೀತೆ...
ಇಲ್ಲಿ ದೇಶಪ್ರೇಮ ಹೆಚ್ಚಿಸುವ ಜಯಹೇ ಕರ್ನಾಟಕ ಮಾತೆಕ ! , ಅನಿಕೇತನ ಕಾಡುಗಳದ್ದೇ ಪ್ರಧಾನ ಪಾತ್ರ. ಪ್ರತಿ ಹಾಳೆಯಂತೆ ಇಲ್ಲೂ ಕವಿತೆಗೆ ಹೋಲುವ ಛಾಯಾಚಿತ್ರಗಳು ಶಬ್ಬದಕ್ಕೆ ತುಂಬ ಹತ್ತಿರವೆನಿಸುವುದಂತೂ ಪಕ್ಕ.
ಆರಂಭದ ಪುಟದಿಂದ ಹಿಡಿದು ಕೊನೆಯ ಹಳೆಯ ವರೆಗೂ ಓದುಗರ ಗಮನವನ್ನು ಸೆಳೆಯುವ ಈ ಪುಸ್ತಕ ಬುಕ್ ಬ್ರಹ್ಮದ 'ನೋಡುವ ಪುಸ್ತಕ' ಸರಣಿಗೆ ಸಿಕ್ಕ ಮತ್ತೊಂದು ಅದ್ಬುತ ಕೃತಿ ಎನ್ನಬಹುವು .
ಈ ಕೃತಿಯ ಹಿಂದಿರುವ ಶಕ್ತಿ,
ಸಂಪಾದಕರು : ಕೆ. ಸಿ ಶಿವಾರೆಡ್ಡಿ
ಪ್ರಕಾಶಕರು ಮತ್ತು ವಿವರಣೆದಾರರು : ಎಂ ಸಿ ನರೇಂದ್ರ, ಎಂ ಮೂನಿಸ್ವಾಮಿ.
ಪ್ರೊಡಕ್ಷನ್ : BOOKTREE,Kuppali
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.