ಈಗಿನ ಕಾಲದಲ್ಲಿ ಇದು ಎಲ್ಲರಿಗೂ ತಲುಪಬೇಕಾದಂತಹ ಪುಸ್ತಕ


"ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಸಂಬಂಧಿ ಅಣ್ಣನ ಸ್ಥಾನದಲ್ಲಿ ಇದ್ದ ರಮೇಶನ ಪ್ರೀತಿಯ ಜಾಲಕ್ಕೆ ಬಿದ್ದು ಮನೆಯಿಂದ ಹೊರಟು ಬಿಡುತ್ತಾಳೆ. ಮೊದಲಿಗೆ ಅವನಿಂದ ಮೆಚ್ಚುಗೆಯ ಮಟ್ಟದಲ್ಲಿ ಪ್ರೀತಿ ದೊರಕಿದರೂ, ಅನೇಕ ರಾಜ್ಯಗಳನ್ನು ಸುತ್ತಾಡುತ್ತಾ ಕಳ್ಳತನದಿಂದ ಬಂದಿದ್ದ ಹಣವೆಲ್ಲ ಖಾಲಿಯಾದಾಗ ಅವನ ನಿಜಸ್ವರೂಪ ಬಯಲಾಗುತ್ತದೆ," ಎನ್ನುತ್ತಾರೆ ಮಂಜುನಾಥ ಸಿ.ಬಿ. ಅವರು ನಾಗ್.ಎಚ್. ಹುಬ್ಳಿ ಅವರ ʻವಿದ್ಯಾವಂತ ವೇಶ್ಯೆಯ ಆತ್ಮಕತೆʼ ಕೃತಿ ಕುರಿತು ಬರೆದ ಅನಿಸಿಕೆ.

ಒಂದು ಹೆಣ್ಣು ಹದಿಹರೆಯದ ವಯಸ್ಸಿನಲ್ಲಿ ಯಾರೋ ಮಾಡಿರುವ ಮೋಸಕ್ಕೆ ತುತ್ತಾಗಿ, ಬೇರೆ ದಾರಿಯಿಲ್ಲದೆ ವೇಶ್ಯಾವಾಟಿಕೆ ವೃತ್ತಿಗೆ ಇಳಿದುಬಿಟ್ಟಿರುತ್ತಾಳೆ. ಇದೇ ವಿಷಯದ ಮೇಲೆ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಅನುಭವಿಸಿದ ಒಂದು ವಿದ್ಯಾವಂತ ಹೆಣ್ಣು ತನ್ನದೇ ಆತ್ಮಕತೆ ಬರೆದಿರುವುದು ಅಚ್ಚರಿಯ ಜೊತೆಗೆ ಆತಂಕವನ್ನೂ ಮೂಡಿಸುತ್ತದೆ. ಮಹಾನ್ ವ್ಯಕ್ತಿಗಳ ಆತ್ಮಕತೆಗಿಂತ ಕುಮಾರಿ/ಶ್ರೀಮತಿ ಮಾನದಾ ದೇವಿಯವರ ಆತ್ಮಕತೆ ವಿಭಿನ್ನವಾಗಿದ್ದು, ಓದುಗರಿಗೆ ಸೋಜಿಗವನ್ನುಂಟುಮಾಡುತ್ತದೆ. ಈಗಿನ ಕಾಲಗಟ್ಟಿನಲ್ಲಿ ಇದು ಎಲ್ಲರಿಗೂ ತಲುಪಬೇಕಾದಂತಹ ಪುಸ್ತಕ.

ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಸಂಬಂಧಿ ಅಣ್ಣನ ಸ್ಥಾನದಲ್ಲಿ ಇದ್ದ ರಮೇಶನ ಪ್ರೀತಿಯ ಜಾಲಕ್ಕೆ ಬಿದ್ದು ಮನೆಯಿಂದ ಹೊರಟು ಬಿಡುತ್ತಾಳೆ. ಮೊದಲಿಗೆ ಅವನಿಂದ ಮೆಚ್ಚುಗೆಯ ಮಟ್ಟದಲ್ಲಿ ಪ್ರೀತಿ ದೊರಕಿದರೂ, ಅನೇಕ ರಾಜ್ಯಗಳನ್ನು ಸುತ್ತಾಡುತ್ತಾ ಕಳ್ಳತನದಿಂದ ಬಂದಿದ್ದ ಹಣವೆಲ್ಲ ಖಾಲಿಯಾದಾಗ ಅವನ ನಿಜಸ್ವರೂಪ ಬಯಲಾಗುತ್ತದೆ. ಕೊನೆಗೆ ಅವನು ಆಕೆಯನ್ನು ತೊರೆದು ಹೋಗಿಬಿಡುತ್ತಾನೆ.

ಬದುಕಲು ಬೇರೆ ದಾರಿಯಿಲ್ಲದೆ — ಮತ್ತು ತನ್ನಲ್ಲಿರುವ ಕಾಮನೆಗಳು ಹಿಡಿತಕ್ಕೆ ಬರದೇ ಇದ್ದ ಕಾರಣದಿಂದಲೂ — ಆಕೆ ವೇಶ್ಯಾವಾಟಿಕೆಗೆ ಇಳಿಯಬೇಕಾಗಿ ಬರುತ್ತದೆ. ಅಲ್ಲಿಂದ ಅವಳ ಜೀವನದಲ್ಲಿ ಮತ್ತೊಂದು ಅಧ್ಯಾಯ ಶುರುವಾಗುತ್ತದೆ. ಹೀಗೆಯೇ ತನ್ನ ಜೀವನದ ಹೇಳುಬೀಳುಗಳನ್ನು ಅವಳು ಸ್ಪಷ್ಟವಾಗಿ ವಿವರಿಸುತ್ತಾಳೆ.

ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನಡೆದಿರುವ ಭೂಟಾಟಿಕೆ ಮಾತುಗಳು, ಅವಳಿಗೆ ಆಗಿದ್ದ ಅವಮಾನಗಳು, ಅಂದಿನ ಕೆಲ ಯುವ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಣ್ಯ ವ್ಯಕ್ತಿಗಳ ವರ್ತನೆ—ಇವನ್ನೆಲ್ಲಾ ಅವಳು ನಿರ್ಭೀತಿಯಾಗಿ ಹಂಚಿಕೊಂಡಿದ್ದಾಳೆ.

ವೇಶ್ಯಾವಾಟಿಕೆಯ ವಿಷಯ ಮತ್ತು ಅದರ ಹಿಂದೆ ಇರುವ ಕತೆಗಳ ಬಗ್ಗೆ ಬರೆಯತೊಡಗಿದರೆ ಇಲ್ಲಿಂದ ಆಕಾಶದೆತ್ತರದವರೆಗೆ ಪುಸ್ತಕಗಳ ಜೋಡಣೆ ಸಿಗಬಹುದು. ಆದರೂ ನಮಗೆ ಸಿಗುತ್ತಿರುವುದು ಬೆರಳಣಿಕೆಯಷ್ಟು ಮಾತ್ರ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...