"ಇಂಡಿಯನ್ ಪ್ಯಾರಾನಾರ್ಮಲ್ ಸೊಸೈಟಿ ಎಂಬ ಇಂತಹ ಸುಲಭ ವಿವರಣೆ ಸಿಗದ ಅದರ್ ವರ್ಲ್ಡ್ ಗೆ ಸಂಬಂಧಿತ ಸಂಶೋಧಕ ಸಂಸ್ಥೆಯನ್ನು ಸಂಪರ್ಕಿಸಿ ಅಧಿಕೃತ ಮಾಹಿತಿ ಸಾಧ್ಯವಾದಷ್ಟು ಸಂಗ್ರಹಿಸಿ , ಹಲವು ದೂರದ ರಾಜ್ಯಗಳ ಊರು ಕೇರಿಗಳ ಲೋಕಲ್ ಫ್ಲೇವರ್, ಅಲ್ಲಿನ ಜನಜನಿತ ಕಥೆ, ವಿವರಗಳನ್ನೂ ಸಹ ಸೇರಿಸಿ ಒಂದೊಂದು ಘಟನೆಯನ್ನೂ ಪುಟಕ್ಕಿಟ್ಟ ಚಿನ್ನದಂತೆ ಪರಿಷ್ಕಕರಿಸಿ ಬರೆದಿದ್ದಾರೆ," ಎನ್ನುತ್ತಾರೆ ನಾಗೇಶ್ ಕುಮಾರ್ ಸಿ.ಎಸ್. ಅವರು ಗುರುರಾಜ್ ಕೊಡ್ಕಣಿ ಅವರ ʻಪ್ಯಾರಾನಾರ್ಮಲ್ʼ ಕೃತಿ ಕುರಿತು ಬರೆದ ಅನಿಸಿಕೆ.
ಪ್ಯಾರಾನಾರ್ಮಲ್
ಗುರುರಾಜ್ ಕೊಡ್ಕಣಿ
ಪುಟಗಳು 144
ಬೆಲೆ: 175
ಪ್ರಕಾಶಕರು: ಅಂಕಿತ ಪುಸ್ತಕ
ಬರೀ ಕಥೆಯೆಂದರೆ ಕಥೆ, ಸತ್ಯವೆಂದರೆ ಕಠೋರ ಸತ್ಯ- ಎನಿಸಬಲ್ಲ ದೇಶದ ಮೂಲೆಮೂಲೆಯಿಂದ ಆಯ್ದ ಅಧಿಸಾಮಾನ್ಯ ಘಟನೆಗಳನ್ನು ಗುರುರಾಜ್ ಅತ್ಯಂತ ವೃತ್ತಿಪರತೆಯಿಂದ, ಪಾರದರ್ಶಕತೆಯಿಂದ ಎಲ್ಲ ಕೋನಗಳಿಂದ ನೋಡಿ ಸಮಗ್ರ ಚಿತ್ರ ಕಣ್ಣಿಗೆ ಕಟ್ಟುವಂತೆ ಬರೆದಿರುವುದು ನಿಜಕ್ಕೂ ವಿಶೇಷ.
ಇದನ್ನು ಅರಿತೇ ನಾನು ದಿನಾಲೂ ಹಗಲಿನಲ್ಲಿ ಅರಂಭಿಸಿ ಸಾಯಂಕಾಲದ ಒಳಗೆ ಕಂತು ಮುಗಿಸಿ ಒಂದು ರೌಂಡ್ ಗಾಯತ್ರಿ ಮಂತ್ರ ಹೇಳಿದ್ದು, ರಾತ್ರಿ ಮಲಗುವ ಮುನ್ನ ರಾಮಸ್ಕಂದಂ ಹನುಮಂತಂ ದುಃಸ್ವಪ್ನ ಪರಿಹಾರ ಮಂತ್ರ ಹೇಳಿ ಮಲಗಿದ್ದು, ಆದರೂ ತಕ್ಷಣ ನಿದ್ದೆ ಹತ್ತದೇ ಹೊರಳಾಡಿದ್ದು!!. ಆದರೂ ಮುಗಿದ ಮೇಲೆ, ‘ಅರೆರೆ ಮುಗಿದೇ ಹೋಯಿತೆ?’ ಎನಿಸುವ ಪುಸ್ತಕ ಇದು!
ಹಾಗೆ ನೋಡಿದರೆ ನಾನೂ ಅಪರಾಧ ಲೋಕದ ಲೇಖಕನೇ ( ತೀರ ಅತಿಯಾಗಿ ಎಲ್ಲಿಯೂ ವರ್ಣಿಸದವ).., ಆದರೆ ಹಿಂಸಾಚಾರ, ದ್ರೋಹ, ಅಪರಾಧ, ಪತ್ತೇದಾರಿ ಬೇರೆ ಈ ಹಾರರ್ ಲೋಕದ ಕಣ್ಣಿಗೆ ಕಾಣದ ಭೀಭತ್ಸ ಶಕ್ತಿಗಳ ವೃತ್ತಾಂತವೇ ಬೇರೆ.
ನನಗೆ ಬಹಳ ಇಷ್ಟವಾಗಿದ್ದು ಇವರ ಸರಳ ನೇರ ನಿರೂಪಣೆ ಶೈಲಿ... ಎಲ್ಲಿಯೂ ಗೊಣಗುವ ಸ್ವಗತವಿಲ್ಲ...ದೊರೆತ ಮಾಹಿತಿ ಮತ್ತು ವರದಿಗಳನ್ನು ಅತಿರಂಜಿತ ಮಾಡದೆಯೇ ರೋಚಕ ಮತ್ತು ಮನರಂಜಕವಾಗಿಯೂ ಬರೆಯುವ ಕಲೆ ಗುರುರಾಜರಿಗೆ ಸಿದ್ಧಿಸಿದೆ. ಇದು ಇವರ ವಿಕ್ಷಿಪ್ತ, ಅತಿಮಾನುಷ ಕೃತಿಗಳಲ್ಲಿಯೂ ಕಂಡುಬಂದ ಲಕ್ಷಣ ಸಹ.
ಇಂಡಿಯನ್ ಪ್ಯಾರಾನಾರ್ಮಲ್ ಸೊಸೈಟಿ ಎಂಬ ಇಂತಹ ಸುಲಭ ವಿವರಣೆ ಸಿಗದ ಅದರ್ ವರ್ಲ್ಡ್ ಗೆ ಸಂಬಂಧಿತ ಸಂಶೋಧಕ ಸಂಸ್ಥೆಯನ್ನು ಸಂಪರ್ಕಿಸಿ ಅಧಿಕೃತ ಮಾಹಿತಿ ಸಾಧ್ಯವಾದಷ್ಟು ಸಂಗ್ರಹಿಸಿ , ಹಲವು ದೂರದ ರಾಜ್ಯಗಳ ಊರು ಕೇರಿಗಳ ಲೋಕಲ್ ಫ್ಲೇವರ್, ಅಲ್ಲಿನ ಜನಜನಿತ ಕಥೆ, ವಿವರಗಳನ್ನೂ ಸಹ ಸೇರಿಸಿ ಒಂದೊಂದು ಘಟನೆಯನ್ನೂ ಪುಟಕ್ಕಿಟ್ಟ ಚಿನ್ನದಂತೆ ಪರಿಷ್ಕಕರಿಸಿ ಬರೆದಿದ್ದಾರೆ.
ಖಂಡಿತಾ ನನ್ನಂತೆಯೆ ಭಯಪಟ್ಟುಕೊಂಡು ಓದಿ! ಓದಿದ ನಂತರ "ಅದು ಇದು" ಸದ್ದುಗಳಿಗೆಲ್ಲ ಮನೆಯಲ್ಲಿ ಹೆದರದಿರಿ! ಹಾಗೆ ನಿಜವಾಗಿಯೂ ಆದರೆ ಗುರುರಾಜರಿಗೆ ತಿಳಿಸಿಬಿಡಿ, ಇದರ ಸೀಕ್ವೆಲ್ ಬರಬಹುದು ಆಗ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.