ಹೊಟ್ಟೆ ಮತ್ತು ಬಟ್ಟೆಯನ್ನು ಮೀರಿದ ಅವಶ್ಯಕತೆಗಳು ಇಂದು ಉತ್ಪನ್ನವಾಗಿವೆ


"ಬದಲಾದ ಸನ್ನಿವೇಶದಲ್ಲಿ ನಾವು ಅವುಗಳನ್ನು ಮೀರಿದ್ದೇವೆ. ಇವತ್ತಿಗೆ ಕಾರು, ಫೋನು ಇತ್ಯಾದಿಗಳು ಅವಶ್ಯಕವಾಗಿವೆ. ಅವು ಐಷಾರಾಮ ಎನ್ನಿಸಿಕೊಳ್ಳುವುದಿಲ್ಲ. ಕಳೆದ ಎರಡು ದಶಕಗಳಿಂದ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಹಿಂದೆ ಜನರ ಕೈಯಲ್ಲಿ ಹಣವಿರುತ್ತಿರಲಿಲ್ಲ. ಇಂದು ಅವಶ್ಯಕತೆಯನ್ನು ಮೀರಿ ಒಂದಷ್ಟು ಹಣ ಕೂಡ ಉಳಿಯುತ್ತಿದೆ ಎನ್ನುತ್ತಾರೆ ರಂಗಸ್ವಾಮಿ ಮೂಕನಹಳ್ಳಿ. ಅವರು ಮೈ ಮನಿ ಮ್ಯಾಪ್‌ ಕೃತಿಗೆ ಬರೆದ ಲೇಖಕನ ನುಡಿ.

`ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆ"ಗಾಗಿ' ಎನ್ನುವ ದಾಸರ ನುಡಿ ಇವತ್ತಿಗೆ ಒಂದಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮತ್ತು ಬಟ್ಟೆಯನ್ನು ಮೀರಿದ ಅವಶ್ಯಕತೆಗಳು ಇಂದು ಉತ್ಪನ್ನವಾಗಿವೆ. ಸಮಾಜ ಬೆಳೆಯುತ್ತ ಹೋದಂತೆ ಇದು ಸಹಜ. ಅಂದಿನ ಕಾಲಘಟ್ಟದಲ್ಲಿ ಹೊಟ್ಟೆಗೆ ಮತ್ತು ಬಟ್ಟೆಗೆ ಆದರೆ ಸಾಕು ಬೇರೇನೂ ಬೇಕಿಲ್ಲ ಎನ್ನುವಂತಹ ಸನ್ನಿವೇಶವಿತ್ತು.

ಬದಲಾದ ಸನ್ನಿವೇಶದಲ್ಲಿ ನಾವು ಅವುಗಳನ್ನು ಮೀರಿದ್ದೇವೆ. ಇವತ್ತಿಗೆ ಕಾರು, ಫೋನು ಇತ್ಯಾದಿಗಳು ಅವಶ್ಯಕವಾಗಿವೆ. ಅವು ಐಷಾರಾಮ ಎನ್ನಿಸಿಕೊಳ್ಳುವುದಿಲ್ಲ. ಕಳೆದ ಎರಡು ದಶಕಗಳಿಂದ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಹಿಂದೆ ಜನರ ಕೈಯಲ್ಲಿ ಹಣವಿರುತ್ತಿರಲಿಲ್ಲ. ಇಂದು ಅವಶ್ಯಕತೆಯನ್ನು ಮೀರಿ ಒಂದಷ್ಟು ಹಣ ಕೂಡ ಉಳಿಯುತ್ತಿದೆ.

ಆದರೆ ಹಣದುಬ್ಬರ ಎನ್ನುವುದು ಅದರ ಮೌಲ್ಯವನ್ನು ಕಸಿದು ಬಿಡುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಪ್ರತಿಯೊಬ್ಬರೂ ಫೈನಾನ್ಶಿಯಲ್‌ ಪ್ಲಾನಿಂಗ್‌ ಮಾಡಬೇಕಾಗಿದೆ. ಈ ಪುಸ್ತಕ ಆ ದಾರಿಯಲ್ಲಿ ನಡೆಯ ಬಯಸುವವರಿಗೆ ಒಂದು ನಕ್ಷೆಯಂತೆ ದಾರಿ ತೋರುತ್ತದೆ. `ಆರಂಭ', `ಸರಿಯಾದ ದಾರಿ' ನಮ್ಮನ್ನು `ಗಮ್ಯ'ಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪುಸ್ತಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಶುಭವಾಗಲಿ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...