"ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬ ಸರಳವಾದ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಸುವ ಪ್ರಯತ್ನವಿದು," ಎನ್ನುತ್ತಾರೆ ದೀಪಾ ಹಿರೇಗುತ್ತಿ. ಅವರು ʻನೋ ಎಕ್ಸ್ಯೂಸ್ PLEASEʼ ಕೃತಿಗೆ ಬರೆದ ಲೇಖಕರ ನುಡಿ.
ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನಲ್ಲಾದರೂ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗಬಹುದು ಎಂಬುದಕ್ಕೊಂದು ಸ್ಫೂರ್ತಿಯುತ ಉದಾಹರಣೆ ಈ ಪುಸ್ತಕ. ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬ ಸರಳವಾದ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಸುವ ಪ್ರಯತ್ನವಿದು.
ಆರಂಭಿಕ ಸೋಲುಗಳಿಂದ, ಹಣಕಾಸಿನ ತೊಂದರೆಯಿಂದ, ಸಮಾಜದ ಚುಚ್ಚು ಮಾತುಗಳಿಂದ ತಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ನೇತ್ಯಾತ್ಮಕ ಅಭಿಪ್ರಾಯವನ್ನು ತಮ್ಮ ಬಗ್ಗೆ ತಾವೇ ತುಂಬಿಕೊಂಡು ಸಣ್ಣ ಪುಟ್ಟ ಕನಸು ಕಾಣಲೂ ಹಿಂಜರಿಯುವವರು ಈ ಕಥೆಗಳನ್ನು ಓದಲೇಬೇಕು, ಕಾಲೇಜು ವಿದ್ಯಾರ್ಥಿಯಾಗಲಿ, ಮಧ್ಯವಯಸ್ಕರೇ ಆಗಲಿ ಇಳಿವಯಸ್ಸಿನವರೇ ಆಗಲಿ ಯಾರು ಬೇಕಾದರೂ ಓದಬಹುದಾದ ಮತ್ತು ಸ್ಫೂರ್ತಿ ಪಡೆಯಬಹುದಾದ ಅಪರೂಪದ ಸಾಧಕರ ಬದುಕಿನ ಕತೆಗಳು ನಿಮ್ಮೆದುರು...
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.