ಸರಳ ನಿರೂಪಣೆ, ಹಳ್ಳಿಯ ಪರಿಸರವನ್ನು ಕಟ್ಟಿಕೊಡುವ ಕಥೆಗಳಿವು


"ಸವಿತಾ ಅವರ ‘ಹಿನ್ನೀರ ದಂಡೆಯಲಿ’ ಮತ್ತು ‘ಇಳಿಸಂಜೆ’ ಈ ಎರಡೂ ಕಥೆಗಳೂ ಮನುಷ್ಯನ ಸಂಬಂಧವನ್ನು ಭಾವನಾತ್ಮಕ ನಿಟ್ಟಿನಲ್ಲಿ ನೇಯ್ದ ಕಥೆಗಳಾಗಿವೆ. ಸರಳ ನಿರೂಪಣೆ, ಹಳ್ಳಿಯ ಪರಿಸರವನ್ನು ಕಟ್ಟಿಕೊಡುವ ಕಥೆಗಳು," ಎನ್ನುತ್ತಾರೆ ತೇಜಸ್ವಿನಿ ಹೆಗಡೆ. ಅವರು ಆರು ಜನ ಕತೆಗಾರರಾದ ಸುಧಾಕರ್ ಜೈನ್, ದಿವ್ಯಾ ಶ್ರೀಧರ ರಾವ್, ಸವಿತಾ ಗುರುಪ್ರಸಾದ್, ಆಶ್ರಿತ ಕಿರಣ್, ಸುಮನ ಸುರೇಶ್, ಧನುಪ್ ಕುಮಾರ್ ಅವರ ‘ಕಥಾ ಪಂಜರ’ ಕಥಾ ಸಂಕಲನಕ್ಕೆ ಬರೆದ ವಿಮರ್ಶೆ.

ಇದು ಆರು ಜನ ಹೊಸ ಬರಹಗಾರರು ಸೇರಿಕೊಂಡು ಹೊರತಂದಿರುವ ಕಥಾಸಂಕಲನ. ಈ ಆರು ಜನರಲ್ಲಿ ನನಗೆ ಚೆನ್ನಾಗಿ ಪರಿಚಯವಿರುವುದು ಸವಿತಾಗುರುಪ್ರಸಾದ್ ಅವರು ಮಾತ್ರ. ಈ ಸಂಕಲನದಲ್ಲಿ ಪ್ರತಿಯೊಬ್ಬರೂ ತಮ್ಮ ಎರಡು ಕಥೆಗಳನ್ನು ಪ್ರಕಟಿಸಿದ್ದಾರೆ. ಸವಿತಾ ಅವರ ‘ಹಿನ್ನೀರ ದಂಡೆಯಲಿ’ ಮತ್ತು ‘ಇಳಿಸಂಜೆ’ ಈ ಎರಡೂ ಕಥೆಗಳೂ ಮನುಷ್ಯನ ಸಂಬಂಧವನ್ನು ಭಾವನಾತ್ಮಕ ನಿಟ್ಟಿನಲ್ಲಿ ನೇಯ್ದ ಕಥೆಗಳಾಗಿವೆ. ಸರಳ ನಿರೂಪಣೆ, ಹಳ್ಳಿಯ ಪರಿಸರವನ್ನು ಕಟ್ಟಿಕೊಡುವ ಕಥೆಗಳು. `ಹಿನ್ನೀರ ದಂಡೆಯಲಿ' ಕಥೆಯ ದುರ್ಗಿಯ ಪಾತ್ರಚಿತ್ರಣ ಆಪ್ತವಾಗಿ ಬಂದಿದೆ. ನಮ್ಮ ಸುತ್ತಮುತ್ತ ದುರ್ಗಿಯಂಥವರು ಅನೇಕರು ಕಾಣ ಸಿಗುತ್ತಾರೆ, ನೆನಪಿಗೂ ಬರುತ್ತಾರೆ. ಆದರೆ ಆ ಪಾತ್ರಕ್ಕೆ ತಕ್ಕ ರೀತಿಯ ಸಂಭಾಷಣೆ, ಹಳ್ಳಿಯ ಮಾತು ಇದ್ದಿದ್ದರೆ ಮತ್ತೂ ಚೆನ್ನಾಗಿತ್ತು ಅನ್ನಿಸಿತು.

ದಿವ್ಯಾ ಶ್ರೀಧರ್ ಅವರ ಎರಡೂ ಕಥೆಗಳು ಚೆನ್ನಾಗಿವೆ. ಹೆಚ್ಚು ಗಮನಸೆಳೆದದ್ದು ಮತ್ತು ಇಷ್ಟವಾಗಿದ್ದು ಅವರ ‘ಆಶೀರ್ವಾದ’ ಕಥೆ. ಈ ಕಥೆಯ ನೇಯ್ಗೆ, ಅದು ಧ್ವನಿಸುವ ಹೊಳಹು, ನಿಗೂಢತೆ ವಿಶೇಷ ಅನ್ನಿಸಿತು. ಸಂಕಲನದಲ್ಲೇ ಇವರ ಕಥೆಗಳು ಹೆಚ್ಚು ಇಷ್ಟವಾದವು.

ಸುಧಾಕರ್ ಜೈನ್ ಅವರ ‘ಸ್ಪೀಕರಿನೊಳಗಿನ ಸತ್ಯ ಹರಿಶ್ಚಂದ್ರ’ ಎನ್ನುವ ಕಥೆಯ ವಸ್ತು ಮತ್ತು ಕೆಲವು ಸಂಭಾಷಣೆಗಳು ಇಷ್ಟವಾದವು.

ಸಂಕಲನದ ಇನ್ನುಳಿದ ಕೆಲವು ಬರಹಗಳು ಕಥಾಬಂಧಕ್ಕೆ ಬರದೇ ಸ್ವಗತ, ಲಹರಿ, ಲಲಿತ ಪ್ರಬಂಧದ ದಾಟಿಯಲ್ಲಿ ಸಾಗಿದಂತೆ ಅನ್ನಿಸಿತು. ಆದರೆ ಇವರೆಲ್ಲ ಹೊಸ ಬರಹಗಾರರು. ಈಗಷ್ಟೇ ಉತ್ಸಾಹದಿಂದ ಬರೆಯಲು ಹೊರಟಿದ್ದಾರೆ. ಹೆಚ್ಚೆಚ್ಚು ಆಳವಾದ ಅಧ್ಯಯನ, ಓದುವಿಕೆಯ ಮೂಲಕ ಭಾಷೆಯ ಮೇಲೆ ಹಿಡಿತ ಬರುತ್ತಾ ಹೋದರೆ ಭರವಸೆಯ ಲೇಖಕರಾಗಬಹುದು.

- ತೇಜಸ್ವಿನಿ ಹೆಗಡೆ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...