'ಸಿಕ್ಕು' ಸಮಯದೊಡನೆ ಸಾಗುವ ಕಥೆ


ಲೇಖಕ ಮುದಿರಾಜ್ ಬಾಣದ್ ಅವರು ಬರೆದ 'ಸಿಕ್ಕು' ಕಾದಂಬರಿಯ ಕುರಿತು, ರವೀಂದ್ರ.ಈಶ್ವರಪ್ಪ. ಜಡ್ರಾಮಕುಂಟಿ ಅವರು ಬರೆದ ಅನಿಸಿಕೆ ನಿಮ್ಮ ಓದಿಗಾಗಿ....

ಒಬ್ಬ ಮನುಷ್ಯ ಇಷ್ಟೊಂದು ಸಿಕ್ಕುಗಳನ್ನು ಬಿಡಿಸಿಕೊಂಡು ಹೊರ ಬರಬಹುದಾ? ಅಬ್ಬಾ. ಇದೆಂತಾ ಕತೆ.

ಮುದಿರಾಜ್ ಬಾಣದ್,ಅವರು ಬರೆದಿರುವ ಸಿಕ್ಕು ಪುಸ್ತಕ.ಏಕ ವ್ಯಕ್ತಿ ಪ್ರದರ್ಶನದಂತೆ ಕಂಡು ಬಂದರೂ, ಅಲ್ಲಿ ಹಲವಾರು ಪಾತ್ರಗಳು ಕತೆಯ ನಾಯಕನನ್ನು ಚಕ್ರವ್ಯೂಹದಲ್ಲಿ ಹೊಕ್ಕ ಅಭಿಮನ್ಯುವಿನಂತೆ ಆಗುತ್ತಾನೆ.ಈ ಅಭಿಮನ್ಯು ಪಾರಾಗುವನೋ! ಸುಳಿಯಲ್ಲಿ ಸಿಲುಕುವನೊ?ಓದಿಯೇ ತಿಳಿಯಬೇಕು.

ಅವನ ಜಾಗದಲ್ಲಿ ಬೇರೆ ಯಾರೇ ಇದ್ದರೂ,ಕತೆಯೇ ಬೇರೆಯಾಗಿರುತ್ತಿತ್ತು.ಅನ್ನುವಷ್ಟರ ಮಟ್ಟಿಗೆ ಓದುಗನಿಗೆ ಆವೇಶ ಹುಟ್ಟಿಸುವ ಈ ಕತೆಗೆ. ತನ್ನ ಕುಟುಂಬದ ಎಲ್ಲಾ ಹುಳುಕುಗಳು ತಿಳಿದಿದ್ದೂ ಸುಮ್ಮನಿರುವ ಇವನು ನೋವು ನುಂಗಿರುವ ನೀಲಕಂಠ.ಅವನಿಲ್ಲಿ ಅಸಹಾಯಕ.ಅವನೇ ಲಂಕ್ಯ.

ಅವನಿಗೆ ನೋವು, ಹತಾಶೆ, ಅವಮಾನ ಯಾವುದು ಹೊಸತಲ್ಲ.ಆದರೆ ಎಲ್ಲವೂ ಅವನ ಕೊರಳಿಗೆ ಸುತ್ತಿಕೊಂಡು ಅವನ ಉಸಿರು ಕಟ್ಟುವಂತೆ ಪರಿಸ್ಥಿತಿಗಳು ಎದುರಾಗುತ್ತವೆ. ಒಂದರ್ಥದಲ್ಲಿ ಇವನು ಪರಿಸ್ಥಿತಿಯ ಕೈಗೊಂಬೆ,ಎಲ್ಲ ತಿಳಿದು ಏನೂ ಮಾಡಲಾಗದ ಸ್ಥಿತಿ.ಕಾರಣ ಅವನು ಅಪ್ರಬುದ್ಧ.

ಬಾಲ್ಯದಲ್ಲಿ ಪ್ರೀತಿಸಿದ ಹುಡುಗಿ ಇಂದ ತಾತ್ಸಾರ.ಅಪ್ಪನ ಕುಡಿತದ ಚಟ,ಅವ್ವನ ಹಾದರ ಕಣ್ಣಾರೆ ಕಂಡರೂ ಸುಮ್ಮನಿರುವ, ಇವೆಲ್ಲವುಗಳಿಂದ ಬೇಸತ್ತು ಕೊನೆಗೆ ಊರು ಬಿಟ್ಟು ಬೇರೆ ಊರಿಗೆ ಬಂದು ಇರುವಾಗ ಭೇಟಿಯಾಗುವ ಆ ವ್ಯಕ್ತಿ ಮತ್ತೆ ಮಾಯುತ್ತಿದ್ದ ಗಾಯವನ್ನು ಕೇದಕಿ ಹಸಿಗಾಯ ಮಾಡುವಂತೆ ಎಲ್ಲ ನೆನಪಿಗೆ ತರುತ್ತಾನೆ.ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲವರೆಗೂ ಮಾತ್ರ ನೀರಂತೆ ಇಲ್ಲಿಂದ ಕತೆಯ ಸುರುಳಿ ಬಿಚ್ಚುತ್ತಾ ಹೋಗುತ್ತದೆ.

ಗಯ್ಯಾಳಿ ಹೆಂಡತಿಯಿಂದ ಬೇಸತ್ತು ಊರು,ಮನೆ,ಮಕ್ಕಳು ತೊರೆದು ದಿಕ್ಕು ದೆಸೆ ಇಲ್ಲದೆ ಹುಚ್ಚನಂತೆ ಅಲೆದಾಡುವ ನಾಯಕ,ದಾರಿಯುದ್ದಕ್ಕೂ ಅನೇಕ ಸವಾಲು ಎದುರಿಸಿ ಕೊನೆಗೆ ಶ್ರೀಶೈಲದಲ್ಲಿ ಪುನಃ ಹೆಂಡತಿ ತಾಯಿಯ ಕೈಗೆ ಸಿಕ್ಕಿ, ಮನೆಗೆ ಬಂದಾಗ.ದೆವ್ವ ಪ್ರೆತದ ಹೆಸರಿನಲ್ಲಿ ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗಿ,ಜರ್ಜರಿತನಾಗುತ್ತಾನೆ.

ಒಟ್ಟಿನಲ್ಲಿ ಇದು ಬಿಡಿಸಲಾರದ ಸಿಕ್ಕೂ!! ಇದೆಲ್ಲವನ್ನೂ ಓದಿ ಮುಗಿಸುವ ಹೊತ್ತಿಗೆ ಓದುಗನಿಗೆ ನಾಯಕನ ಅಸಹಾಯಕತೆ,ನಿರ್ಲಿಪ್ತತೆ, ಎಲ್ಲವು ಸೇರಿ ಅವನ ಪಾತ್ರದ ಮೇಲೆ ಮಮಕಾರ ಹುಟ್ಟುವಂತೆ ಮಾಡುತ್ತವೆ.

ಲೇಖಕರು, ತಮ್ಮ ಪುಸ್ತಕಕ್ಕೆ ಸೂಕ್ತ ಶೀರ್ಷಿಕೆ ಬಳಸಿದ್ದಾರೆ.ಕಥೆಯುದ್ದಕ್ಕೂ ಬಳಸಿರುವ ಹೆಸರು,ಭಾಷೆ, ಎಲ್ಲವೂ ರಾಯಚೂರು ಸೀಮೆಯ ಸೊಗಡು ಎದ್ದು ಕಾಣುತ್ತದೆ.ಇದು ಅವರ ಗೆಲುವಿನ ಮೊದಲ ಕಾರಣ.ನಿರೂಪಣೆ ತುಂಬಾ ಸೊಗಸಾಗಿದ್ದು.ಪುಸ್ತಕದ ಪ್ರಾರಂಭದಿಂದ ಹಿಡಿದು ಕೊನೆಯ ಪುಟದ ವರೆಗೂ ಅದೇ ಕೂತುಹಲ ಉಳಿಸಿಕೊಂಡು ಹೋಗುವಂತೆ ಸನ್ನಿವೇಶಗಳನ್ನು ಹೇಳುತ್ತಾ ಹೋಗಿದ್ದು ಓದುಗರನ್ನು ಮಂತ್ರ ಮುಗ್ಧರನ್ನಾಗಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಇದು ಸಮಯದೊಡನೆ ಸಾಗುವ ಕಥೆ.ಕತೆಯ ಓಘ ಒಂದೇ ಸಮನೆ ಇದ್ದು, ಅರೇಘಳಿಗೆ ಕೂಡ ಬೇಸರಿಸದೆ ಒಂದೇ ಸಾರಿ ಓದಿ ಮುಗಿಸಬಹುದಾದ ಪುಸ್ತಕ.ಕತೆಯ ಕುರಿತು ನಿಖರತೆ ಇರುವ ಲೇಖಕರು ಎಲ್ಲೂ ಗೊಂದಲಕ್ಕೆ ಆಸ್ಪದ ನೀಡದೆ, ಸರಾಗ ಓದಿಗೆ ಹಾದಿ ಮಾಡಿಕೊಟ್ಟಿದ್ದಾರೆ. ಆದರೆ ಕತೆಯ ಗುಂಗಿನಿಂದ ಹೊರಬರಲು ತೆಗೆದು ಕೊಳ್ಳುವ ಸಮಯ ಮಾತ್ರ ಓದುಗರ ಭಾವಕ್ಕೆ ಬಿಟ್ಟಿದ್ದು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...