ಅಪರಿಚಿತ ಓದುಗರ 26ನೇ ಭೇಟಿ: ಪುಸ್ತಕ ಪ್ರೇಮಿಗಳ ಹಬ್ಬ

Date: 10-05-2025

Location: ಬೆಂಗಳೂರು


ಬೆಂಗಳೂರು: ಕನ್ನಡ ಸಾಹಿತ್ಯ ಮತ್ತು ಓದುಗರಿಗೆ ಆಯ್ಕೆಯಾದ ವೇದಿಕೆ “ಅಪರಿಚಿತ ಓದುಗರು” ವತಿಯಿಂದ 26ನೇ ಓದುಗರ ಭೇಟಿಯನ್ನು ಮೇ 11, 2025 ಭಾನುವಾರ, ಬೆಂಗಳೂರಿನ ಕಬ್ಬನ್‌ ಪಾರ್ಕ್‌‌ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ. ಈ ಸಭೆಯ ವಿಶೇಷ ಆಕರ್ಷಣೆಯಾಗಿ ಲೇಖಕರಾದ ವಿದ್ವಾನ್‌ ಜಗದೀಶ್‌ ಶರ್ಮಾ ಸಂಪ ಅವರು ಭಾಗವಹಿಸಲಿದ್ದಾರೆ.

ವಯಸ್ಸಿನ ಮಿತಿ ಇಲ್ಲ, ಪ್ರವೇಶ ಶುಲ್ಕವಿಲ್ಲ. ಕುಡಿಯಲು ನೀರು ಮತ್ತು ಕನ್ನಡ ಪುಸ್ತಕ ಜೊತೆ ಕೊಂಡೊಯ್ಯ ತಕ್ಕದ್ದು, ಪುಸ್ತಕ ಅದಲು-ಬದಲು, ಯುವ ಬರಹಗಾರರು-ಓದುಗರ ಮುಖಾಮುಖಿ, ಕೃತಿಯ ಹಿಂದಿನ ಕತೆ, ಕವಿತೆ ವಾಚನ, ರಸಪ್ರಶ್ನೆ, ಪುಸ್ತಕ ಉಡುಗೊರೆ ಇನ್ನೂ ಇತ್ಯಾದಿ ಚಟುವಟಿಕೆಗಳು ನೆಡೆಯಲಿವೆ.

ಹೆಚ್ಚಿನ ಮಾಹಿತಿಗೆ
@dayavittu.gamanisi ಇನ್‌ಸ್ಟಾಗ್ರಾಮ್
dgaminisi@gmail.com ಮೂಲಕ ಸಂಪರ್ಕಿಸಬಹುದು.

 

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...