ಬೆಂಗಳೂರು: ಅಂಕಿತ ಪುಸ್ತಕ ವತಿಯಿಂದ ಡಾ. ಕೆ. ಎನ್. ಗಣೇಶಯ್ಯ ಅವರ ʻಶಾಕ್ಯಶಕ್ತ ಶಿಲ್ಪ', 'ವಲಯ ಕಲಹ' ಹಾಗೂ 'ಮನೋಗಮ' ಕೃತಿಗಳ ಲೋಕಾರ್ಪಣಾ ಸಮಾರಂಭವು 2025 ಅ. 28 ಭಾನುವಾರದಂದು ನಗರದಲ್ಲಿ ನಡೆಯಿತು.
ಕೃತಿಯನ್ನು ಕೃಷಿ-ಪರಿಸರ ತಜ್ಞ ಪ್ರೊಫೆಸರ್ ಆಂಡ್ರಿಯಾಸ್ ಬ್ಯುರ್ಕತ್ ಮಾತನಾಡಿ, "ಕೆ.ಎನ್ ಗಣೇಶಯ್ಯ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಅಪಾರವಾದ ಕೆಲಸವನ್ನು ಮಾಡಿದ್ದಾರೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಇವರ ಕೃತಿಗಳು ಬಹು ಮುಖ್ಯ ಹಾಗೂ ಬಹಳ ಅಪರೂಪವಾಗಿದೆ," ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಶ್ರಾಂತ ಕುಲಪತಿ, ಹಿರಿಯ ವಿದ್ವಾಂಸ ಮಲ್ಲೇಪುರಂ ಜಿ ವೆಂಕಟೇಶ್ ಮಾತನಾಡಿ, "ಭಾರತದ ಪ್ರಸಕ್ತ ಲೇಖಕರಲ್ಲಿ ಪ್ರಾಚೀನ ಭಾರತ, ಮಧ್ಯಕಾಲೀನ ಭಾರತ ಹಾಗೂ ಅದರ ಚರಿತ್ರೆ, ಮಾನವ ಸಹಜ ಸ್ವಭಾವಗಳು, ಹಾಗೂ ಆ ಕಾಲದಲ್ಲಿ ನಡೆದ ಘಟನೆಗಳ ಬಗ್ಗೆ ತಲಸ್ಪರ್ಶಿಯವಾಗಿ ಅಧ್ಯಯನಗೈದು ಬರೆಯುತ್ತಿರುವ ಕಾದಂಬರಿಕಾರ ಕೆ.ಎನ್ ಗಣೇಶಯ್ಯ. ಕಾಲ್ಪನಿಕವಾಗಿ ಒಂದು ಕಾದಂಬರಿಯ ಚರಿತ್ರೆಯನ್ನ ಕಟ್ಟುವುದು ಬೇರೆ. ಇಲ್ಲಿ ಭಿನ್ನ ಮೂಲಗಳಿಂದ ಕಾದಂಬರಿಯ ವಸ್ತುವನ್ನು ಶೋಧಿಸಿ ಕಾದಂಬರಿ ಕಟ್ಟುವ ಕಲೆ ಅವರ ಶ್ರಮವನ್ನು ತೋರಿಸುತ್ತದೆ. ಈ ವಿಚಾರದಲ್ಲಿ ಭೈರಪ್ಪನವರನ್ನು ಬಿಟ್ಟರೇ ಕೆ.ಎನ್ ಗಣೇಶಯ್ಯ ಅವರೇ ಎರಡನೇಯವರು. ಬರವಣಿಗೆಗಾಗಿ ಅವರು ಮಾಡುವ ಯಾತ್ರೆ, ತಪ್ಪಸ್ಸು, ವಿಚಾರಗಳನ್ನು ಕ್ರೋಢಿಕರಿಸುವ ರೀತಿಯೇ ವಿಶಿಷ್ಟ. ಇದು ಸೃಜನಶೀಲತೆಯ ಪರಿಪಾಠವು ಹೌದು," ಎಂದು ತಿಳಿಸಿದರು.
"ನಂತರದಲ್ಲಿ ಶಾಕ್ಯಶಕ್ತ ಶಿಲ್ಪ ಕೃತಿಯ ಕುರಿತು ಮಾತನಾಡುತ್ತಾ, ಶಾಕ್ಯಶಕ್ತ ಶಿಲ್ಪ ಕೃತಿಯ ಕಥನ ಶುರುವಾಗುವುದೇ 11ನೇಯ ಶತಮಾನದಿಂದ. ಇಲ್ಲಿ ಕಥೆಯ ಸ್ವಗತವೇ ಬುದ್ಧನ ಪೆಟ್ಟಿಗೆ. ಮುಂದುವರಿದಂತೆ ಪುರಾತನ ಕಥನ, ಐತಿಹಾಸಿಕ ಪರಂಪರೆಯ ಹಾಗೂ ಚಾರಿತ್ರಿಕ ಕಥನದ ನೆಲೆಯಲ್ಲಿ ಕಾದಂಬರಿಯ ಕಥಾ ವಸ್ತು ಸಾಗುತ್ತದೆ. ಒಟ್ಟಾರೆಯಾಗಿ ಈ ಕಾದಂಬರಿಯನ್ನು ಓದುವುದೇ ಒಂದು ಸುಃಖ. ಅದು ಅಂತರ್ ಸುಖವೂ ಆಗಿರಬಹುದು ಅಥವಾ ಬಾಹ್ಯ ಸುಖವೂ ಆಗಿರಬಹುದು," ಎಂದು ಹೇಳಿದರು.
ಪತ್ರಕರ್ತ, ಬರಹಗಾರ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಮಾತನಾಡಿ, "ಒಬ್ಬ ಲೇಖಕನನ್ನು ಓದುವುದು ಎಂದರೆ ಆತನ ಎಲ್ಲಾ ಕೃತಿಗಳನ್ನು ಓದುವುದು ಎಂದರ್ಥ. ಒಂದರ ಕೊಂಡಿಯಾಗಿ ಇನ್ನೊಂದು ಕೃತಿಯೂ ಹುಟ್ಟುವುದರಿಂದ ಲೇಖಕನ ಮನಸ್ಸಿನ ಆಲೋಚನೆ, ಬೆಳವಣಿಗೆ ಹಾಗೂ ಬದಲಾವಣೆಯನ್ನು ಸ್ತೂಲವಾಗಿ ಗಮನಿಸಬಹುದು. ಮುಖ್ಯವಾಗಿ ಇವರು ಸಾಕ್ಷ್ಯ ಹಾಗೂ ಆಧಾರಗಳಿಲ್ಲದೇ ಯಾವುದೇ ಕೃತಿಯನ್ನು ಬರೆಯುವುದಿಲ್ಲ. ಕೃತಿಯಲ್ಲಿ ಸಾಕ್ಷ್ಯಧಾರಗಳ ಜೊತೆಗೆ ಅವರದ್ದೇ ಆದ್ದಂತಹ ಪಠ್ಯ ಕ್ರಮ ಮತ್ತು ಆಲೋಚನೆಯನ್ನು ಕೂಡ ಮಿಳಿತಗೊಳಿಸುತ್ತಾರೆ," ಎಂದರು.
"ಇವರ ʻಮನೋಗಮʼ ಪ್ರಜ್ಞೆ ಮತ್ತು ಮನಸ್ಸುಗಳ ಕುರಿತ ಟಿಪ್ಫಣಿಯನ್ನು ಒಳಗೊಂಡಿದೆ. 15 ಲೇಖನಗಳು ಕೂಡ ಮನಸ್ಸಿನ ಲೋಕವ್ಯಾಪಾರವನ್ನು ಹೇಳುವುದರ ಜೊತೆಗೆ ಹಿಂದಿನ ಲೇಖನಗಳಿಗೆ ಈ ಲೇಖನಗಳು ಪೂರಕವಾಗಿದೆ. ʻವಲಯ ಕಲಹʼ ಕೃತಿಯು ಇವರ ಕಾದಂಬರಿಗಳ ಸಜನಶೀಲತೆಯ ಎಳೆಯನ್ನು ಇಟ್ಟುಕೊಂಡು ಹುಟ್ಟಿಕೊಂಡ ಕೃತಿ. ಇಲ್ಲಿ ಅನುಭವ ಹಾಗೂ ವೈಜ್ಞಾನಿಕ ಕತೆಗಳನ್ನು ಹೇಳುವ ಪರಿ ಭಿನ್ನವಾಗಿದ್ದು, ಎಲ್ಲಿಯೂ ಭಯದ ವಾತಾವರಣ ಸೃಷ್ಟಿಸುದಿಲ್ಲ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಲೇಖಕ ಡಾ. ಕೆ. ಎನ್. ಗಣೇಶಯ್ಯ ಅವರು ಉಪಸ್ಥಿತರಿದ್ದರು. ಅಂಕಿತ ಪುಸ್ತಕ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಲು ಈ ಕೊಂಡಿಯನ್ನು ಬಳಸಿ..
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.