ಬಾನು ಮುಷ್ತಾಕ್ ಅವರ ಕೃತಿಯ ಅನುವಾದಕ್ಕೆ 'ದೀಪಾ ಬಸ್ತಿ' ಅವರಿಗೆ ಪ್ರತಿಷ್ಠಿತ `ಇಂಗ್ಲಿಷ್ ಪೆನ್' ಪ್ರಶಸ್ತಿ

Date: 18-07-2024

Location: ಬೆಂಗಳೂರು


ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ 'ಹಸೀನಾ ಮತ್ತು ಇತರ ಕತೆಗಳು' ಕಥಾ ಸಂಕಲನದ ಆಂಗ್ಲ ಅನುವಾದ ಪತ್ರಕರ್ತೆ, ಲೇಖಕಿ, ಅನುವಾದಕಿ ದೀಪಾ ಬಸ್ತಿ ಅವರ 'ಹಸೀನಾ ಅಂಡ್ ಅದರ್ ಸ್ಟೋರೀಸ್' ಕೃತಿಗೆ ಪ್ರತಿಷ್ಠಿತ 'ಇಂಗ್ಲಿಷ್ ಪೆನ್' ಪ್ರಶಸ್ತಿ ಪ್ರಕಟವಾಗಿದೆ.

ಹತ್ತು ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಗೊಂಡಿದ್ದ 16 ಕೃತಿಗಳಿಗೆ 2024ನೇ ಸಾಲಿನ ‘ಇಂಗ್ಲಿಷ್‌ ಪೆನ್‌’ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದೆ.

ಈ ಪೈಕಿ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಆವೃತ್ತಿಗೆ ಪ್ರಶಸ್ತಿ ಲಭಿಸಿದೆ. ಇದೇ ಮೊದಲ ಬಾರಿ ಕನ್ನಡದಿಂದ ಇಂಗ್ಲಿಷ್ ಗೆ ಅನುವಾದವಾದ ಕೃತಿಯೊಂದಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ ಎಂದು 'ಇಂಗ್ಲಿಷ್ ಪೆನ್' ಪ್ರಕಟಣೆ ತಿಳಿಸಿದೆ.

ಕೃತಿ ಕುರಿತು ಪೆನ್ ಪ್ರಶಸ್ತಿ ಸಮಿತಿ, "ಬಾನು ಮುಷ್ತಾಕ್ ಅವರು ಸಮಕಾಲೀನ ಮಹಿಳೆಯರು ಎದುರಿಸುವ ವಾಸ್ತವಗಳನ್ನು ಅಪರೂಪದ ಪ್ರತಿಭೆ ಹಾಗು ಕಲೆಯ ಮೂಲಕ ಅನಾವರಣಗೊಳಿಸಿದ್ದಾರೆ. ಅವರ ಕೃತಿಯಲ್ಲಿನ ಧ್ವನಿ, ಸಂದರ್ಭಗಳು ಹಾಗು ಅನುಭವವನ್ನು ದೀಪಾ ಬಸ್ತಿ ಅವರ ಅತ್ಯುತ್ತಮ ಅನುವಾದ ಕೃತಿಯು ಭಾರತ ಹಾಗು ಜಾಗತಿಕ ಇಂಗ್ಲಿಷ್ ಓದುಗರಿಗೆ ತಲುಪಿಸಿದೆ," ಎಂದು ಹೇಳಿದೆ.

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...